ಸಂಘದ ಲಾಭಾಂಶ ರೈತರಿಗೆ ಒದಗಿಸಿ

ಮೂಲ್ಕಿ: ಅತಿಕಾರಿಬೆಟ್ಟು ಹಾಲು ಉತ್ಪಾದಕ ಸಹಕಾರಿ ಸಂಘದ ವಾರ್ಷಿಕ ಸಭೆಯು ನಡೆಯಿತು. ಸಭೆಯಲ್ಲಿ ಮಾತನಾಡಿದ ಸಂಘದ ಸದಸ್ಯರು ರೈತರ ಸಂಕಷ್ಟವನ್ನು ಪರಿಹರಿಸುವುದರ ಜೊತೆಗೆ ಸಂಘದ ಲಾಭಾಂಶವನ್ನು ಸದಸ್ಯರಿಗೆ ಒದಗಿಸುವಂತೆ ಒಕ್ಕೊರೊಲಿನಲ್ಲಿ ಒತ್ತಾಯಿಸಿದರು.

ಅತಿಕಾರಿಬೆಟ್ಟು ಹಾಲು ಉತ್ಪಾದಕ ಸೊಸೈಟಿಯಲ್ಲಿರುವ ಪಶು ಆಹಾರದಲ್ಲಿ ಕಲಬೆರಕೆ ಇದೆ ಇದರಿಂದ ಕೃತಕಗರ್ಭದಾರಣೆಗೆ ತೊಂದರೆಯಾಗುತ್ತಿದೆ ಎಂದು ಸದಸ್ಯ ಜಯ ಬಾನೊಟ್ಟು ಅಸಮಾದಾನ ವ್ಯಕ್ತಪಡಿಸಿದರು. ಸೊಸೈಟಿಗೆ ಹಾಲು ಹಾಕುವ ಹಣವನ್ನು ಸದಸ್ಯರ ಬ್ಯಾಂಕು ಖಾತೆಗೆ ಜಮಾ ಮಾಡುವ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ ಸುಧಾಕರ ಮಾನಂಪಾಡಿ ಇದರಿಂದ ಹಾಲು ಉತ್ಪನ್ನಗಳನ್ನು ಸಕಾಲದಲ್ಲಿ ಕೊಂಡುಕೊಳ್ಳಲು ತೊಂದರೆಯಾಗುತ್ತಿದೆ ಎಂದು ದೂರಿದರು.ಇದಕ್ಕೆ ಉತ್ತರಿಸಿದ ಸೊಸೈಟಿಯ ಅಧ್ಯಕ್ಷ ಗಂಗಾಧರ ಶೆಟ್ಟಿ ಕೆಲ ಸೊಸೈಟಿಯಲ್ಲಿ ಹಣದ ಬಗ್ಗೆ ಅವ್ಯವಹಾರ ನಡೆದಿದ್ದು ಪಾರದರ್ಶಕ ವ್ಯವಸ್ಥೆ ನಿಟ್ಟಿನಲ್ಲಿ ಸರಕಾರದ ನೀತಿ ನಿಯಮಾವಳಿ ಪ್ರಕಾರ ಕ್ರಮಕೈಗೊಳ್ಳಲಾಗಿದೆ ಎಂದು ಸ್ಫಷ್ಟನೆ ನೀಡಿದರು.ಸಂಘದ ಸಭೆಯಲ್ಲಿ ನಿವ್ವಳ ಲಾಭ ಹಾಗೂ ವಿತರಣೆ ಹಾಗೂ ಸಂಘದ ಆಯವ್ಯಯವನ್ನು ಮಂಡಿಸಲಾಯಿತು.

2015-16ನೇ ಸಾಲಿನಲ್ಲಿ ಸೊಸೈಟಿಗೆ ಅತೀ ಹೆಚ್ಚು ಹಾಲು ಹಾಕಿದ ಸದಸ್ಯರನ್ನು ಸನ್ಮಾನಿಸಲಾಯಿತು. ಕಳೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾದನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ದಕ್ಷಿಣಕನ್ನಡ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ  ಮಾಲತಿ ಮಾತನಾಡಿ ಸದಸ್ಯರೆಲ್ಲರೂ ಒಟ್ಟಾಗಿ ಪಾರದರ್ಶಕ ಆಡಳಿತದಿಂದ ಸೊಸೈಟಿ ಉಳಿಸಲು ಪ್ರಯತ್ನ ಮಾಡಿ ಎಂದು ಕರೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಗಂಗಾಧರ ಸೆಟ್ಟಿ ಬರ್ಕೆತೋಟ ವಹಿಸಿದ್ದರು.

ಸಂಘದ ಉಪಾಧ್ಯಕ್ಷ ಕೃಷ್ಣ ಆರ್ ಶೆಟ್ಟಿ,  ನಿರ್ದೇಶಕ ಸಂಜೀವ ಕೋಟ್ಯಾನ್, ರತ್ನಾಕರ ಶೆಟ್ಟಿ, ಹರೀಶ್ ಶೆಟ್ಟಿ, ರತ್ನವರ್ಮ ಶೆಟ್ಟಿ, ಗಂಗಾಧರ ದೇವಾಡಿಗ, ಪ್ರೇಮಾ ಬಂಗೇರಾ, ಹೇಮಂತ ಶೆಟ್ಟಿ, ಜಾನಕಿ ಬಾಯಿ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು, ಸಂಘದ ಸಿಬ್ಬಂದಿ ವೆಂಕಟೇಶ ಸ್ವಾಗತಿಸಿದರು. ನಿರ್ದೇಶಕ ರತ್ನಾಕರ ಶೆಟ್ಟಿ ದನ್ಯವಾದ ಅರ್ಪಿಸಿದರುಕಾರ‍್ಯ ನಿರ್ವಹಣಾಧಿಕಾರಿ ಕಿಶೋರ್ ಎಸ್ ಕಾರ‍್ಯಕ್ರಮ ನಿರೂಪಿಸಿದರು.

Mulki-0208201601

Comments

comments

Comments are closed.

Read previous post:
Kinnigoli-030816013
ಕಟೀಲು ಗ್ರಾ.ಪಂ.ಸಭೆ

ಕಟೀಲು : ಕಟೀಲು ಗ್ರಾಮ ಪಂಚಾಯಿತಿ 2016-17 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ ಅವರ ಅಧ್ಯಕ್ಷತೆಯಲ್ಲಿ ಕಟೀಲು...

Close