ಕಟೀಲು ಗ್ರಾ.ಪಂ.ಸಭೆ

ಕಟೀಲು : ಕಟೀಲು ಗ್ರಾಮ ಪಂಚಾಯಿತಿ 2016-17 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ ಅವರ ಅಧ್ಯಕ್ಷತೆಯಲ್ಲಿ ಕಟೀಲು ದೇವಳದಸರಸ್ವತೀ ಸದನದಲ್ಲಿ ಮಂಗಳವಾರ ನಡೆಯಿತು
ಕಟೀಲು ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ವರ್ಷಗಳಿಂದ ಪರವಾನಿಗೆ ಇಲ್ಲದೆ ಅಂಗಡಿಗಳು ಕಾರ್ಯಾಚರಿಸುತ್ತಿದೆ. ಅಂಗಡಿಗಳ ಏಲಂ ಕೂಡಾ ಆಗದೆ ಹಲವು ವರ್ಷಗಳಾಗಿದೆ. ಒಳ ಬಾಡಿಗೆಗೆ ಕೆಲವು ಅಂಗಡಿಗಳು ನೀಡಿರುವ ಗುಮಾನಿ ಇದೆ. ಅಂಗಡಿಗಳನ್ನು ಏಲಂ ಮಾಡಿ ಮತ್ತು ನಡೆಸಿ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ ಅಧಿಕೃತ ಅಂಗಡಿಗಳಿಗೆ ಮಾತ್ರ ವ್ಯಾಪಾರ ಮಾಡಲು ಆಸ್ಪದ ನೀಡಬೇಕು ಎಂದು ಕಟೀಲು ಗ್ರಾಮಸ್ಥರು ಪಂಚಾಯಿತಿ ಆಡಳಿತಕ್ಕೆ ಆಗ್ರಹಿಸಿದರು

ಕೆಲವು ಅಂಗಡಿಗಳು ದೇವಳದ ಆಡಳಿತಕ್ಕೆ ಒಳಪಟ್ಟಿದೆ ಈ ಬಗ್ಗೆ ಈಗಾಗಲೇ ದೇವಳಕ್ಕೆ ವಿವರವಾಗಿ ಮನವಿ ನೀಡಲಾಗಿದೆ. ಎಂದು ಪಂಚಾಯಿತಿ ಆಡಳಿತ ತಿಳಿಸಿತು.

ಕಟೀಲು ಬಸ್ಸು ನಿಲ್ದಾಣದ ಹಿಂಬಾಗದಲ್ಲಿ ಇತ್ತಿಚೆಗೆ ಅಂಗಡಿಗಳ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಹೆಚ್ಚಿನ ಯಾತ್ರಿಕರು ಬಸ್ಸು ಪ್ರಯಾಣಿಕರು ಈ ಪರಿಸರದಲ್ಲಿ ಬಸ್ಸಿಗೆ ಕಾಯುತ್ತಿರುವುದರಿಂದ ಅಲ್ಲದೆ ಪರಿಸರವಿಡೀ ದುರ್ವಾಸನೆಯುಕ್ತ ವಾತಾವರಣ, ಸೊಳ್ಳೆ ಸೃಷ್ಠಿಯಾಗಿದೆ. ಅಲ್ಲದೆ ಮಲೇರಿಯಾ ಡೆಂಗ್ಯು ಮತ್ತಿತರ ರೋಗಗಳು ಹರಡುವ ಸಾದ್ಯತೆ ಬಹಳಷ್ಟಿದೆ. ಸ್ವಚ್ಛ ಕಟೀಲು ಮರೀಚಿಕೆಯಾಗಿದೆ. ಎಂದು ಗ್ರಾಮಸ್ಥ ಸಂಜೀವ ಮಡಿವಾಳ ಆರೋಪಿಸಿದರು. ಪಂಚಾಯಿತಿ ಪಿಡಿಒ ಪ್ರಕಾಶ್ ಬಿ. ಉತ್ತರಿಸಿ ಅದು ಖಾಸಗಿ ಸ್ಥಳವಾದ್ದರಿಂದ ಪಂಚಾಯಿತಿ ಏನೂ ಮಾಡಲು ಸಾಧ್ಯವಿಲ್ಲ ಈ ಬಗ್ಗೆ ಈಗಾಗಲೇ ನೋಟಿಸು ನೀಡಲಾಗಿದೆ ಎಂದರು.
ತ್ಯಾಜ್ಯವನ್ನು ನಂದಿನಿ ನದಿಯಲ್ಲಿ ಹಾಕುತ್ತಿದ್ದು ಪ್ರತೀ ಗ್ರಾಮ ಸಭೆಯಲ್ಲಿ ಕಟೀಲು ತ್ಯಾಜ್ಯದ ಬಗ್ಗೆ ಹೇಳಿ ಹೇಳಿ ಸಾಕಾಗಿ ಹೋಗಿದೆ ಯಾರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕಾಗಿದೆ. ಇಲ್ಲದಿದ್ದರೆ ದೇಶದಲ್ಲಿಯೇ ಪ್ರಸಿದ್ಧ ಯಾತ್ರ ಸ್ಥಳವಾದ ಕಟೀಲು ಬಗ್ಗೆ ಬೇರೆ ಊರು ರಾಜ್ಯದವರಿಗೆ ಕಟೀಲು ದೇವಳ ಹಾಗೂ ಪರಿಸರದ ಬಗ್ಗೆ ಅಸಹನೆ ಮೂಡಲಿದೆ ಎಂದು ಗ್ರಾಮಸ್ಥ ಈಶ್ವರ ಕಟೀಲು ಆಕ್ರೋಶ ವ್ಯಕ್ತಪಡಿಸಿದರು.

ಮುಲ್ಕಿ ಕಾರ್ನಾಡುವಿನಲ್ಲಿರುವ ರೈತ ಸಂಪರ್ಕ ಕೇಂದ್ರವನ್ನು ಕಿನ್ನಿಗೋಳಿಗೆ ಸ್ಥಳಾಂತರಿಸಬೇಕು ಅಥವಾ ಕಿನ್ನಿಗೋಳಿಯಲ್ಲಿ ಉಪಕಛೇರಿ ತೆರೆಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಕೃಷಿ ಉಪಕರಣಕ್ಕೆ ಅರ್ಜಿ ಗುಜರಾಯಿಸಿ ಒಂದು ವರ್ಷವಾದರೂ ಸಲಕರಣೆಗಳ ಪೂರೈಕೆ ಬಗ್ಗೆ ಯಾವುದೇ ಉತ್ತರ ಇಲಾಖೆಯಿಂದ ಬಂದಿಲ್ಲ ಕಾರಣ ಏನು ಎಂದು ಕೃಷಿಕ ಜಗನ್ನಾಥ ಶೆಟ್ಟಿ ಸಿತ್ಲಾ ಕಳವಳ ವ್ಯಕ್ತಪಡಿಸಿದರು.
ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜಾರು ಬಳಿ ಸುಸಜ್ಜಿತ ಶೌಚಾಲಯವಿದ್ದು ಸಾರ್ವಜನಿಕರ ಹಣ ಪೋಲಾಗಿದೆ. ಕೊಂಡೆಮೂಲದಲ್ಲಿ ಖಾಸಗಿ ರಸ್ತೆಗೆ ಪಂಚಾಯತಿ ವತಿಯಿಂದ ದುರಸ್ತಿ ಮಾಡಿರುವ ಬಗ್ಗೆ ಗ್ರಾಮಸ್ಥರು ತಕರಾರು ವ್ಯಕ್ತಪಡಿಸಿ ಪಂಚಾಯಿತಿ ರಸ್ತೆಯನ್ನಾಗಿ ಸ್ವಾಧೀನಪಡಿಸಿಕೊಳ್ಳಬೇಕೆಂದು ಆಗ್ರಹಿಸಿದರು. ಉಲ್ಲಂಜೆ ರಸ್ತೆಯ ಚರಂಡಿಗಳು ಮುಚ್ಚಿ ಹೋಗಿದ್ದು ಅದನ್ನು ಸರಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಸಹಾಯಕ ತೋಟಗಾರಿಕಾ ಇಲಾಖಾ ಅಧಿಕಾರಿ ಸುಕುಮಾರ ಹೆಗ್ಡೆ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಕಸ್ತೂರಿ ಪಂಜ, ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಕಟೀಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಪಂಚಾಯಿತಿ ಸದಸ್ಯರು ಹಾಗೂ ಇಲಾಖಾಧಿಕಾರಿಗಳು ಇದ್ದರು.

ಗ್ರಾಮಸಭೆ 11 ಗಂಟೆಗೆ ನಿಗದಿಯಾಗಿದ್ದರೂ ಗ್ರಾಮಸ್ಥರು ಬೆರಣಿಕೆಯಲ್ಲದ್ದರು. ಆ ಸಂದರ್ಭ ಅಲ್ಲಿದ್ದ ಗ್ರಾಮಸ್ಥರು ಗ್ರಾಮಸಭೆ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿಲ್ಲವೇ ಕಾರಣ ಏನು? ಗ್ರಾಮ ಸಭೆ ಮುಂದೂಡಿ ಎಂದು ಆಗ್ರಹಿಸಿದರು. ನೋಡಲ್ ಅಧಿಕಾರಿ ಮಧ್ಯ ಪ್ರವೇಶಿಸಿ ಗ್ರಾಮಸ್ಥರನ್ನು ಸಮಾಜಾಯಿಸಿ ಸಭೆ ನಡೆಸಲು ಅನುವು ಮಾಡಿಕೊಟ್ಟರು. ಅರ್ಧ ಗಂಟೆ ನಂತರ ಗ್ರಾಮಸ್ಥರು ಸಭೆಗೆ ಬರಲಾರಂಭಿಸಿದರು.

Kinnigoli-030816013

Comments

comments

Comments are closed.

Read previous post:
Kinnigoli-030816012
ಕರ್ನಿರೆ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

ಕಿನ್ನಿಗೋಳಿ : ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ ಬಿಸಿಯೂಟ, ಸೈಕಲ್ ಮತ್ತಿತರ ಸವಲತ್ತುಗಳನ್ನು ನೀಡಿದರೂ ಶಿಕ್ಷಣದ ವಿಷಯದಲ್ಲಿ ಮಾತ್ರ ಮುಂದಾಲೋಚನೆ ಮಾಡುತ್ತಿಲ್ಲ. ಶಿಕ್ಷಕರ ವರ್ಗಾವಣೆ ನೆಪದಿಂದ ಗ್ರಾಮೀಣ ಮಕ್ಕಳ...

Close