ಕಿನ್ನಿಗೋಳಿ: ಪ್ರತಿಭಾ ಕಾರಂಜಿ

ಕಿನ್ನಿಗೋಳಿ: ಪ್ರತಿಭಾ ಕಾರಂಜಿಗಳಂತಹ ಚಟುವಟಿಕೆಗಳಲ್ಲಿ ನಾಯಕತ್ವ, ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವ ವಿಕಸನ ರೂಪುಗೊಂಡು, ಭವಿಷ್ಯದಲ್ಲಿ ಮಕ್ಕಳನ್ನು ಸಶಕ್ತ ಪ್ರಜ್ಞಾವಂತ ಪ್ರತಿಭಾವಂತ ರನ್ನಾಗಿ ಮಾಡುತ್ತದೆ ಎಂದು ಸೈಂಟ್ ಮೇರಿಸ್ ಹಿ.ಪ್ರಾ. ಶಾಲಾ ಸಂಚಾಲಕ ಫಾ. ವಿನ್ಸೆಂಟ್ ಮೊಂತೆರೊ ಹೇಳಿದರು.
ದ.ಕ. ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ ವಲಯ ಹಾಗೂ ಕಿನ್ನಿಗೋಳಿ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ಜಂಟೀ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ನಡೆದ ಉಲ್ಲಂಜೆ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್ ಕಾರ್ಯಕ್ರಮ ಉದ್ಘಾಟಿಸಿದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಸಿ.ಆರ್.ಪಿ. ಜಯಲಕ್ಷ್ಮೀ , ಫಾ. ಜಾರ್ಜ್ ಕ್ರಾಸ್ತ, ಕಿನ್ನಿಗೋಳಿ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ಮುಖ್ಯ ಶಿಕ್ಷಕ ಫಾ. ಸುನಿಲ್ ಪಿಂಟೊ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ, ರುಡಾಲ್ಪ್ ಫೆರ್ನಾಡಿಂಸ್, ಲಾಜರಸ್ ಲೂವಿಸ್ ಮತಿತರರು ಉಪಸ್ಥಿತರಿದ್ದರು.
ಕಿನ್ನಿಗೋಳಿ ಸೈಂಟ್ ಮೇರೀಸ್ ಹಿ.ಪ್ರಾ. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಮೊಂತಿ ರೋಜಿ ಪಿಂಟೊ ಸ್ವಾಗತಿಸಿದರು. ಜೆಸಿಂತಾ ಆರಾನ್ಹ ಕಾರ್ಯಕ್ರಮ ನಿರೂಪಿಸಿದರು.

Kinnigoli-12081601

Comments

comments

Comments are closed.

Read previous post:
TuluSmall
ಆ. 13-14 ಮೂಲ್ಕಿಯಲ್ಲಿ ತುಳು ಸಮ್ಮೇಳನ

ಮೂಲ್ಕಿ : ತುಳುನಾಡಿನ ಪ್ರಪ್ರಥಮ ಬಾರಿಗೆ ಮೂವತ್ತು ವರ್ಷದ ಹಿಂದೆ ಸಾಂಸ್ಕೃತಿಕ ಮತ್ತು ಪಾರಂಪರಿಕ ಪ್ರದೇಶವಾಗಿರುವ ಮೂಲ್ಕಿಯ ಒಂಭತ್ತು ಮಾಗಣೆಯ ಪುಣ್ಯ ಕ್ಷೇತ್ರವಾಗಿರುವ ಸಾಮರಸ್ಯದ ಪ್ರತೀಕವಾದ ಬಪ್ಪನಾಡು ಶ್ರೀ...

Close