ಶಿಕ್ಷಕರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

ಕಿನ್ನಿಗೋಳಿ : ಸರಕಾರ ಹೊಸ ನೀತಿಯಂತೆ ವಿದ್ಯಾರ್ಥಿಗಳ ಅನುಪಾತದಂತೆ ತಕ್ಕ ಶಿಕ್ಷಕರನ್ನು ನೇಮಿಸುವ ಆದೇಶದಿಂದ ಹೆಚ್ಚುವರಿಯಾಗಿರುವ ಶಿಕ್ಷಕರನ್ನು ವರ್ಗಾಯಿಸಲು ಸರಕಾರ ಇಲಾಖೆ ಮುಂದಾಗಿರುವುದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೊಡೆತ ಬೀಳಲಿದೆ ಎಂದು ಕೆರೆಕಾಡು ಕೆರೆಕಾಡು ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಹೆತ್ತವರು ಹಾಗೂ ಪೋಷಕರು ಶನಿವಾರ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರಸ್ತುತ ಕೆರೆಕಾಡು ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಮಂದಿ ಶಿಕ್ಷಕರಿದ್ದು, ಸದ್ಯದಲ್ಲಿಯೇ ಒಬ್ಬರು ವರ್ಗಾವಣೆಯಾದರೆ ಮುಂದಿನ ವರ್ಷ ಒರ್ವ ಶಿಕ್ಷಕ ನಿವೃತ್ತರಾಗಲಿದ್ದಾರೆ ಹೀಗಾದರೆ ಕೇವಲ ಇಬ್ಬರು ಶಿಕ್ಷಕರು ಕಾರ್ಯ ನಿರ್ವಹಿಸುವ ಪರಿಸ್ಥಿತಿ ಬರುತ್ತದೆ. ಕನ್ನಡ ಶಾಲೆಗಳ ಉಳಿವಿಗಾಗಿ ಪ್ರಯತ್ನಿಸದೆ ಇಂತಹ ಕ್ರಮ ಕೈಗೊಂಡು ಬಡ ವರ್ಗದ ಪೋಷಕರಿಗೆ ಕಡಿಮೆ ವೆಚ್ಚದ ಉತ್ತಮ ಶಿಕ್ಷಣವನ್ನು ಸಿಗದಂತೆ ಮಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳ ಉದ್ದಾರಕ್ಕೆ ಹೊರಟಿರುವುದು ವಿಪರ್ಯಾಸ ಎಂದು ಪೋಷಕರು ತಮ್ಮ ಅಳಲು ತೋಡಿಕೊಮಡಿದ್ದಾರೆ.
ಜಿ. ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಪಡುಪಣಂಬೂರು ಗ್ರಾ. ಪಂ. ಅಧ್ಯಕ್ಷ ಮೋಹನ್ , ಉಪಾಧ್ಯಕ್ಷೆ ಸುರೇಖಾ ಕರುಣಾಕರ್, ಸದಸ್ಯರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೇಮಚಂದ್ರ, ಉಪಾಧ್ಯಕ್ಷೆ ಸಂಜನಾ ನಾಗರಾಜ ಭಟ್, ಗ್ರಾಮಸ್ಥರಾದ ಟಿ. ಎನ್ . ರವೀಂದ್ರನ್, ಗೀತಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-03081605

Comments

comments

Comments are closed.

Read previous post:
Kinnigoli-03081604
ಆಷಾಡ ಮಾಸದ ಆಚರಣೆಯಲ್ಲಿ ವೈಜ್ಞಾನಿಕ ತತ್ವ

ಕಿನ್ನಿಗೋಳಿ : ಆಷಾಡ ಮಾಸದ ಆಚರಣೆಗಳು ಕೇವಲ ಮೂಡನಂಬಿಕೆಯಾಗಿರದೆ ಆರೋಗ್ಯಕ್ಕೆ ಕ್ಷೇಮ ಬಯಸುವ ವೈಜ್ಞಾನಿಕತೆಯ ತತ್ವ ಅಡಗಿದೆ ಎಂದು ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು. ಯುಗಪುರುಷ ಸಭಾಭವನದಲ್ಲಿ...

Close