ಅರ್ಥಗರ್ಭಿತ ಶುದ್ಧ ಕನ್ನಡದ ಯಕ್ಷಗಾನ

ಕಿನ್ನಿಗೋಳಿ: ಅರ್ಥಗರ್ಭಿತ ಶುದ್ಧ ಕನ್ನಡ ಮಾತುಗಳೊಂದಿಗೆ ಪುರಾಣ ಕಥೆಗಳ ನೀತಿ, ಭೋಧನೆಗಳನ್ನು ಜನಮುಟ್ಟುವಂತೆ ಮಾಡುವುದೇ ಯಕ್ಷಗಾನ ಮತ್ತು ತಾಳಮದ್ದಳೆ ಕೂಟಗಳು ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪರು ಹೇಳಿದರು.

ಯಕ್ಷಲಹರಿ ಮತ್ತು ಯುಗಪುರುಷ ಸಂಯೋಜನೆಯ ಕರ್ನಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಯಕ್ಷಗಾನ ಬಯಲಾಟ ಅಕಾಡೆಮಿ ಸಹಯೋಗದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯುತ್ತಿರುವ ಯಕ್ಷಲಹರಿಯ ೨೬ನೇ ವರ್ಷ ಸಂಭ್ರಮ 2016 ಯಕ್ಷಗಾನ ತಾಳಮದ್ದಲೆ ಸಪ್ತಾಹ ಧನ್ಯೋ ಗೃಹಸ್ಥಾಶ್ರಮ 2 ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಆಶೀರ್ವಚನಗೈದರು.

ಹಿರಿಯ ಭಾಗವತ ಹರಿಯಪ್ಪ ಶೆಣೈ ಹೆಜಮಾಡಿ ಗುಂಡಿ ಅವರನ್ನು ಸನ್ಮಾನಿಸಲಾಯಿತು. ಇರುವೈಲು ವಾಸುದೇವ ಭಟ್ ಮತ್ತು ರಂಜಿನಿ ಭಟ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭ ರಾಘವೇಂದ್ರ ಆಸ್ರಣ್ಣ ಇರುವೈಲು, ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಯಕ್ಷಲಹರಿ ಅಧ್ಯಕ್ಷ ಪಿ ಸತೀಶ್ ರಾವ್, ಕಾರ್ಯದರ್ಶಿ ವಸಂತ ದೇವಾಡಿಗ, ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿ ಮಹಾಬಲ ಶೆಟ್ಟಿ ಐಕಳ ಉಪಸ್ಥಿತರಿದ್ದರು.
ವಿನಯ ಆಚಾರ್ಯ ಹೊಸಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

Kinnigoli-09081601Kinnigoli-09081602

Comments

comments

Comments are closed.

Read previous post:
ಆ.12 – ಶ್ರೀ ವರಮಹಾಲಕ್ಷ್ಮಿ ವೃತ ಪೂಜೆ

ಕಿನ್ನಿಗೋಳಿ: ಕಿನ್ನಿಗೋಳಿ ಕಾಳಿಕಾಂಬಾ ಮಹಿಳಾ ವೃಂದದ 9ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ವೃತ ಪೂಜೆ ಶುಕ್ರವಾರ ಆ. 12 ರಂದು ಬೆಳಿಗ್ಗೆ ಕಿನ್ನಿಗೋಳಿ ರಾಜರತ್ನಪುರದ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ...

Close