ಬಳ್ಕುಂಜೆ ಗ್ರಾಮ ಸಭೆ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯಿತಿಯ ೨೦೧೬-೧೭ ನೇಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಪಂಚಾಯಿತಿ ಆವರಣದಲ್ಲಿ ನಡೆಯಿತು.
3 ವರ್ಷ ಕಳೆದರೂ ಪಡಿತರ ಚೀಟಿ ಸಿಕ್ಕಿಲ್ಲ
ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ವರ್ಷ ಕಳೆದರೂ ಬಿಪಿಎಲ್ ಪಡಿತರ ಚೀಟಿಗಳು ಗ್ರಾಮಸ್ಥರಿಗೆ ಇನ್ನೂ ಸಿಕ್ಕಿಲ್ಲ, ವಿಚಾರಣೆ ನಡೆಸುವುದೇ ನಮ್ಮ ಕೆಲಸವಾಗಿದೆ ಎಲ್ಲದಕ್ಕೂ ಪಡಿತರ ಚೀಟಿಗಳನ್ನು ಕೇಳುವ ಈ ಕಾಲದಲ್ಲಿ ಹಲವು ಸೌಲಭ್ಯಗಳಿಗೆ ಪಡಿತರ ಚೀಟಿ ಖಡ್ಡಾಯವಿರುವಾಗ ಪಡಿತರ ಚೀಟಿಗಾಗಿ ಎಲ್ಲಿ ಅಲೆಯಬೇಕು ಜನರನ್ನಿ ಇಲಾಖಾಧಿಕಾರಿಗಳು ಸತಾಯಿಸುವುದು ತರವಲ್ಲ ದಯಾಮಾಡಿ ಪಡಿತರ ಚೀಟಿ ಕೈ ಶಸೇರುವಂತೆ ಮಾಡಿ ಎಂದು ಕೆಲವು ಗ್ರಾಮಸ್ಥರು ವಿನಂತಿಸಿಕೊಂಡರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ದಿನೇಶ್ ಪುತ್ರನ್ ಮಾತನಾಡಿ ಪಡಿತರ ಚೀಟಿಯಲ್ಲಿ ಕೆಲವು ವೈಯಕ್ತಿಕ ಹಾಗೂ ತಾಂತ್ರಿಕ ಸಮಸ್ಯೆ ಇರಬಹುದು ಈ ಬಗ್ಗೆ ಪರಿಶೀಲನೆ ಮಾಡಿ ತಾಲೂಕು ಕೇಂದ್ರದಲ್ಲಿ ಪರಿಶೀಲನೆ ಮಾಡಿ ಗ್ರಾಮಸ್ಥರಿಗೆ ತ್ವರಿತವಾಗಿ ಸಿಗುವಂತೆ ಪ್ರಯತ್ನಿಸಲಾಗುವುದು. ಎಂದರು.
ಹಳೇ ದಾಸ್ತಾನು ನೀಡಬೇಡಿ
ಮೂಲ್ಕಿ ರೈತ ಸಂಪರ್ಕ ಕೇಂದ್ರದಲ್ಲಿ ರೀತಿಯಲ್ಲಿ ದೊರೆಯುವ ಸುಣ್ಣ ಗಟ್ಟಿಯಾಗಿದ್ದು ಹಳೆ ದಾಸ್ತಾನು ನೀಡಲಾಗುತ್ತಿದ್ದು ಇದು ಉಪಯೋಗಕ್ಕೆ ಬರುತ್ತಿಲ್ಲ ಎಂದು ಕರ್ನಿರೆ ಹರಿಶ್ಚಂದ್ರ ಶೆಟ್ಟಿ ತಿಳಿಸಿದರು. ಮುಂದೆ ಇಂತಹ ಸಮಸ್ಯೆ ಬಾರದಂತೆ ಮೊದಲೇ ಖಾತ್ರಿ ಪಡಿಸಿ ನೀಡಲಾಗುವುದು. ಎಂದು ಕೃಷಿ ಅಧಿಕಾರಿ ತಿಳಿಸಿದರು.

ತೀರ್ತಗುಡ್ಡೆ ರಸ್ತೆ ಸರಿಪಡಿಸಿ
ಕೊಲ್ಲೂರು ಗ್ರಾಮದಲ್ಲಿನ ತೀರ್ತ ಗುಡ್ಡೆ ಸಂಪರ್ಕಿಸುವ ರಸ್ತೆ ಕಾಮಗಾರಿ ನಿಂತಿದೆ ಯಾಕೆ ಎಂಬ ಪ್ರಶ್ನೆಗೆ ಈ ರಸ್ತೆ ನಮ್ಮ ಗ್ರಾಮ ನಮ್ಮರಸ್ತೆ ಯೋಜನೆಯಲ್ಲಿ ನಿರ್ಮಿಸಲಾಗುತ್ತಿದ್ದು ತಾಂತ್ರಿಕ ಕಾರಣಗಳಿಂದ ಕಾಮಗಾರಿ ನಿಂತಿದೆ ಕೆಲವರು ತಮ್ಮ ಜಾಗದಲ್ಲಿ ರಸ್ತೆ ನಿರ್ಮಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಾಮಗಾರಿ ಕುಂಠಿತಗೊಂಡಿದೆ. ಮುಂದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ನಡೆಸಲಾಗುವುದು ಎಂದು ಗ್ರಾ. ಪಂ. ಅಧ್ಯಕ್ಷ ಹೇಳಿದರು.
ಕರ್ನಿರೆ ಸೈಟ್‌ನಲ್ಲಿ ಬಾವಿ ತೋಡಿದ ಜಾಗದಲ್ಲಿರುವ ಮರ ಮಟ್ಟುಗಳ ರಕ್ಷಣೆ, ಕೊಲ್ಲೂರು ಶಾಲಾ ರಸ್ತೆ ದುರಸ್ತಿ ಹೊಸ ಸಶ್ಮಾನ ಮುಂತಾದುವುಗಳ ಬಗ್ಗೆ ಆರೋಗ್ಯಕರ ಚರ್ಚೆ ನಡೆಯಿತು.
ಅರಣ್ಯ ಇಲಾಖಾಧಿಕಾರಿ ಕಿರಣ್ ಎಮ್ ನೋಡಲ್ ಅಧಿಕಾರಿಯಾಗಿದ್ದರು. ಬಳ್ಕುಂಜೆ ಗ್ರಾ. ಪಂ. ಉಪಾಧ್ಯಕ್ಷೆ ಸುಮಿತ್ರ ಎಸ್ ಕೋಟ್ಯಾನ್, ಪಿಡಿಒ ಜಲಜ ಟಿ, ಕಾರ್ಯದರ್ಶಿ ನಾರಾಯಣ ಮೂಲ್ಯ, ವಿವಿಧ ಇಲಾಖಾಧಿಕಾರಿಗಳು ಹಾಗೂ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

Kinnigoli-08081602

Comments

comments

Comments are closed.

Read previous post:
Kinnigoli-07081601
ಬಿಳ್ಕೂಡುಗೆ ಕಾರ್ಯಕ್ರಮ

ಕಿನ್ನಿಗೋಳಿ: ಕಿನ್ನಿಗೋಳಿ ಯುಕೋ ಬ್ಯಾಂಕ್‌ನಲ್ಲಿ ಕಳೆದ ಎರಡು ವರ್ಷಗಳಲ್ಲಿ ಪ್ರಬಂಧಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಯು. ವಿ. ತಂತ್ರಿ ಅವರ ಬಿಳ್ಕೂಡುಗೆ ಕಾರ್ಯಕ್ರಮ ಶುಕ್ರವಾರ ಬ್ಯಾಂಕ್‌ನಲ್ಲಿ ನಡೆಯಿತು....

Close