ತಾಳಮದ್ದಳೆಗಳು ಜನರನ್ನು ಸುಸಂಸ್ಕೃತರನ್ನಾಗಿ ಮಾಡುತ್ತಿವೆ.

ಕಿನ್ನಿಗೋಳಿ: ಪುರಾಣ ಕಥೆಗಳು ಧಾರ್ಮಿಕ ಚಿಂತನೆ, ನೀತಿಗಳನ್ನು ತರ್ಕಬದ್ದವಾಗಿ ಜನರಿಗೆ ಮನದಟ್ಟು ಮಾಡುತ್ತಿರುವ ಯಕ್ಷಗಾನ ತಾಳಮದ್ದಳೆಗಳು ಜನರನ್ನು ಸುಸಂಸ್ಕೃತರನ್ನಾಗಿ ಮಾಡುತ್ತಿವೆ. ಎಂದು ಕರ್ನಾಟಕ ಬ್ಯಾಂಕ್ ಹಿರಿಯ ಮಹಾ ಪ್ರಬಂಧಕ ಮಹಾಬಲೇಶ್ವರ ಭಟ್ ಹೇಳಿದರು.

ಯಕ್ಷಲಹರಿ (ರಿ) ಯುಗಪುರುಷ ಸಂಯೋಜನೆಯೊಂದಿಗೆ ಕರ್ನಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಯಕ್ಷಗಾನ ಬಯಲಾಟ ಅಕಾಡೆಮಿ ಸಹಯೋಗದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯುತ್ತಿರುವ ಯಕ್ಷಲಹರಿಯ 26ನೇ ವರ್ಷ ಸಂಭ್ರಮ 2016 ಯಕ್ಷಗಾನ ತಾಳಮದ್ದಲೆ ಸಪ್ತಾಹ ಧನ್ಯೋ ಗೃಹಸ್ಥಾಶ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. ಜ್ಯೋತಿಷಿ ಕೃಷ್ಣರಾಜ ಭಟ್ ಬಪ್ಪನಾಡು ಶುಭಾಶಂಸನೆಗೈದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಮಾಜಿ ಪ್ರಾಂತೀಯ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಮಾತನಾಡಿ ೨೫ ವರ್ಷಗಳಿಂದ ಕಿನ್ನಿಗೋಳಿ ಮತ್ತು ಪರಿಸರದ ಗ್ರಾಮೀಣ ಪ್ರದೇಶದಲ್ಲಿ ಹಿರಿಯರೊಂದಿಗೆ ಉದಯೋನ್ಮುಖ ಕಲಾವಿದರಿಗೆ ಅವಕಾಶ ನೀಡಿ ತಿದ್ದಿ ತೀಡಿ ಕಲಾವಿದರ ಕನಸನ್ನು ನನಸನ್ನಾಗಿ ಮಾಡಿ ಸೂಕ್ತ ವೇದಿಕೆ ಕಲ್ಪಿಸಿದ ಯಕ್ಷಲಹರಿಯ ಕಾರ್ಯ ಶ್ಲಾಘನೀಯ. ಎಂದರು.

ಈ ಸಂದರ್ಭ ಯಕ್ಷಗಾನ ಹಿರಿಯ ಕಲಾವಿದ ದುಗ್ಗಪ್ಪ ಆಚಾರ್ಯ ಮುಂಡ್ಕೂರು ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ವರ್ಕಾಡಿ ತಾರನಾಥ ಬಲ್ಲಾಯ, ಜ್ಯೋತಿಷಿ ಕೃಷ್ಣರಾಜ ಭಟ್ ಬಪ್ಪನಾಡು ಅವರನ್ನು ಗೌರವಿಸಲಾಯಿತು.

ಅತ್ತೂರು ಬೈಲು ಮಹಾಗಣಪತಿ ಮಂದಿರದ ವೆಂಕಟ್ರಾಜ ಉಡುಪ, ಕಸಾಪ ಮಾಜಿ ರ‍್ಯಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಶಾಖಾ ಪ್ರಭಂದಕಿ ಆಶಾ, ಕಿನ್ನಿಗೋಳಿ ಕಾರ್ಪೋರೇಷನ್ ಹಿರಿಯ ಶಾಖಾ ಪ್ರಭಂದಕ ಪ್ರವೀಣ್ ಉಳ್ಳಾಲ್, ಸುರತ್ಕಲ್ ದಂತ ವೈದ್ಯ ಡಾ. ಅರವಿಂದ ಭಟ್, ಉದ್ಯಮಿ ಶ್ರೀಪತಿ ಭಟ್, ಉಪಸ್ಥಿತರಿದ್ದರು.

ಯಕ್ಷಲಹರಿ ಅಧ್ಯಕ್ಷ ಪಿ.ಸತೀಶ್ ರಾವ್ ಸ್ವಾಗತಿಸಿದರು. ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ಸುಧಾಕರ ಕುಲಾಲ್ ಸನ್ಮಾನಿತರ ಪತ್ರ ವಾಚಿಸಿದರು. ಯಕ್ಷ ಲಹರಿ ಕಾರ್ಯದರ್ಶಿ ವಸಂತ ದೇವಾಡಿಗ ವಂದಿಸಿದರು. ರಘುನಾಥ ಕಾಮತ್ ಕೆಂಚನಕೆರೆ ಕಾರ್ಯಕ್ರಮ ನಿರೂಪಿಸಿದರು.

Kinnigoli-08081601

Comments

comments

Comments are closed.

Read previous post:
Kinnigoli-08081606
ಮುಲ್ಕಿ – ಶಾಲಾ ಕ್ರೀಡಾಕೂಟ 2016-17

ಕಿನ್ನಿಗೋಳಿ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಶಾರೀರಿಕ ಶಿಕ್ಷಣಕ್ಕೂ ಒತ್ತುಕೊಡಬೇಕು. ಕ್ರೀಡಾ ಮನೋಭಾವದೊಂದಿಗೆ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಎಂದು ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ...

Close