ಜನಮಾನಸದಲ್ಲಿ ಯಕ್ಷಗಾನ ತಾಳಮದ್ದಳೆ

ಕಿನ್ನಿಗೋಳಿ: ತುಳುನಾಡಿನ ಜನಮಾನಸದಲ್ಲಿ ಯಕ್ಷಗಾನ ತಾಳಮದ್ದಳೆ ಕೂಟಗಳು ಚಿರಸ್ಥಾಯಿಯಾಗಿದೆ. ಎಂದು ಕಟೀಲು ದೇವಳ ಅರ್ಚಕ ದೇವಿಕುಮರ ಆಸ್ರಣ್ಣ ಹೇಳಿದರು.

ಯಕ್ಷಲಹರಿ (ರಿ) ಯುಗಪುರುಷ ಸಂಯೋಜನೆಯ ಕರ್ನಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಯಕ್ಷಗಾನ ಬಯಲಾಟ ಅಕಾಡೆಮಿ ಸಹಯೋಗದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಬುಧವಾರ ನಡೆದ ಯಕ್ಷಲಹರಿಯ ೨೬ನೇ ವರ್ಷ ಸಂಭ್ರಮ ೨೦೧೬ ಯಕ್ಷಗಾನ ತಾಳಮದ್ದಲೆ ಸಪ್ತಾಹ ಧನ್ಯೋ ಗೃಹಸ್ಥಾಶ್ರಮ ೩ನೇ ದಿನದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಶೇಖರ ಕರ್ಕೇರ ಮಾತನಾಡಿ ಶಿಸ್ತು ಬದ್ಧ ಯಕ್ಷಗಾನ ತಾಳಮದ್ದಲೆಗಳು ಜನರಿಗೆ ಸಂಸ್ಕಾರ ಸಂಸ್ಕ್ರತಿ ಏಕಾಗ್ರತೆಗಳನ್ನು ಕಲಿಸಿಕೊಡುತ್ತವೆ. ಎಂದರು.

ಈ ಸಂದರ್ಭ ಯಕ್ಷಕಲಾವಿದ ಹವ್ಯಾಸಿ ಯಕ್ಷಗಾನ ಕಲಾವಿದ ಆನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಐಕಳ ಕರ್ನಾಟಕ ಬ್ಯಾಂಕ್ ಶಾಖಾ ಪ್ರಬಂಧಕ ರಘುರಾಮ ಕಾರಂತ, ಉದ್ಯಮಿ ಎ.ಕೆ.ರಾವ್, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಕಾರ್ಯದರ್ಶಿ ವಸಂತ ದೇವಾಡಿಗ ಉಪಸ್ಥಿತರಿದ್ದರು.
ಶ್ರೀವತ್ಸ ಕಾರ್ಯಕ್ರಮ ನಿರೂಪಿಸಿದರು.

Kinnigoli-10081603

Comments

comments

Comments are closed.

Read previous post:
Kinnigoli-10081602
ಕಮ್ಮಾಜೆ: ಸಸಿ ನೆಡುವ ಕಾರ್ಯಕ್ರಮ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್,...

Close