ಆಷಾಡ ಮಾಸದ ಆಚರಣೆಯಲ್ಲಿ ವೈಜ್ಞಾನಿಕ ತತ್ವ

ಕಿನ್ನಿಗೋಳಿ : ಆಷಾಡ ಮಾಸದ ಆಚರಣೆಗಳು ಕೇವಲ ಮೂಡನಂಬಿಕೆಯಾಗಿರದೆ ಆರೋಗ್ಯಕ್ಕೆ ಕ್ಷೇಮ ಬಯಸುವ ವೈಜ್ಞಾನಿಕತೆಯ ತತ್ವ ಅಡಗಿದೆ ಎಂದು ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ಲಯನ್ಸ್ , ಲಯನೆಸ್ ಕ್ಲಬ್ ಆಶ್ರಯದಲ್ಲಿ ಶುಕ್ರವಾರ ನಡೆದ ಆಟಿದ ನೆಂಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಏಳಿಂಜೆಯ ಲಕ್ಷಣ ಪೂಜಾರಿ ಅವರಿಗೆ ಮನೆ ಕಟ್ಟಲು ಧನ ಸಹಾಯ ನೀಡಲಾಯಿತು. ಲಯನ್ಸ್ ಅಧ್ಯಕ್ಷ ವೈ ಯೋಗೀಶ್ ರಾವ್ ಲಯನ್ಸ್ ಆಶ್ರಯದಲ್ಲಿ ನಡೆದ ಜರ್ಮನ್ ಪ್ರವಾಸ ಕಥನದ ಬಗ್ಗೆ ಮಾಹಿತಿ ನೀಡಿದರು. ಮೋಹನಾದಾಸ್ ಶೆಟ್ಟಿ ಲಯನ್ಸ್ ಹೊಸ ಸದಸ್ಯರಿಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವರದಿ ವಾಚಿಸಿ ಲಯನ್ಸ್ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು. ನಿಕಟಪೂರ್ವ ಅಧ್ಯಕ್ಷ ಸುಧಾಕರ ಶೆಟ್ಟಿ , ಕೋಶಾಧಿಕಾರಿ ಭುಜಂಗ ಬಂಜನ್ ಮತ್ತಿತರರು ಉಪಸ್ಥಿತರಿದ್ದರು.
ಆಟಿಯ ಆಟಿ ಕಳಂಜ ನೃತ್ಯ ಹಾಗೂ ಲಕ್ಷಣ ಪೂಜಾರಿ ಸಿರಿಯ ಪಾಡ್ಡನಗಳನ್ನು ಹೇಳಿದರು.

Kinnigoli-03081604

Comments

comments

Comments are closed.

Read previous post:
Kinnigoli-03081603
ಪಠ್ಯೇತರ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ

ಕಿನ್ನಿಗೋಳಿ : ಕೇವಲ ಅಂಕ ಗಳಿಕೆಯ ಉದ್ದೇಶವಿಟ್ಟುಕೊಳ್ಳದೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು....

Close