ಗುತ್ತಕಾಡು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಕಿನ್ನಿಗೋಳಿ: ಗುತ್ತಕಾಡು ದ.ಕ. ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಶಾಲಾ ಶಿಕ್ಷಕರ ವರ್ಗಾವಣೆ ವಿರುದ್ಧ ಮಂಗಳವಾರ ವಿದ್ಯಾರ್ಥಿಗಳು, ಹೆತ್ತವರು ಹಾಗೂ ಪೋಷಕರು ಶಾಲಾ ಆವರಣದಲ್ಲಿ ಪ್ರತಿಭಟನೆ ಮಾಡಿದರು.

ಸರಕಾರದ ಸವಲತ್ತುಗಳಿದ್ದರೂ ಸ್ಥಳೀಯರು ಹಳೇವಿದ್ಯಾರ್ಥಿಗಳು ಎಲ್ಲಾ ಒಟ್ಟು ಸೇರಿ ಮಕ್ಕಳಿಗೆ ಬೇಕಾಗುವ ಸವಲತ್ತುಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡಿದ್ದಾರೆ. ಆದರೆ ಈಗ ಸರಕಾರದ ಹೊಸ ಆದೇಶ ಕಂಡು ಹೆತ್ತವರು ಪೋಷಕರು ಕಂಗಾಲಾಗಿದ್ದಾರೆ.
ಪ್ರಸ್ತುತ ಈ ಶಾಲೆಯಲ್ಲಿ 1 ರಿಂದ 8 ನೇ ತರಗತಿ ಇದ್ದು 72 ವಿದ್ಯಾರ್ಥಿಗಳಿದ್ದಾರೆ. 8 ನೇ ತರಗತಿಗೆ ಒಬ್ಬರು ಟಿ.ಜಿ.ಟಿ ಶಿಕ್ಷಕರು ಇದ್ದು 1 ಮುಖ್ಯ ಶಿಕ್ಷಕರಿದ್ದು, 1 ರಿಂದ 7 ನೇ ತರಗತಿಯವರೆಗೆ 3 ಶಿಕ್ಷಕರಿದ್ದಾರೆ. ಈಗ ಒಬ್ಬ ಶಿಕ್ಷಕರಿಗೆ ಹೆಚ್ಚುವರಿ ಶಿಕ್ಷಕ ವರ್ಗಾವಣೆ ಆದೇಶ ಬಂದಿದ್ದು ಕೇವಲ 2 ಸಹಶಿಕ್ಷಕರು ಹಾಗೂ ಒಟ್ಟು 4 ಮಂದಿ ಮಾತ್ರ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಬಂದೊದಗಿದೆ. ಕೆಲವು ಸರಕಾರಿ ಶಾಲೆಗಳಲ್ಲಿ 50ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದ ರೂ 4 ಶಿಕ್ಷಕರ ಹುದ್ದೆ ಇದೆ. ಆದರೆ ಇಂತಹ ಗ್ರಾಮೀಣ ಪರಿಸರದ ಶಾಲೆಗೆ ಏಕೆ ಇಂತಹ ತಾರತಮ್ಯ. ಹಾಗಾದಲ್ಲಿ ಕನ್ನಡ ಶಾಲೆಗಳನ್ನು ಸರಕಾರ ಉಳಿಸುವದು ಹಾಗೂ ಬಡ ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು ಕಷ್ಟ ಸಾಧ್ಯವಾಗಬಹುದು. ವಿದ್ಯಾರ್ಥಿಗಳ ಪೋಷಕರ ಅಭಿಪ್ರಾಯ.

ಶಾಲಾಭಿವೃದ್ಧಿ ಸಮಿತಿಯ ನಾರಾಯಣ ಪೂಜಾರಿ ಮಾತನಾಡಿ ಸರಕಾರ ಈ ಹೊಸ ಆದೇಶ ನೀಡಿದರೆ ಮಂದಿನ ವರ್ಷಗಳಲ್ಲಿ ಮಕ್ಕಳ ಹೆತ್ತವರು ಶಿಕ್ಷಕರ ಕೊರತೆ ಕಂಡು ಬೇರೆ ಶಾಲೆಗೆ ಸೇರಿಸುವ ಪ್ರಮೇಯ ಬಂದೊಗಬಹುದು. ಬಡ ಹೆತ್ತವರು ಸಾಲ ಸೋಲ ಮಾಡಿಯಾದರೂ ಇತರ ಖಾಸಗಿ ಶಾಲೆಗಳಿಗೆ ಸೇರಿಸುವ ನಿರ್ಧಾರ ತೆಗೆದುಕೊಳ್ಳಬಹುದು. ಆಗ ಸರಕಾರಿ ಶಾಲೆಗಳು ತನ್ನಿಂತಾನೇ ಮಕ್ಕಳ ಕೊರತೆ ಕಂಡು ಶಾಲೆ ಮುಚ್ಚುವ ಪರಿಸ್ಥಿತಿ ಖಂಡಿತಾ ಎಂದರು.
ಈ ಸಂದರ್ಭ ಶಾಲಾ ಸಮಿತಿಯ ವಿವೇಕಾನಂದ, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಸರಕಾರ ಗ್ರಾಮೀಣ ಶಾಲೆಗಳಿಗೆ ಪ್ರೋತ್ಸಾಹ ನೀಡಿ ಬಡ ವಿದ್ಯಾರ್ಥಿಗಳ ಜ್ಞಾನ ದಾಹವನ್ನು ನೀಗಿಸಬೇಕಾಗಿದೆ. ಸರಕಾರ ಗ್ರಾಮೀಣ ವಿದ್ಯಾರ್ಥಿಗಳಿಗೆ ಹಲವು ಸವಲತ್ತುಗಳು ನೀಡಿ ಮಕ್ಕಳ ಉತ್ತಮ ಶಿಕ್ಷಣಕ್ಕೆ ತಳಹದಿ ಹಾಕಿದೆ ಆದರೆ ಅನಿವಾರ್ಯವಾಗಿ ಮಕ್ಕಳು ಮನೆಪಾಠಕ್ಕಾಗಿ ಹಣ ಹೊಂದಿಸುವ ಅಥವಾ ಬೇರೆ ಶಾಲೆಗಳಿಗೆ ಎಡ ತಾಕುವ ಸಾಧ್ಯತೆ ಜಾಸ್ತಿಯಾಗಲಿದೆ. ಖಾಸಗಿ ಶಿಕ್ಷಣಗಳ ವ್ಯಾಪಾರೀಕರಣಕ್ಕಾಗಿ ಸರಕಾರವೇ ಪ್ರೋತ್ಸಾಹ ಕೊಟ್ಟಂತಾಗಿದೆ. ಈ ಹೊಸ ಆದೇಶದಿಂದ ಕನ್ನಡ ಶಾಲೆಗಳ ಅಳಿವು ಉಳಿವಿನ ಪ್ರಶ್ನೆಯಾಗಲಿದೆ.
ವಿನೋದ್ ಬೊಳ್ಳೂರು
ಜಿಲ್ಲಾ ಪಂಚಾಯಿತಿ ಸದಸ್ಯ

ಅರ್ಧದಷ್ಟು ಮಕ್ಕಳು ಪರಿಶಿಷ್ಟ ಜಾತಿ ಹಾಗೂ ಪಂಗಡದವರು

ಗ್ರಾಮೀಣ ಪ್ರದೇಶದ ಈ ಶಾಲೆಯಲ್ಲಿ ಸುಮಾರು ಅರ್ಧದಷ್ಟು (30) ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಕಲಿಯುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಕಲಿಯುವ ಹುಮ್ಮಸ್ಸು ಇದೆ ಆದರೆ ಕಲಿಸುವ ಶಿಕ್ಷಕರಿಲ್ಲ. ಮನೆಯವರಲ್ಲಿ ಪಾಠ ಕೇಳುವ ಅಂದರೆ ಮಕ್ಕಳ ಈಗಿನ ಶಿಕ್ಷಣ ಮಟ್ಟ ಹೆತ್ತವರ ಶಿಕ್ಷಣಕ್ಕಿಂತ ಕಠಿಣವಾಗಿದೆ. ಹಾಗಾಗಿ ಹೆತ್ತವರಿಗೆ ಮಕ್ಕಳ ಶಿಕ್ಷಣದ ಚಿಂತೆ ಹೆಚ್ಚಿದೆ. ಮನೆಪಾಠ ಕೊಡಿಸಲು ಹಾಗೂ ಖಾಸಗಿ ಶಾಲೆಯ ಫೀಸು ಕಟ್ಟಲು ಹಣದ ಅಭಾವ. ಹೀಗಾದರೆ ಬಡ ಮಕ್ಕಳು ಶಿಕ್ಷಣ ವಂಚಿತರಾಗುವುದು ಸಹಜ. ಎಲ್ಲಾ ರಾಜಕೀಯ ಪಕ್ಷಗಳು ಒಂದುಗೂಡಿ ಇಂತಹ ಗ್ರಾಮೀಣ ಪ್ರದೇಶಗಳ ಭವಿಷ್ಯಕ್ಕೆ ಉತ್ತಮ ಶಿಕ್ಷಣದ ಭರವಸೆ ಸವಲತ್ತುಗಳನ್ನು ನೀಡಬೇಕಾಗಿದೆ.

Kinnigoli-04081601

Comments

comments

Comments are closed.

Read previous post:
Mulki-0208201604
ಮೂಲ್ಕಿ: ಸುನಂದ ಯು. ಕರ್ಕೇರ ಆಯ್ಕೆ

ಮೂಲ್ಕಿ: ಶ್ರೀನಾರಾಯಣ ಗುರು ಮಹಿಳಾ ಮಂಡಳಿಯ 2016-17 ಸಾಲಿನ ಅಧ್ಯಕ್ಷರಾಗಿ ಸುನಂದ ಯು. ಕರ್ಕೇರ ಆಯ್ಕೆಯಾಗಿದ್ದಾರೆ. ಗೌರವಧ್ಯಕ್ಷರಾಗಿ ಸರೋಜಿನಿ ಸುವರ್ಣ, ಉಪಾಧ್ಯಕ್ಷರಾಗಿ ಅಂಬಾ, ಕಾರ್ಯದರ್ಶಿಯಾಗಿ ಆಶಾ.ವಿ ಅಮೀನ್,...

Close