ರಾಷ್ಟ್ರೀಯ ಸೇವಾ ಯೋಜನೆ, ಮಾನವ ಹಕ್ಕು

ಹಳೆಯಂಗಡಿ: ಸಮಾಜಿಕ ಶೋಷಣೆಗೊಳಗಾಗುತ್ತಿರುವ ಮಂಗಳಮುಖಿಯರಿಗೆ ಸವಿಂದಾನಿಕ ಹಕ್ಕುಗಳು ಹಾಗೂ ಕಾನೂನಿನಲ್ಲಿ ಮಾನ್ಯತೆ ಲಭಿಸಿದಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಲು ಸಾಧ್ಯವಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರರು ಮತ್ತು ದ.ಕ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ನಂದಾ ಪಾಸ್ ಹೇಳಿದರು.
ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮಾನವ ಹಕ್ಕುಗಳ ಸಂಘ ಜಂಟಿಯಾಗಿ ಆಯೋಜಿಸಿದ ಮಂಗಳಮುಖಿಯರ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ತೃತೀಯ ಲಿಂಗಿಯಾಗಿ ಹುಟ್ಟಿ ಮನೆಯವರಿಂದ ಶೋಷಣೆ, ಬೆಳೆಯುವ ಹಂತದಲ್ಲಿ ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಶೋಷಣೆ ಬಳಿಕ ಯೌವನದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಸಮಾಜಿಕವಾಗಿ ಶೋಷಣೆ ಕೊನೆಗೆ ಮುಪ್ಪಿನಲ್ಲಿ ಅನಾಥ ಸಾವು ಇವು ಮಂಗಳಮುಖಿಯರ ಜೀವನಗಾಥೆಯಾಗಿದ್ದು ಅವರಿಗೂ ಸಮಾನ ಹಕ್ಕುಗಳು ಲಭಿಸಲು ಸಮಾಜ ಸಹಕರಿಸಬೇಕು ಎಂದರು.
ಮಂಗಳಮುಖಿ ಪರಿವರ್ತನಾ ಟ್ರಸ್ಟ್ ಗೌ.ಅಧ್ಯಕ್ಷೆ ರಾಣಿ ಮಾತನಾಡಿ, ಸಮಾಜ ಮಂಗಳ ಮುಖಿಯರನ್ನು ವಿಭಿನ್ನ ಭಾವದಿಂದ ನೋಡಿಕೊಳ್ಳಲು ಕೆಲವು ಸಮಾಜ ಘಾತಕ ಶಕ್ತಿಗಳು ಕಾರಣ. ಕೆಲವರು ಹಗಲಲ್ಲಿ ಮಹಿಳೆಯರಂತೆ ವೇಶ ಧರಿಸಿ ಹಣಕ್ಕಾಗಿ ಪೀಡಿಸುವುದು ಕೊಡಲಿಲ್ಲ ಎಂದರೆ ಶಾಪಹಾಕುವುದು ರಾತ್ರಿ ವೇಶ ತೆಗೆದು ದರೋಡೆ ಅಥವಾ ಕಳವು ನಡೆಸುವುದು ರೂಢಿಯಾಗಿದೆ.ಇವರ ತಪ್ಪುಗಳು ನಮ್ಮನ್ನು ಕಳಂಕಿತರನ್ನಾಗಿ ಮಾಡುತ್ತದೆ. ಸರಕಾರ ನಮ್ಮ ಹಕ್ಕುಗಳ ಪ್ರಕಾರ ನಮಗೆ ಶಿಕ್ಷಣ ಉದ್ಯೋಗ ಹಾಗೂ ವಾಸ್ತವ್ಯಕ್ಕೆ ಮನೆ ನೀಡಿದರೆ ಮಂಗಳ ಮುಖಿಯರು ಬೇಡುವ ಪ್ರಮೇಯ ಬಾರದು ಇಲ್ಲವಾದರೆ ಹೊಟ್ಟೆಪಾಡಿಗಾಗಿ ಬೇಡದೆ ವಿಧಿ ಇಲ್ಲ. ನಾವು ಹೆತ್ತವರಿಂದ ಒಡಹುಟ್ಟಿದವರಿಂದ ಮತ್ತು ಸಮಾಜದ ಪ್ರೀತಿ ಕಳೆದುಕೊಂಡ ಅದೃಷ್ಟಹೀನರು ವಿದ್ಯಾರ್ಥಿಗಳಾದ ನೀವೆಲ್ಲರೂ ನಮ್ಮ ಬಗ್ಗೆ ತಿಳಿದು ಕೇವಲ ಗೌರವದಿಂದ ವರ್ತಿಸಿದರೆ ಅದಕ್ಕಿಂತ ಹೆಚ್ಚೇನು ಬೇಕಾಗಿಲ್ಲ ಎಂದು ಗದ್ಗಿತರಾದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪ್ರೊ.ವಿಶ್ವನಾಥ ಭಟ್ ಮಾತನಾಡಿ, ದೇಶದ ಸವಿಂದಾನದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿರುವಾಗ ತೃತೀಯ ಲಿಂಗಿಗಳೆಂದು ಅವರನ್ನು ಹಿಯಾಳಿಸುವುದು ಅಥವಾ ಅವರ ಹಕ್ಕುಗಳನ್ನು ಕಸಿಯುವುದು ಸಲ್ಲದು ಸಮಾಜ ಅವರ ಬಗ್ಗೆ ತಿಳಿದುಕೊಂಡು ಅವರನ್ನು ಗೌರವಿಸಬೇಕು ಎಂದರು.
ಈ ಸಂದರ್ಭ ನಂದಾ ಪಾಸ್ ನಿರ್ದೇಶನದ ಮಂಗಳ ಮುಖಿಯರ ರೂಪಕ ಕನಸು ಇದನ್ನು ರಾಣಿ ಮತ್ತು ತಂಡದವರು ನಡೆಸಿಕೊಟ್ಟರು.
ಅತಿಥಿಗಳಾಗಿ ಹಳೆಯಂಗಡಿ ಗ್ರಾಮ ಪಂ.ಅಧ್ಯಕ್ಷೆ ಜಲಜ, ಸದಸ್ಯರಾದ ವಸಂತ ಬೆರ್ನಾಡ್, ಅಬ್ದುಲ್ ಖಾದರ್, ಅಬ್ದುಲ್ ಅಝೀಜ್, ಕಾರ್ಯಕ್ರಮ ಸಂಯೋಜಕರಾದ ಕಾಲೇಜು ಎನ್.ಎಸ್.ಎಸ್. ಮತ್ತು ಮಾನವ ಹಕ್ಕುಗಳ ಸಂಘದ ಅದ್ಯಾಪಕ ಸಲಹೇದಾರರಾದ ಜಯಶ್ರೀ ಉಪಸ್ಥಿತರಿದ್ದರು.
ಕಾಲೇಜು ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಜಯಶ್ರೀ ಸ್ವಾಗತಿಸಿದರು ವಿದ್ಯಾರ್ಥಿನಿಯರಾದ ಅಶ್ವಿನಿ ನಿರೂಪಿಸಿದರು.ಶಂಶಾದ್ ವಂದಿಸಿದರು.

Mulki-05081601

Comments

comments

Comments are closed.

Read previous post:
Kinnigoli-040816011
ಕಲಿಕೆಯಲ್ಲಿ ನಿಷ್ಠೆ ಏಕಾಗ್ರತೆ ಸ್ವಾಭಿಮಾನವಿರಬೇಕು.

ಕಿನ್ನಿಗೋಳಿ: ಪಾಠಕ್ಕೆ ಮೊದಲು ಆದ್ಯತೆ ನೀಡಬೇಕು. ಗ್ರಹಿಕೆ, ಚಿಂತನೆ , ಶೋಧನೆ , ಭವಿಷ್ಯದ ಯೋಜನೆ ಯೋಚನೆಗಳನ್ನು ಮನಕೊಟ್ಟು ತಮ್ಮ ಜೀವನವನ್ನು ರೂಪಿಸಕೊಳ್ಳಬೇಕು. ಎಂದು ಉದಯವಾಣಿ ಮುಖ್ಯಸ್ಥ ಹಿರಿಯ...

Close