12 ಇಂಟರಾಕ್ಟ್ ಸಂಸ್ಥೆಗಳ ಪದಗ್ರಹಣ

ಕಿನ್ನಿಗೋಳಿ : ಅತಿಯಾದ ಆತ್ಮವಿಶ್ವಾಸ, ಸೋಮಾರಿತನ ಸಲ್ಲದು ಸಂಘಟನಾ ಶಕ್ತಿ ಹಾಗೂ ಇಷ್ಟಪಟ್ಟು ಕೆಲಸ ಕಾರ್ಯ ಮಾಡುವುದರಿಂದ ನಿರ್ದಿಷ್ಟ ಗುರಿ ತಲುಪಬಹುದು. ಶಾಲಾ ಹಂತದಲ್ಲಿಯೇ ಮಕ್ಕಳು ನಾಯಕತ್ವ ಮತ್ತು ಸಮಾಜ ಸೇವೆಯ ಗುಣಗಳನ್ನು ಮೈಗೂಡಿಸಿದರೆ ಭವಿಷ್ಯದಲ್ಲಿ ಸತ್ಪ್ರಜೆಯಾಗುತ್ತಾರೆ ಎಂದು ರೋಟರಿಜಿಲ್ಲೆ 3181 ವಲಯ 1ರ ಇಂಟರಾಕ್ಟ್ ಜಿಲ್ಲಾ ಉಪ ಸಭಾಪತಿ ಜೆ. ಜೆ ಪಿಂಟೋ ಹೇಳಿದರು.
ಕಿನ್ನಿಗೋಳಿ ರೋಟರಿ ರಜತಭವನದಲ್ಲಿ ಶನಿವಾರ ನಡೆದ ಕಿನ್ನಿಗೋಳಿ ರೋಟರಿ ಸಂಸ್ಥೆ ಪ್ರವರ್ತಿತ 12 ಇಂಟರಾಕ್ಟ್ ಸಂಸ್ಥೆಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಇಂಟರಾಕ್ಟ್ ಜಿಲ್ಲಾ ಸಭಾಪತಿ ರಾಜ ಪತ್ರಾವೊ ಇಂಟರ‍್ಯಾಕ್ಟ್ ಕ್ಲಬ್ ಬಗ್ಗೆ ಮಾಹಿತಿ ನೀಡಿದರು.
ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ರಮಾನಂದ ಪೂಜಾರಿ, ಇಂಟರ‍್ಯಾಕ್ಟ್‌ನ ನೂತನ ಅಧ್ಯಕ್ಷ, ಕಾರ್ಯದರ್ಶಿ, ಶಿಕ್ಷಕ ನಿರ್ದೇಶಕ ಹಾಗೂ ಪದಾಧಿಕಾರಿಗಳಿಗೆ ಅಧಿಕಾರ ಪ್ರಮಾಣ ವಚನ ಬೋಧಿಸಿದರು.
ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಆಕಾಶ್, ಕಟೀಲು ದೇವಳ ಪದವಿ ಪೂರ್ವ ಕಾಲೇಜಿನ ಅಂಕಿತ್ ಹೆಗ್ಡೆ, ಬಳ್ಕುಂಜೆ ಸಂತ ಫೌಲರ ಪ್ರೌಢಶಾಲೆಯ ಸಂಧ್ಯಾ, ಮುಂಡ್ಕೂರು ವಿದ್ಯಾವರ್ಧಕ ಪ್ರೌಢ ಶಾಲೆಯ ವೈಶಾಕ್, ಐಕಳ ಪೊಂಪೈ ಜ್ಯೂನಿಯರ್ ಕಾಲೇಜಿನ ಹೆವಿನ್ ಉಜ್ವಲ್ ವಾಸ್, ನಡುಗೋಡು ಸರಕಾರಿ ಪ್ರೌಢಶಾಲೆಯ ಸೌರಭ್, ಕೆಮ್ರಾಲ್ ಸರಕಾರಿ ಪ್ರೌಢಶಾಲೆಯ ರಿತೇಶ್, ಎಕ್ಕಾರು ಸರಕಾರಿ ಪ್ರೌಢಶಾಲೆಯ ಅನನ್ಯ, ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಯ ಶಂಕರಮ್ಮ, ಸೂರಿಂಜೆ ಹಿದಾಯತ್ ಆಂಗ್ಲ ಮಾಧ್ಯಮ ಶಾಲೆಯ ಝೈಫಾ, ಕಿನ್ನಿಗೋಳಿ ಮೇರಿವೆಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಲಿಶಾ ಡಿ. ಡಿಸೋಜ, ಕಟೀಲು ಪ್ರೌಢಶಾಲೆಯ ಲೋಹಿತ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ರೋಟರಿಜಿಲ್ಲೆ 3181 ವಲಯ 1ರ ಜಯರಾಮ್ ಪೂಂಜ, ಕಿನ್ನಿಗೋಳಿ ಇಂಟರಾಕ್ಟ್ ಸಭಾಪತಿ ರೊ. ಸಾಯಿನಾಥ್ ಶೆಟ್ಟಿ, ಕಿನ್ನಿಗೋಳಿ ರೋಟರಿ ಕಾರ್ಯದರ್ಶಿ ರೊ. ದೇವಿದಾಸ್ ಶೆಟ್ಟಿ ಉಪಸ್ಥಿತರಿದ್ದರು.

Kinnigoli-03081606

Comments

comments

Comments are closed.

Read previous post:
Kinnigoli-03081605
ಶಿಕ್ಷಕರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

ಕಿನ್ನಿಗೋಳಿ : ಸರಕಾರ ಹೊಸ ನೀತಿಯಂತೆ ವಿದ್ಯಾರ್ಥಿಗಳ ಅನುಪಾತದಂತೆ ತಕ್ಕ ಶಿಕ್ಷಕರನ್ನು ನೇಮಿಸುವ ಆದೇಶದಿಂದ ಹೆಚ್ಚುವರಿಯಾಗಿರುವ ಶಿಕ್ಷಕರನ್ನು ವರ್ಗಾಯಿಸಲು ಸರಕಾರ ಇಲಾಖೆ ಮುಂದಾಗಿರುವುದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೊಡೆತ ಬೀಳಲಿದೆ...

Close