ಕಿನ್ನಿಗೋಳಿ ಗ್ರಾಮ ಸಭೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರ್ರಾಮ ಪಂಚಾಯಿತಿಯ ೨೦೧೬-೧೭ ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ವೇಗವಾಗಿ ಬೆಳೆಯುತ್ತಿರುವ ಕಿನ್ನಿಗೋಳಿ ಪೇಟೆಯಲ್ಲಿ ಮಾತ್ರ ಕಸ ವಿಲೇವಾರಿಯ ವ್ಯವಸ್ಥೆ ಇದೆ ಆದರೆ ದೂರದ ಎಸ್.ಕೋಡಿ, ತಾಳಿಪಾಡಿ ಎಳತ್ತೂರು, ಶಾಂತಿ ಪಲ್ಕೆ ಗುತ್ತಕಾಡು ಪರಿಸರದಲ್ಲಿ ಯಾಕೇ ಇಲ್ಲ??? ತೆರಿಗೆಯನ್ನು ಎಲ್ಲರೂ ಕಟ್ಟುತ್ತಾರೆ ಇಂತಹ ತಾರತಮ್ಯ ಯಾಕೆ? ಸಮಾನ ಮಾನದಂಡವಿರುವಾಗ ಎಲ್ಲರಿಗೂ ಕಸವಿಲೇವಾರಿಯ ವ್ಯವಸ್ಥೆ ಮಾಡಬಹುದಲ್ವೇ? ಹತ್ತಿರದ ಗ್ರಾಮಗಳನ್ನು ಸೇರಿಸಿ ಪುರಸಭೆ ಅಥವಾ ನಗರ ಸಭೆ ಮಾಡಬಹುದಲ್ಲ ಆಗ ಗ್ರಾಮಗಳ ಅಭಿವೃದ್ದಿಗೆ ಹೆಚ್ಚಿನ ಸಂಪನ್ಮೂಲ ಸಿಗಬಹುದಲ್ವಾ ಎಂದು ವಿಲಿಯಂ ಕಾರ್ಡೋಜ ಸಭೆಯಲ್ಲಿ ಪ್ರಶ್ನಿಸಿದರು.
ಕಿನ್ನಿಗೋಳಿ ಪರಿಸರದ ಅಂಗವಿಕಲ ಗ್ರಾಮಸ್ಥರಿಗೆ ಸೂಕ್ತ ಸೌಲಭ್ಯ ಸಿಗುತ್ತಿಲ್ಲ 30 ಕಿಲೋಮೀಟರ್ ದೂರದ ಮಂಗಳೂರಿನ ಸರಕಾರಿ ವೆನ್‌ಲಾಕ್ ಆಸ್ಪತ್ರೆಗೆ ಗುರುತು ಚೀಟಿ ಮಾಡಲು ಹೋದರೆ ವೈದ್ಯರು ಸಿಗುತ್ತಿಲ್ಲ ಕಾರಣವೇನು ಎಂದು ಸಮಾಜ ಸೇವಕಿ ಲಲಿತಾ ಭಾಸ್ಕರ ಹೇಳಿದಾಗ ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿ ಡಾ| ಮಾಧವ ಪೈ ಮಾತನಾಡಿ ಅಂಗವಿಕಲರಿಗೆ ಗುರುತು ಚೀಟಿ ಹಾಗೂ ಪರೀಕ್ಷೆ ಮಾಡಿಸಲು ವೆನ್‌ಲಾಕ್ ಆಸ್ಪತ್ರೆಯಲ್ಲಿ ನಿಗದಿತ ದಿನದಂದು ಇಂತಹ ವ್ಯವಸ್ಥೆ ಇದೆ. ಸಂಬಂಧ ಪಟ್ಟ ಎಲ್ಲಾ ವೈದ್ಯರು ಲಭ್ಯವಿರುವುದನ್ನು ಖಾತರಿ ಪಡಿಸಿ ಚೀಟಿ ಅಥವಾ ಪರೀಕ್ಷೆ ಮಾಡಿಸುವುದು ಉತ್ತಮ ಎಂದರು.

ಬಸ್ಸು ನಿಲ್ದಾಣ ಕರ ವಸೂಲಿ ಗೊಂದಲ
ಕಿನ್ನಿಗೋಳಿ ಬಸ್ ನಿಲ್ದಾಣದ ಕರ ವಸೂಲಿ ಗುತ್ತಿಗೆದಾರರು ಕಳೆದ ಮೂರು ತಿಂಗಳಿನಿಂದ ಕರ ವಸೂಲಿಗೆ ಬರದೆ ಈಗ ಸ್ಥಳೀಯವಗಿ ಗೊತ್ತಿರದ ಯಾರೋ ಬಂದು ಪಂಚಾಯಿತಿ ಕರ ವಸೂಲಿ ಮಾಡುತ್ತಾರೆ ಒಳ ಒಪ್ಪಂದದಲ್ಲಿ ಕರ ವಸೂಲಿ ನೀಡಲಾಗಿದೆಯೋ ಸ್ಪಷ್ಟೀಕರಣ ನೀಡಿ, ಬಸ್ಸು ನಿಲ್ಧಾಣದ ಪಾರ್ಕಿಂಗ್ ಸಮಸ್ಯೆ ಸರಿಪಡಿಸಿ ಎಂದು ಕಿನ್ನಿಗೋಳಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ಆಗ್ರಹಿಸಿದರು.

ಅಂಗವಿಕಲರಿಗೆ ಸೌಲಭ್ಯ ಸಿಗುತ್ತ ಅಂತ ಹೇಳುವುದು ಸುಲಭ ಆದರೇ ಇಲಾಖೆಯ ನಿರ್ಲಕ್ಷವಿದೆ, ಬಸ್ ನಿಲ್ದಾಣದಲ್ಲಿ ಕರವಸೂಲಿ ಯೊರೋ ಬಂದು ಮಾಡುವುದು , ಬಸ್ ನಿಲ್ದಾಣ ಪುಟಪಾತ್ ಸಮಸ್ಯೆ ಟ್ರಾಫಿಕ್ ಸಮಸ್ಯೆ, ರಸ್ತೆ , ನೀರಿನ ಸಮಸ್ಯೆಗಳ ಬಗ್ಗೆ ಕಿನ್ನಿಗೋಳಿಯಲ್ಲಿ ಜ. ೬ ರಂದು ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಅಕ್ರೋಶ ವ್ಯಕ್ತ ಪಡಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಫಿಲೋಮಿನಾ ಸಿPರ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗ್ರಾಮ ಸಭೆ ನಡೆಯಿತು.

ಕಿನ್ನಿಗೋಳಿಯಲ್ಲಿ ಪಾರ್ಕಿಂಗ್ ಸಮಸ್ಯೆ, ಬಸ್ ನಿಲ್ದಾಣದಲ್ಲಿ ಪುಟ್‌ಪಾತ್ ಸಮಸ್ಯೆ , ಬಸ್ ನಿಲ್ದಾಣದ ತಿರುವಿನಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಲಾಗುತ್ತಿದೆ ಈ ಬಗ್ಗೆ ಕಳೆದ ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ ಆದರೇ ಕಾರ್ಯಗತ ವಾಗಿಲ್ಲ ಯಾಕೇ ಎಂದು ಗಂಗಾಧರ ರಾವ್ ಕೇಳಿದಾಗ ಪಂಚಾಯಿತಿ ಪಿಡಿಒ ಅರುಣ್ ಪ್ರದೀಪ್ ಡಿಸೋಜ ಉತ್ತರಿಸಿ ಕಿನ್ನಿಗೋಳಿ ಪೇಟೆಯ ರಸ್ತೆ ಪಕ್ಕದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗೂ ಸಂಬಂಧಪಟ್ಟಿರುವುದರಿಂದ ಎರಡೂ ಗ್ರಾಮಗಳು ಪಾರ್ಕಿಂಗ್ ಸಮಸ್ಯೆ ಬಗ್ಗೆ ಅರ್ಚಿಸಿ ನಿರ್ಣಯಕೈಗೊಳ್ಳಬೇಕಾಗಿದೆ ಮುಂದಿನ ದಿನಗಳಲ್ಲಿ ಇಲಾಖಾಧಿಕಾರಿಗಳ ಪೋಲೀಸರು ಹಾಗೂ ಗ್ರಾಮಸ್ಥರ ಸಭೆ ಕರೆದು ನಿರ್ಣಯ ಮಾಡಲಾಗುವುದು ಎಂದು ಹೇಳಿದರು.

ಶಾಂತಿ ಪಲ್ಕೆಯಲ್ಲಿ ಪುನರಪಿ: ಅಂಗನವಾಡಿ ರಚಿಸಿ
2008ರಲ್ಲಿ ಮುಚ್ಚಿಹೋದ ಶಾಂತಿ ಪಲ್ಕೆ ಅಂಗನವಾಡಿಯನ್ನು ಪುನ: ಪ್ರಾರಂಭಿಸಿ, ಮಕ್ಕಳು ದೂರದ ದಾಮಸಕಟ್ಟೆ ಗುತ್ತಕಾಡು ಪ್ರದೇಶಕ್ಕೆ ಅಲೆದಾಡಬೇಕಾಗಿದೆ ಎಂದು ರಾಘವೇಂದ್ರ ಶಾಂತಿಪಲ್ಕೆ ಕೇಳಿದಾಗ ಇಲಾಖೆಯ ನಾಗರತ್ನ ಉತ್ತರಿಸಿ ಮಕ್ಕಳ ಬಗ್ಗೆ ಸರ್ವೆ ಮಾಡಲಾಗಿದೆ ಮುಂದಿನ ದಿನಗಳಲ್ಲಿ ೧೫ ಹೆಚ್ಚು ಮಕ್ಕಳು ಇದ್ದರೆ ಸರಕಾರ ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ಅಂಗನವಾಡಿಯನ್ನು ಪುನ: ಆರಂಭಿಸಲಾಗುವುದು ಎಂದು ಹೇಳಿದರು.
ಮಳೆಗಾಲದಲ್ಲೂ ನೀರಿನ ಸಮಸ್ಯೆ
ಪಂಚಾಯಿತಿ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಹೊಸಕಾವೇರಿ ಎಸ್.ಕೋಡಿ ಪರಿಸರದಲ್ಲಿ ಕೆಲವು ಮನೆಗಳಿಗೆ ಬೇಸಗೆಯಲ್ಲಿ ನೀರು ಬರುತ್ತಿಲ್ಲ ಈಗ ಮಳೆಗಾಲದಲ್ಲೂ ನೀರು ಇಲ್ಲ ನೀರು ವಿತರಕರ ಹಾಗೂ ಗೇಟ್ ವಾಲ್ವ್, ನೀರು ಬಿಡುವ ಸಮಯದ ಸಮಸ್ಯೆಗಳನ್ನು ಪರಿಹರಿಸಿ ಎಂದು ಗ್ರಾಮಸ್ಥೆ ನಳಿನಿ ಕೇಳಿದಾಗ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ನೀರಿನ ಸಮಸ್ಯೆ ಬಗೆಹರಿಸಲಾಗುವುದು. ಎಂದು ಅದ್ಯಕ್ಷೆ ಫಿಲೋಮಿನಾ ಸಿPರ ಹೇಳಿದರು.
ಸಾಮಾನ್ಯ ಸಭೆ, ವಾರ್ಡ್ ಸಭೆ ಹಾಗೂ ಗ್ರಾಮ ಸಭೆಯ ನಡಾವಳಿ ನಿರ್ಣಯಗಳನ್ನು ಪಂಚಾಯಿತಿ ಕಚೇರಿಯ ಸೂಚನ ಫಲಕದಲ್ಲಿ ಯಾಕೇ ಹಾಕುತ್ತಿಲ್ಲ? ಏನಿದರ ಒಳಮರ್ಮ ಏನು? ಕೆಲವರಿಗೆ ನೀರಿನ ಸಂಪರ್ಕ, ಸಾಕಷ್ಟು ನೀರು ಸರಭರಾಜಿದ್ದರೂ ನೀರು ನೀಡುತ್ತಿಲ್ಲ ಯಾಕೆ? ಎಂದು ವಿಲಿಯಂ ಕಾರ್ಡೋಜಾ ಹಾಗೂ ಗಂಗಾಧರ ರಾವ್ ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು.
ಗ್ರಾ. ಪಂ. ಒಂದು ವರ್ಷದ ಹಿಂದೆ ಖಾಲಿ ಹುದ್ದೆಯ ಜಾಹಿರಾತು ಪತ್ರಿಕೆಯಲ್ಲಿ ನೀಡಿತ್ತು. ಇನ್ನೂ ನೇಮಕ ಯಾಕೆ ಮಾಡಿಲ್ಲ ಎಂಬ ಗ್ರಾಮಸ್ಥರ ಪ್ರಶ್ನೆಗೆ ಜಿ. ಪಂ ಮಂಜೂರಾತಿ ಬಂದ ಕೂಡಲೇ ನೇಮಕ ಮಾಡಲಾಗುವುದು ಎಂದು ಪಿಡಿಒ ಹೇಳಿದರು.

ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವಠಾರದಲ್ಲಿರುವ ಸರಿಯಾಗಿ ಕಾರ್ಯ ನಿರ್ವಹಿಸದ ವನಿತಾ ಸಮಾಜಕ್ಕೆ ಜಾಗ ನೀಡಲಾಗಿದ್ದು ಅದನ್ನು ಹಿಂದೆ ಪಡೆದು ಆ ಕಟ್ಟಡದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಿ, ಕಿನ್ನಿಗೋಳಿ ಪರಿಸರದಲ್ಲಿ ರೈತಸಂಪರ್ಕ ಸ್ಥಾಪಿಸಿ ಎಂಬ ಪ್ರಶ್ನೆಗೆ ಪಿಡಿಒ ಅರುಣ್ ಪ್ರದೀಪ್ ಡಿಸೋಜ ಉತ್ತರಿಸಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲು ಇಲಾಖೆಗೆ ಮನವಿ ಮಾಡಲಾಗಿದೆ ಹಾಗೂ ಶಾಸಕರು ಭರವಸೆ ನೀಡಿದ್ದಾರೆ ಸರಕಾರದಿದ ಆದೇಶ ಬಂದರೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡದಲ್ಲಿ ರೈತ ಸಂಪರ್ಕ ಕೇಂದ್ರ ಶಾಖೆ ತೆರೆಯಲು ಅವಕಾಶ ನೀಡಲಾಗುವುದು ಎಂದು ಹೇಳಿದರು.

ಕಿನ್ನಿಗೋಳಿ ಪೇಟೆಯ ಮಾರ್ಕೆಟ್ ಪರಿಸರದಲ್ಲಿ ಅಲಲ್ಲಿ ಕಸ ತ್ಯಾಜ್ಯಗಳು ತುಂಬಿ ಹೋಗುತ್ತಿವೆ, ಬೀಳುವ ಹಂತದಲ್ಲಿರುವ ಶಾಂತಿಪಲ್ಕೆ ಬಸ್ಸು ನಿಲ್ದಾಣ, ಎಳತ್ತೂರು ಆಡ್ರಗುತ್ತು ರಸ್ತೆ ನಿರ್ಮಾಣ ಮಾಡಿ , ಅಶ್ವಥ ಕಟ್ಟೆ – ಬಿರ್ನಕೋಡಿ ರಸ್ತೆ ನಿರ್ಮಾಣ ಮಾಡಿ, ಗುತ್ತಕಾಡು ಹಿಲ್‌ಟಾಪ್ ರಸ್ತೆಯ ಬದಿಯಲ್ಲಿ ಎಸೆಯುತ್ತಿರುವ ತ್ಯಾಜ್ಯ ಕಸ, ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಜಿ. ಪಂ. ಸದಸ್ಯ ವಿನೋದ್ ಕುಮಾರ್ , ತಾ. ಪಂ. ಸದಸ್ಯ ದಿವಾಕರ ಕರ್ಕೇರ, ಶರತ್ ಕುಬೆವೂರು , ಉಪಾಧ್ಯಕ್ಷೆ ಸುಜಾತಾ ಪುಜಾರಿ, ನೋಡಲ್ ಅಧಿಕಾರಿ ಕೃಷಿ ಇಲಾಖೆಯ ಸುಕುಮಾರ ಹೆಗ್ಡೆ, ಇಲಾಖಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

Kinnigoli-08081603

Comments

comments

Comments are closed.

Read previous post:
Kinnigoli-08081602
ಬಳ್ಕುಂಜೆ ಗ್ರಾಮ ಸಭೆ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯಿತಿಯ ೨೦೧೬-೧೭ ನೇಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಪಂಚಾಯಿತಿ ಆವರಣದಲ್ಲಿ ನಡೆಯಿತು. 3 ವರ್ಷ...

Close