ಕಿರೆಂ : ಗಾದ್ಯಾಂತ್ ಏಕ್ ದೀಸ್

ಕಿನ್ನಿಗೋಳಿ: ನಾಡಿನ ಸಂಸ್ಕ್ರತಿ ಸಂಸ್ಕಾರ ಕೃಷಿ ಜೀವನದ ವಿವಿಧ ಮಜಲುಗಳನ್ನು ಯುವ ಸಮುದಾಯಕ್ಕೆ ತಿಳಿ ಹೇಳಲು ಹಾಗೂ ಕೃಷಿಯ ಬಗ್ಗೆ ಆಸಕ್ತಿ ಮೂಡಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ. ಎಂದು ರಂಗಕರ್ಮಿ ಐಕಳ ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ ಸಾಲ್ಯಾನ್ ಹೇಳಿದರು.
ಭಾರತೀಯ ಕೆಥೋಲಿಕ್ ಯುವ ಸಂಚಾಲನ್ ಕಿರೆಂ ಘಟಕ ಹಾಗೂ ಯುವ ವಿದ್ಯಾರ್ಥಿ ಸಂಚಾಲನ್ ಕಿರೆಂ ಘಟಕದ ವತಿಯಿಂದ ಶಾಂತಿಪಲ್ಕೆ ಬಳಿಯ ಬಳಿಯ ಗದ್ದೆಯಲ್ಲಿ ಭಾನುವಾರ ನಡೆದ ಗಾದ್ಯಾಂತ್ ಏಕ್ ದೀಸ್ ಕೆಸರು ಗದ್ದೆ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿರೆಂ ಚರ್ಚ್ ಧರ್ಮಗುರು ಫಾ. ವಿಕ್ಟರ್ ಡಿಮೆಲ್ಲೋ ಕಾರ್ಯಕ್ರಮ ಉದ್ಘಾಟಿಸಿ ಧ್ವಜ ವಂದನೆ ಸ್ವೀಕರಿಸಿದರು.

ಕಿರೆಂ ಚರ್ಚ್ ಸಹಾಯಕ ಧರ್ಮಗುರು ಫಾ. ಎಡ್ವಿನ್ ಮೊನಿಸ್, ಕಿರೆಂ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಮ್ಯಾಕ್ಸಿ ಪಿಂಟೋ, ಕಾರ್ಯದರ್ಶಿ ಅನಿತಾ ಡಿಸೋಜಾ, ಭಾರತೀಯ ಕೆಥೋಲಿಕ್ ಯುವ ಸಂಚಲನ ಕಿರೆಂ ಘಟಕದ ಕಾರ್ಯದರ್ಶಿ ಪ್ರೀಮಾ ಪಿಂಟೊ, ಯುವ ವಿದ್ಯಾರ್ಥಿ ಸಂಚಾಲನ್ ಕಿರೆಂ ಘಟಕದ ಅಧ್ಯಕ್ಷ ನೈಝಲ್ ರೊಡ್ರಿಗಸ್ ಉಪಸ್ಥಿತರಿದ್ದರು.

ಭಾರತೀಯ ಕೆಥೋಲಿಕ್ ಯುವ ಸಂಚಲನ ಕಿರೆಂ ಘಟಕದ ಅಧ್ಯಕ್ಷ ರೋಹಿತ್ ರೊಡ್ರಿಗಸ್ ಸ್ವಾಗತಿಸಿದರು. ಯುವ ವಿದ್ಯಾರ್ಥಿ ಸಂಚಾಲನ್ ಕಿರೆಂ ಘಟಕದ ಕಾರ್ಯದರ್ಶಿ ವಿಯೋನಾ ರೊಡ್ರಿಗಸ್ ವಂದಿಸಿದರು. ವಿಲ್‌ಫ್ರೆಡ್ ಮೊನಿಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli-08081604

Comments

comments

Comments are closed.

Read previous post:
Kinnigoli-08081603
ಕಿನ್ನಿಗೋಳಿ ಗ್ರಾಮ ಸಭೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರ್ರಾಮ ಪಂಚಾಯಿತಿಯ ೨೦೧೬-೧೭ ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ವೇಗವಾಗಿ...

Close