ಕಲಿಕೆಯಲ್ಲಿ ನಿಷ್ಠೆ ಏಕಾಗ್ರತೆ ಸ್ವಾಭಿಮಾನವಿರಬೇಕು.

ಕಿನ್ನಿಗೋಳಿ: ಪಾಠಕ್ಕೆ ಮೊದಲು ಆದ್ಯತೆ ನೀಡಬೇಕು. ಗ್ರಹಿಕೆ, ಚಿಂತನೆ , ಶೋಧನೆ , ಭವಿಷ್ಯದ ಯೋಜನೆ ಯೋಚನೆಗಳನ್ನು ಮನಕೊಟ್ಟು ತಮ್ಮ ಜೀವನವನ್ನು ರೂಪಿಸಕೊಳ್ಳಬೇಕು. ಎಂದು ಉದಯವಾಣಿ ಮುಖ್ಯಸ್ಥ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಹೇಳಿದರು
ಕಟೀಲು ಪದವಿ ಕಾಲೇಜಿನಲ್ಲಿ ಗುರುವಾರ ನಡೆದ ವಿದ್ಯಾರ್ಥಿ ಸಂಘದ ಉಧ್ಘಾಟನೆ ನೆರವೇರಿಸಿ ಮಾತನಾಡಿದರು.
ಕಟೀಲು ದೇವಳ ಅನುವಂಶಿಕ ಮೊಕ್ತೇಸರ ಡಾ. ರವೀಂದ್ರನಾಥ ಪೂಂಜ ಅಧ್ಯಕ್ಷತೆ ವಹಿಸಿದ್ದರು.
ಕಟೀಲು ದೇವಳದ ಪ್ರಧಾನ ಅರ್ಚಕರಾದ ವಾಸುದೇವ ಆಸ್ರಣ್ಣ ಹಾಗೂ ಅನಂತ ಪದ್ಮನಾಭ ಆಸ್ರಣ್ಣ ಆಶೀರ್ವಚನಗೈದರು.
ಈ ಸಂದರ್ಭ ಸುಧೀರ್ ಶೆಟ್ಟಿ, ಡಾ. ಕೃಷ್ಣ ಕಾಂಚನ್, ವಿದ್ಯಾರ್ಥಿ ನಾಯಕ ಪ್ರಜ್ವಲ್ ನಾಯಕ್, ಕಾರ್ಯದರ್ಶಿ ಮಾನಿಷ್, ಉಪಕಾರ್ಯದರ್ಶಿ ವೈಷ್ಣವಿ ಆಸ್ರಣ್ಣ ಉಪಸ್ಥಿತರಿದ್ದರು.
ಕಟೀಲು ದೇವಳ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ಉಪನಾಯಕ ಮಾನಿಷ್ ಶೆಟ್ಟಿ ವಂದಿಸಿದರು. ಅನುಜ್ಞಾ ಭಟ್ ಕಾರ್ಯಕ್ರಮ ನಿರೂಪಿಸಿದರು.

ವೃತ್ತಿ ಜೀವನಕ್ಕೆ ಮೊಬೈಲ್ ಅನಿವಾರ್ಯ ಆದರೆ ವಿದ್ಯಾರ್ಥಿ ಜೀವನದಲ್ಲಿ ಅಪಾಯಕಾರಿ ಕಲಿಕೆಯಲ್ಲಿ ನಿಷ್ಠೆ ಏಕಾಗ್ರತೆ ಸ್ವಾಭಿಮಾನವಿರಬೇಕು. ಮನೋಬಲ ಮತ್ತು ಇಚ್ಛಾಶಕ್ತಿ ಬೆಳೆಸಬೇಕು ಗಳಿಕೆಯ ಸ್ವಲ್ಪ ಭಾಗ ಸಮಾಜದ ಅಭಿವೃದ್ಧಿ, ಬಡ ಬಗ್ಗರಿಗೆ ಮೀಸಲಿಡಬೇಕು

Kinnigoli-040816011

Comments

comments

Comments are closed.

Read previous post:
Kinnigoli-04081604
ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಪದಗ್ರಹಣ

ಕಿನ್ನಿಗೋಳಿ: ಪ್ರಜ್ಞಾವಂತ ಯುವಕರು ತಮ್ಮ ಬಿಡುವಿನ ವೇಳೆಯಲ್ಲಿ ಸೇವಾ ಸಂಘ ಸಂಸ್ಥೆಗಳೊಂದಿಗೆ ತೊಡಗಿಸಿಕೊಂಡು, ಸಮಾಜದಲ್ಲಿ ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಹಾಗೂ ಬಡ ವರ್ಗದವರಿಗೆ ಕೈಲಾದ ಸಹಾಯ ಹಸ್ತ...

Close