ಹುತಾತ್ಮ ಯೋಧರಿಗೆ ನಮನ

ಮೂಲ್ಕಿ: ಯುವ ಸಮಾಜ ರಾಷ್ಟ್ರ ಭಕ್ತಿಯೊಂದಿಗೆ ಸ್ವಾಭಿಮಾನಿಗಳಾಗಿ ಸ್ವಾವಲಂಭಿಗಳಾಗುವತ್ತ ಬೆಳೆದಾಗ ಯುವ ಮಾನವ ಸಂಪ್ಮೂಲ ಭರಿತ ಬಲಿಷ್ಟ ಭಾರತ ದೇಶವು ವಿಶ್ವಮಾನ್ಯವಾಗಲು ಸಾಧ್ಯವಾಗಿಸುವಂತ ಧ್ಯೇಯ ನಾವು ಕಾರ್ಗಿಲ್ ಹುತಾತ್ಮರಿಗೆ ನೀಡುವ ಶೃದ್ದಾಂಜಲಿ ಎಂದು ವಾಘ್ಮಿ ಪ್ರಕಾಶ್ ಮಲ್ಪೆ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ವತಿಯಿಂದ ನಡೆದ ಕಾರ್ಗಿಲ್ ದಿನಾಚರಣೆಯ ಪ್ರಯುಕ್ತ ಹುತಾತ್ಮ ಯೋಧರಿಗೆ ನಮನ ಹಾಗೂ ವೀರ ಸೈನಿಕರಿಗೆ ಸನ್ಮಾನ ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದರು.
ವಿಶ್ವದಲ್ಲಿಯೇ ವಿಶೇಷ ಸಂಪನ್ಮೂಲ ಭರಿತ ಭಾರತವು ಯುವ ಮಾನವ ಸಂಪನ್ಮೂಲ ಹೊಂದಿದೆ. ಇಲ್ಲಿನ ದಾರ್ಶನಿಕರು ಹಾಗೂ ಸಮಾಜ ಸೇವಕರು ಸ್ವಾರ್ಥರಹಿತ ಸೇವೆಯ ಮೂಲಕ ಮನುಕುಲ ಉದ್ದರಿಸಿದ ಕಾರಣ ಅದೆಷ್ಟು ಬಾರಿ ಆಕ್ರಮಣಕ್ಕೀಡಾದರೂ ಭಾರತ ಸಂಸ್ಕೃತಿ ಸಂಸ್ಕಾರಗಳಿಂದ ವಿಮುಖವಾಗದೆ ಮುನ್ನಡೆದಿದೆ. ದೇಶದಲ್ಲಿ ಸಂಪನ್ಮೂಲದ ಕೊರತೆ ಇದ್ದರೂ ನಮ್ಮ ದೀರ ಸೈನಿಕರ ಕೆಚ್ಚೆದೆಯ ಹೋರಾಟದ ಪರಿಣಾಮ ಭಾರತ ಪ್ರತೀ ಹೆಜ್ಜೆಯಲ್ಲಿ ಗೆಲುವು ಸಾಧಿಸಿದೆ ರಾಜತಾಂತ್ರಿಕ ಹಿನ್ನಡೆ ಇದ್ದರೂ ಆಂತರಿಕ ಶತ್ರುಗಳ ಒಳಸಂಚು ಇರುವ ಈ ಕಾಲಘಟ್ಟದಲ್ಲಿಯೂ ಸೇನೆ ತನ್ನತನವನ್ನು ಬಿಟ್ಟುಕೊಡದೆ ಹೋರಾಡಲು ಸ್ವಾರ್ಥರಹಿತ ಸೇವೆ ನೀಡುವ ಸೈನಿಕರು ಮತ್ತು ಅವರ ಕುಟುಂಬದಿಂದ ಸಾಧ್ಯವಾಗಿದೆ ಈ ಬಗ್ಗೆ ಯುವ ಸಮಾಜ ಗಮನ ಹರಿಸಬೇಕು ಹಾಗೂ ದೇಶದ ಸೈನಿಕರಿಗೆ ಮತ್ತು ಅವರ ಕುಟುಂಬಿಕರಿಗೆ ಯಾವತ್ತೂ ಸಹಕಾರಿಗಳಾಗಿರಬೇಕು ದೇಶದ ಸೈನಿಕರ ವಿರುದ್ದ ಮಾತನಾಡು ಯಾವನೇ ಆದರು ಆತನನ್ನು ವಿರೋಧಿಸುವ ಕೆಚ್ಚೆದೆ ನಮ್ಮಲ್ಲಿ ಮೂಡಿದರೆ ಮಾತ್ರ ನಾವು ಭಾರತೀಯರೆನ್ನಲು ಸಾಧ್ಯ ಎಂದರು.
ಈ ಸಂದರ್ಭ ಕಾರ್ಗಿಲ್ ಯುದ್ದಲ್ಲಿ ಭಾಗಹಿಸಿದ ಸೇವಾನಿಗಳಾದ ಮಧುಕರ ಚಿತ್ರಾಪು ಮತ್ತು ರಾಜೇಶ್.ಜಿ.ಮೆಂಡನ್ ಹೆಜಮಾಡಿ ಕಾರ್ಗಿಲ್ ಯುದ್ದದ ತಮ್ಮ ಅನುಭವ ಹಾಗೂ ತಮ್ಮ ಸಂಗಾತಿಗಳನ್ನು ಕಳೆದುಕೊಂಡ ದುಖಃದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭ ಬಾಂಗ್ಲಾ ಯುದ್ದ, ಪಾಕ್ ಯುದ್ದದಲ್ಲಿ ಭಾಗಹಿಸಿದ ಕೆ.ಸಿ.ಕುಂದರ್ , ಕಾರ್ಗಿಲ್ ಯುದ್ದಲ್ಲಿ ಭಾಗಹಿಸಿದ ಸೇವಾನಿಗಳಾದ ಮಧುಕರ ಚಿತ್ರಾಪು ಮತ್ತು ರಾಜೇಶ್.ಜಿ.ಮೆಂಡನ್ ಹೆಜಮಾಡಿ ಯವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಭಾರತಮಾತೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಗಿಲ್ ಹುತಾತ್ಮ ವೀರ ಯೋಧರಿಗೆ ನಮನ ಸಲ್ಲಿಸಲಾಯಿತು.
ಕಾಲೇಜು ನಿಯೋಜಿತ ಪ್ರಾಂಶುಪಾಲ ಡಾ.ನಾರಾಯಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಅನಸೂಯಾ ಕರ್ಕೇರಾ,ಕಾಲೇಜು ವಿದ್ಯಾರ್ಥಿ ಸಂಘಗಳ ಅಧ್ಯಕ್ಷ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಉಮೇಶ್ ಸ್ವಾಗತಿಸಿದರು.ರೋಶ್ನಿ ವಂದಿಸಿದರು. ಕೀರ್ತನ್ ಸಾಲ್ಯಾನ್ ನಿರೂಪಿಸಿದರು.

Mulki-0208201602.

Comments

comments

Comments are closed.

Read previous post:
Mulki-0208201601
ಸಂಘದ ಲಾಭಾಂಶ ರೈತರಿಗೆ ಒದಗಿಸಿ

ಮೂಲ್ಕಿ: ಅತಿಕಾರಿಬೆಟ್ಟು ಹಾಲು ಉತ್ಪಾದಕ ಸಹಕಾರಿ ಸಂಘದ ವಾರ್ಷಿಕ ಸಭೆಯು ನಡೆಯಿತು. ಸಭೆಯಲ್ಲಿ ಮಾತನಾಡಿದ ಸಂಘದ ಸದಸ್ಯರು ರೈತರ ಸಂಕಷ್ಟವನ್ನು ಪರಿಹರಿಸುವುದರ ಜೊತೆಗೆ ಸಂಘದ ಲಾಭಾಂಶವನ್ನು ಸದಸ್ಯರಿಗೆ ಒದಗಿಸುವಂತೆ...

Close