ಕರ್ನಿರೆ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

ಕಿನ್ನಿಗೋಳಿ : ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ ಬಿಸಿಯೂಟ, ಸೈಕಲ್ ಮತ್ತಿತರ ಸವಲತ್ತುಗಳನ್ನು ನೀಡಿದರೂ ಶಿಕ್ಷಣದ ವಿಷಯದಲ್ಲಿ ಮಾತ್ರ ಮುಂದಾಲೋಚನೆ ಮಾಡುತ್ತಿಲ್ಲ. ಶಿಕ್ಷಕರ ವರ್ಗಾವಣೆ ನೆಪದಿಂದ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ನೈತಿಕ ಬೆಂಬಲ ನೀಡದಿರುವುದು ವಿಪರ್ಯಾಸ ಎಂದು ಸಮಾಜ ಸೇವಕ ಕರ್ನಿರೆ ಹರಿಶ್ಚಂದ್ರ ಶೆಟ್ಟಿ ಹೇಳಿದರು.
ಕರ್ನಿರೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ವರ್ಗಾವಣೆ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನರು ಸರಕಾರಿ ಶಾಲೆಗಳನ್ನೇ ಅವಲಂಬಿಸಿದ್ದಾರೆ ಕರ್ನಿರೆ ಶಾಲೆಯಲ್ಲಿ 1ರಿಂದ 8ನೇ ತರಗತಿಯ ವರೆಗೆ 67 ವಿದ್ಯಾರ್ಥಿಗಳಿದ್ದು, ಪ್ರಸ್ತುತ 5 ಶಿಕ್ಷಕರಿದ್ದು ಒಬ್ಬರು ಮುಖ್ಯ ಶಿಕ್ಷಕಿ, ಒಬ್ಬರು 8ನೇ ತರಗತಿಗೆ ನಿಯುಕ್ತಿ ಗೊಂಡಿದ್ದು 3 ಮಂದಿ ಸಹಶಿಕ್ಷಕರಿದ್ದಾರೆ. ಅದರಲ್ಲಿ ಒಬ್ಬರು ಹೆಚ್ಚುವರಿ ಶಿಕ್ಷಕಿಯಾಗಿ ವರ್ಗಾವಣೆಗೊಳ್ಳಲಿದ್ದು ಅಲ್ಲದೆ ಸದ್ಯದಲ್ಲಿಯೇ ಮುಖ್ಯ ಶಿಕ್ಷಕಿ ನಿವೃತ್ತಿ ಗೊಳ್ಳಲಿದ್ದು 1 ರಿಂದ 7ನೇ ವರೆಗೆ ಕೇವಲ 2 ಮಂದಿ ಶಿಕ್ಷಕರು ಆಗಲಿದ್ದಾರೆ. ಸರಕಾರದ ಈ ಅವೈಜ್ಞಾನಿಕ ನೀತಿಯಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಬೀಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಎಂದು ಮಾಧ್ಯಮದವರ ಎದುರು ಗದ್ಗದಿತರಾಗಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ವಿಶಾಲಾಕ್ಷಿ ಹಾಗೂ ಆಶಾ ತಮ್ಮ ಇಬ್ಬಿಬ್ಬರು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿ ಅಲವತ್ತುಕೊಂಡರು.
ಈ ಸಂದರ್ಭ ವಿದ್ಯಾರ್ಥಿಗಳ ಪೋಷಕರು ಶಿಕ್ಷಕರ ವರ್ಗಾವಣೆ ಮಾಡದಂತೆ, ಶಿಕ್ಷಕರ ಮೂಲಕ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರು.
ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯೆ ರಶ್ಮಿ ಆಚಾರ್ಯ, ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್,
ಪಮಚಾಯಿತಿ ಸದಸ್ಯ ಪ್ರಬಾಕರ ಶೆಟ್ಟಿ ಕರ್ನಿರೆ, ಕರ್ನಿರೆ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಹಾಜಿ ಸಯ್ಯದ್ ಕರ್ನಿರೆ, ರವೀಂದ್ರ ಶೆಟ್ಟಿ ಕರ್ನಿರೆ, ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-030816012

Comments

comments

Comments are closed.

Read previous post:
Kinnigoli-03081606
12 ಇಂಟರಾಕ್ಟ್ ಸಂಸ್ಥೆಗಳ ಪದಗ್ರಹಣ

ಕಿನ್ನಿಗೋಳಿ : ಅತಿಯಾದ ಆತ್ಮವಿಶ್ವಾಸ, ಸೋಮಾರಿತನ ಸಲ್ಲದು ಸಂಘಟನಾ ಶಕ್ತಿ ಹಾಗೂ ಇಷ್ಟಪಟ್ಟು ಕೆಲಸ ಕಾರ್ಯ ಮಾಡುವುದರಿಂದ ನಿರ್ದಿಷ್ಟ ಗುರಿ ತಲುಪಬಹುದು. ಶಾಲಾ ಹಂತದಲ್ಲಿಯೇ ಮಕ್ಕಳು ನಾಯಕತ್ವ ಮತ್ತು...

Close