ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಪದಗ್ರಹಣ

ಕಿನ್ನಿಗೋಳಿ: ಪ್ರಜ್ಞಾವಂತ ಯುವಕರು ತಮ್ಮ ಬಿಡುವಿನ ವೇಳೆಯಲ್ಲಿ ಸೇವಾ ಸಂಘ ಸಂಸ್ಥೆಗಳೊಂದಿಗೆ ತೊಡಗಿಸಿಕೊಂಡು, ಸಮಾಜದಲ್ಲಿ ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಹಾಗೂ ಬಡ ವರ್ಗದವರಿಗೆ ಕೈಲಾದ ಸಹಾಯ ಹಸ್ತ ನೀಡಿ ಅವರನ್ನು ಸಮಾಜದ ಮುಂಚೂಳಿಗೆ ತರಲು ಶ್ರಮಿಸಬೇಕು ಎಂದು ಕಟೀಲು ದೇವಳ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಜಯರಾಮ ಪೂಂಜಾ ಹೇಳಿದರು.
ಬುಧವಾರ ಕಿನ್ನಿಗೋಳಿ ರೋಟರಿ ರಜತ ಭವನದಲ್ಲಿ ನಡೆದ ಕಿನ್ನಿಗೋಳಿ ರೋಟರಿ ಪ್ರವರ್ತಿತ ರೋಟರಾಕ್ಟ್ ಸಂಸ್ಥೆಯ 2016-17 ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಪದಗ್ರಹಣ ಅಧಿಕಾರಿಯಾಗಿ ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಮಾನಂದ ಪೂಜಾರಿ ಕಿನ್ನಿಗೋಳಿ ರೋಟರ‍್ಯಾಕ್ಟ್‌ನ ನೂತನ ಅಧ್ಯಕ್ಷ ಅಶೋಕ್ ಎಸ್. ಕಾರ್ಯದರ್ಶಿ ಪ್ರಣಿಕ್ ಅಮೀನ್ ತಂಡಕ್ಕೆ ಅಧಿಕಾರ ಹಸ್ತಾಂತರ ಮಾಡಿದರು.
ಉರಗ ತಜ್ಞ ಯತೀಶ್ ಶೆಟ್ಟಿ ಕಟೀಲು, ಸಮಾಜ ಸೇವಕ ವಾಲ್ಟರ್ ಡಿಸೋಜ ಪಕ್ಷಿಕರೆ ಹಾಗೂ ನಿಕಟಪೂರ್ವ ರೋಟರ‍್ಯಾಕ್ಟ್ ಅಧ್ಯಕ್ಷ ಜಾಕ್ಸನ್ ಸಲ್ಡಾನ ಪಕ್ಷಿಕೆರೆ ಅವರನ್ನು ಸನ್ಮಾನಿಸಲಾಯಿತು.
ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಒಂದು ಸಾವಿರ ಅಡಿಕೆ ಗಿಡಗಳನ್ನು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋಟರ‍್ಯಾಕ್ಟ್ ವತಿಯಿಂದ ಮನೆ ಕಟ್ಟಲು ನಾಗವೇಣಿ 25000 ಧನ ಸಹಾಯ ನೀಡಲಾಯಿತು.
ನೂತನ ಅಧ್ಯಕ್ಷ ಅಶೋಕ್ ಎಸ್ ಮುಂದಿನ ವರ್ಷದ ಸೇವಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ರೋಟರ‍್ಯಾಕ್ಟ್ ಸಭಾಪತಿ ಹೆರಿಕ್ ಪಾಯಸ್ ರೋಟರ‍್ಯಾಕ್ಟ್‌ನ ಮುಖವಾಣಿ ಪತ್ರಿಕೆ ಯಶಸ್ವಿ ಯನ್ನು ಬಿಡುಗಡೆಗೊಳಿಸಿದರು.
14 ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.
ರೋಟರ‍್ಯಾಕ್ಟ್ ಮಾಜಿ ಜಿಲ್ಲಾ ವಲಯ ಪ್ರತಿನಿಧಿ ಸುಮಿತ್ ಕುಮಾರ್, ರೋಟರ‍್ಯಾಕ್ಟ್ ಮಾಜಿ ಸಭಾಪತಿ ಯಶವಂತ ಐಕಳ, ನಿಕಟಪೂರ್ವ ಕಾರ್ಯದರ್ಶಿ ವಿಜೇತ್ ಸಿಕ್ವೇರಾ ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷ ಜಾಕ್ಸನ್ ಸಲ್ದಾನ ಪಕ್ಷಿಕೆರೆ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ವಾರ್ಷಿಕ ವರದಿ ನೀಡಿದರು. ಕಾರ್ಯದರ್ಶಿ ಪ್ರಣಿಕ್ ಅಮೀನ್ ವಂದಿಸಿದರು. ಶರತ್ ಶೆಟ್ಟಿ ಹಾಗೂ ಪ್ರಕಾಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು. Kinnigoli-04081604 Kinnigoli-04081605 Kinnigoli-04081606 Kinnigoli-04081607 Kinnigoli-04081608 Kinnigoli-04081609 Kinnigoli-040816010

Comments

comments

Comments are closed.

Read previous post:
Kinnigoli-04081603
ಕಿನ್ನಿಗೋಳಿ : ವಾರ್ಷಿಕ ನೇಮೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಉಲ್ಲಂಜೆಯ ಕೊರಗಜ್ಜ ಮಂತ್ರಿ ದೇವತೆ ಚಾಮುಂಡೆಶ್ವರೀ ಗುಳಿಗ ಸನ್ನಿಧಿಯಲ್ಲಿ ವಾರ್ಷಿಕ ನೇಮೋತ್ಸವ ಮಂಗಳವಾರ ನಡೆಯಿತು. ಈ ಸಂದರ್ಭ ಉದ್ಯಮಿ ಲೋಹಿತ್ ಶೆಟ್ಟಿ...

Close