ಮುಲ್ಕಿ – ಶಾಲಾ ಕ್ರೀಡಾಕೂಟ 2016-17

ಕಿನ್ನಿಗೋಳಿ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಶಾರೀರಿಕ ಶಿಕ್ಷಣಕ್ಕೂ ಒತ್ತುಕೊಡಬೇಕು. ಕ್ರೀಡಾ ಮನೋಭಾವದೊಂದಿಗೆ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಎಂದು ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮಂಗಳೂರು ಉತ್ತರ ವಲಯ ಮತ್ತು ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಾಮಿಕ ಶಾಲೆಯ ಜಂಟೀ ಆಶ್ರಯದಲ್ಲಿ ಸೋಮವಾರ ಕಟೀಲು ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಮುಲ್ಕಿ ಬಿ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ 2016-17 ಉದ್ಘಾಟಿಸಿ ಮಾತನಾಡಿದರು.
ಕಟೀಲು ದೇವಳ ಆಡಳಿತ ಮೊಕ್ತೇಸರ ಡಾ. ರವೀಂದ್ರನಾಥ ಪೂಂಜಾ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಕಟೀಲು ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಯರಾಮ ಪೂಂಜಾ, ಕಟೀಲು ಪ್ರೌಢಶಾಲಾ ವೈಸ್ ಪ್ರಿನ್ಸಿಪಾಲ್ ಸೋಮಪ್ಪ ಅಲಂಗಾರ್, ಸುದೀರ್ ಶೆಟ್ಟಿ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ರಮಾನಂದ ಪೂಜಾರಿ, ರೋಟರಿ ಆಂಗ್ಲ ಮಾಧ್ಯಮ ಶಾಲಾ ಕಾರ್ಯದರ್ಶಿ ವಿಲಿಯಂ ಸಿಕ್ವೇರಾ, ಶಾಲಾ ಮುಖ್ಯ ಶಿಕ್ಷಕ ಗಿಲ್ಬರ್ಟ್ ಡಿಸೋಜ ಉಪಸ್ಥಿತರಿದ್ದರು.
ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲಾ ದೈಹಿಕ ಶಿಕ್ಷಕ ಪ್ರಣಿಲ್ ಸ್ವಾಗತಿಸಿದರು. ಸೂರ್ಯಕಾಂತ್ ವಂದಿಸಿದರು. ಶಿಕ್ಷಕಿ ಶಾಂತ ಕಾರ್ಯಕ್ರಮ ನಿರೂಪಿಸಿದರು.
ಥ್ರೋಬಾಲ್, ವಾಲಿಬಾಲ್, ಕಬಡ್ಡಿ ಹಾಗೂ ಖೋ ಖೋ ವಿಭಾಗದಲ್ಲಿ ಪಂದ್ಯಾಟಗಳು ನಡೆದವು.

Kinnigoli-08081606

Comments

comments

Comments are closed.

Read previous post:
Kinnigoli-08081605
ತೋಕೂರು : ನಾಗರಪಂಚಮಿ

ಕಿನ್ನಿಗೋಳಿ: ನಾಗರಪಂಚಮಿ ಪ್ರಯುಕ್ತ ಭಾನುವಾರ ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ನಾಗ ಸನ್ನಿಧಿಯಲ್ಲಿ ಹಾಲು ಹಾಗೂ ಸಿಯಾಳಾಭಿಷೇಕ ನಡೆಯಿತು. 

Close