ಆ. 13-14 ಮೂಲ್ಕಿಯಲ್ಲಿ ತುಳು ಸಮ್ಮೇಳನ

TuluSmallಮೂಲ್ಕಿ : ತುಳುನಾಡಿನ ಪ್ರಪ್ರಥಮ ಬಾರಿಗೆ ಮೂವತ್ತು ವರ್ಷದ ಹಿಂದೆ ಸಾಂಸ್ಕೃತಿಕ ಮತ್ತು ಪಾರಂಪರಿಕ ಪ್ರದೇಶವಾಗಿರುವ ಮೂಲ್ಕಿಯ ಒಂಭತ್ತು ಮಾಗಣೆಯ ಪುಣ್ಯ ಕ್ಷೇತ್ರವಾಗಿರುವ ಸಾಮರಸ್ಯದ ಪ್ರತೀಕವಾದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ತುಳು ಸಮ್ಮೇಳನ ನಡೆದಿದ್ದು ಇದೀಗ ಇತಿಹಾಸ.
ಈ ಇತಿಹಾಸ ಮರಳಿ ತರುವ ಪ್ರಯತ್ನವಾಗಿ ಮೂಲ್ಕಿ ತುಳು ಸಮ್ಮೇಳನದ ಸಂಯೋಜನೆಯಲ್ಲಿ ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ನಾಲ್ಕನೇ ವರ್ಷದ ಸವಿನೆನಪಿಗಾಗಿ ಮೂಲ್ಕಿಯಲ್ಲಿ ಆಗಸ್ಟ್ 13 ಮತ್ತು 14 ರಂದು ಎರಡು ದಿನಗಳ ಕಾಲದಲ್ಲಿ “ತುಳು ಐಸಿರದ ಐಸ್ರ” ಎಂಬ ಹೆಸರಿನಲ್ಲಿ ಬಪ್ಪನಾಡು ಕ್ಷೇತ್ರದ ವಠಾರದಲ್ಲಿ ತುಳು ಸಮ್ಮೇಳನವನ್ನು ಸಂಯೋಜಿಸಲಾಗಿದೆ.
ಮುಂಬಯಿಯ ಹಿರಿಯ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿ ಮುಂಬೈಯವರು ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಆಗಸ್ಟ್ 13ರಂದು ಸಮ್ಮೇಳನವು “ತುಳುವೆರೆ ದಿಬ್ಬಣ”ದೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮ್ಮೇಳನಾಧ್ಯಕ್ಷರ ಆಕರ್ಷಕ ಮೆರವಣಿಗೆಯನ್ನು ತುಳು ಬಾಂಧವರೊಡನೆ ನಡೆಸುವ ದಿಬ್ಬಣವನ್ನು ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಶ್ರೀ ಶ್ರೀ ಸದ್ಗುರು ಶಶಿಕಾಂತ ಮಣಿಸ್ವಾಮೀಜಿಯವರು ಚಾಲನೆ ನೀಡುವರು.
“ತುಳುವ ಐಸಿರಿದ ಐಸ್ರ” ತುಳು ಸಮ್ಮೇಳನವನ್ನು ತುಳು ಭಾಷೆ, ಸಂಸ್ಕೃತಿ-ಸಂಸ್ಕಾರ-ಸಾಮಾಜಿಕ-ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷ ಪ್ರೋತ್ಸಾಹ ನೀಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸುವರು.
ವಿವಿಧ ಸ್ಟಾಲ್‌ಗಳನ್ನು, ಸಾಂಸ್ಕೃತಿಕ ಕಾರ್ಯಕ್ರಮವನ್ನು, ಛಾಯಾಚಿತ್ರ ಪ್ರದರ್ಶನ, ವೆಬ್‌ಸೈಟ್, ಪಲ್ಲ ಪೂಜೆಯನ್ನು ವಿವಿಧ ಕ್ಷೇತ್ರದ ಗಣ್ಯರು ವೇದಿಕೆಯಲ್ಲಿಯೇ ನೆರವೇರಿಸಲಿದ್ದಾರೆ. ಸಮಾಜದ ವಿವಿಧ ರೀತಿಯಲ್ಲಿ ಗುರುತಿಸಿಕೊಂಡಿರುವ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ನಂತರ ಪಾರಿ-ಪಾಡ್ದನ, ಸಂಧಿ-ಭೀರ, ಸೆಬಿಸವಾಲ್, ವಣಸ್ ತೆನಸ್‌ದ ಪೊರ್ತು, ಅರು ಪತ್ತಿ ತುಳು ಬಾಸೆ ಗೋಷ್ಠಿ-1ರಲ್ಲಿ ಡಿಜಿಟಲ್ ಮೀಡಿಯಾದಲ್ಲಿ ತುಳು ವಿಕಿಪಿಡಿಯ, ಶಾಲಾ ಮಕ್ಕಳಿಂದ ತೆಲಿಕೆ-ನಲಿಕೆ, ಗೋಷ್ಠಿ-2ರಲ್ಲಿ ಮುಂಬೈಯಲ್ಲಿ ತುಳು ಬಾಸೆದ ಬುಲೆಚ್ಚಿಲ್ ನಡೆಯಲಿದೆ. ಕಾವೂರು ಬಂಟರ ಸಂಘದಿಂದ ಜಾನಪದ ತುಳು ನಲಿಕೆಯನ್ನು ಪ್ರದರ್ಶಿಸಲಿದ್ದಾರೆ. ಗೋಷ್ಟಿ-3ರಲ್ಲಿ ತುಳು ಭಾಷೆ-ನೆಲ-ನೀರು ವಿಷಯದಲ್ಲಿ ನಡೆಯಲಿದೆ. ನಾಗೇಶ್ ಬಪ್ಪನಾಡು ಬಳಗದಿಂದ ವಾದ್ಯ ಗೋಷ್ಠಿ ನಡೆಯಲಿದೆ.
ತುಳು ಸಿನಿಮಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ತೋರಿದ ಹಿರಿಯರನ್ನು ಸನ್ಮಾನಿಸಲಾಗುವುದು, 2015ರಲ್ಲಿ ಬಿಡುಗಡೆಯಾದ ತುಳು ಸಿನಿಮಾದ ವಿವಿಧ ವಿಭಾಗಗಳ ಟೈಮ್ಸ್ ಆಫ್ ಕುಡ್ಲ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಆ ನಂತರ ಸಾಂಸ್ಕೃತಿಕ ಕಾರ್ಯಕ್ರಮವಾಗಿ ತುಳು ರಂಗದ-ರಂಗುಲು ಕಾರ್ಯಕ್ರಮವನ್ನು ಭೋಜರಾಜ್ ವಾಮಂಜೂರು ಹಾಗೂ ಅರವಿಂದ ಬೋಳಾರ್ ನಡೆಸಿಕೊಡಲಿದ್ದಾರೆ. ಹಾಗೂ ಸೋಮೇಶ್ವರದ ಯಕ್ಷಗಾನ ಕೇಂದ್ರ ಕಲಾಗಂಗೋತ್ರಿಯಿಂದ ಕುಡಿಯನ ಕೊಂಬಿರೆಲ್ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಆಗಸ್ಟ್ 14ರಂದು ಬೆಳಿಗ್ಗೆ ತುಳು ಸಿನಿಮಾ ಪದರಂಗಿತ ಹಾಗೂ ವಿಶೇಷ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ೪೦ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಗುವುದು. ಮಾನಂಪಾಡಿಯ ಮಹಿಳಾ ಮಂಡಲ ಹಾಗೂ ಮೂಲ್ಕಿ ಯುವವಾಹಿನಿ ಕಲಾವಿದರಿಂದ ತುಳುವರ ಆಚರಣೆ-ನಲಿಕೆ, ಟೈಮ್ಸ್ ಆಫ್ ಕುಡ್ಲಾ ಪತ್ರಿಕಾ ಅಂಕಣಗಾರರ ಗೌರವ, ಸಾಂಸ್ಕೃತಿಕ ಕಾರ್ಯಕ್ರಮದ ಬಹುಮುಖ ಪ್ರತಿಭೆ ತುಳು ಸಿರಿ ಪ್ರಶಸ್ತಿಯನ್ನು ಅದ್ವಿತಾ ಶೆಟ್ಟಿಯವರನ್ನು ಗೌರವಿಸಲಾಗುವುದು.
ಗೋಷ್ಠಿ-೩ರಲ್ಲಿ ಶಾಲೆಯಲ್ಲಿ ಮೂರನೇ ಭಾಷೆಯಾಗಿ ತುಳು ಎಂಬ ವಿಷಯದಲ್ಲಿ ಚರ್ಚೆ ನಡೆಯಲಿದೆ. ಡಾ.ಗಣನಾಥ್ ಶೆಟ್ಟಿ ಎಕ್ಕಾರ್‌ರಿಂದ ತುಳುವ ಗೊಬ್ಬುಲು, ಹಾಗೂ ಸುರತ್ಕಲ್ ಬಂಟರ ಸಂಘ ಮತ್ತು ಮೂಲ್ಕಿ ಯುವವಾಹಿನಿಯ ಕಲಾವಿದರಿಂದ ತುಳುವರೆ ಆಚರಣೆ ನಡೆಯಲಿದೆ. ಗೋಷ್ಠಿ-೪ರಲ್ಲಿ ತುಳು ಆರಾಧನೆ ಮತ್ತು ಆಚರಣೆ, ಸಸಿಹಿತ್ಲು ಯುವಕ ಮಂಡಲದ ಜಾನಪದ ನಲಿಕೆ ಪ್ರದರ್ಶನ ನಡೆಯಲಿದೆ. ಹಿರಿಯ-ಕಿರಿಯ ಸಾಹತ್ಯಾಸಕ್ತರಿಂದ ಚುಟುಕು ಕವಿಗೋಷ್ಠಿ, ಉಡುಪಿಯ ಶ್ರೀ ಕ್ಷೇತ್ರ ಅಂಬಲಪಾಡಿಯ ಕಲಾ ತಂಡದಿಂದ ತುಳುನಾಡಿನ ಡೋಲು ಪ್ರದರ್ಶನ ನಡೆಯಲಿದೆ.
ಸಮಾರೋಪ ಸಮಾರಂಭವನ್ನು ಸಮ್ಮೇಳನಾಧ್ಯಕ್ಷರಾದ ಡಾ.ಸುನೀತ ಎಂ. ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಆ ನಂತರ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕಿನ್ನಿಗೋಳಿಯ ವಿಜಯಾ ಕಲಾವಿದರಿಂದ ಭೈರಾಸ್ ಭಾಸ್ಕರೆ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಪತ್ರಿಕಾ ಗೋಷ್ಠಿಯಲ್ಲಿ  ಧರ್ಮದರ್ಶಿ ಹರಿಕೃಷ್ಣ ಪುನರೂರು. (ಗೌರವಾಧ್ಯಕ್ಷರು, ತುಳು ಸಮ್ಮೇಳನ ಸಮಿತಿ ಮೂಲ್ಕಿ), ಡಾ.ವೈ.ಎನ್.ಶೆಟ್ಟಿ (ಅಧ್ಯಕ್ಷರು, ತುಳು ಸಮ್ಮೇಳನ ಸಮಿತಿ, ಮೂಲ್ಕಿ), ಚಂದ್ರಶೇಖರ ಸುವರ್ಣ (ಕಾರ್ಯಾಧ್ಯಕ್ಷರು, ತುಳು ಸಮ್ಮೇಳನ ಸಮಿತಿ, ಮೂಲ್ಕಿ), ಎಸ್.ಆರ್.ಬಂಡಿಮಾರ್ (ಪ್ರಧಾನ ಸಂಚಾಲಕರು, ತುಳು ಸಮ್ಮೇಳನ ಸಮಿತಿ, ಮೂಲ್ಕಿ), ವಾಮನ ಇಡ್ಯಾ (ಸಂಚಾಲಕರು, ತುಳು ಸಮ್ಮೇಳನ ಸಮಿತಿ, ಮೂಲ್ಕಿ) ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-10081603
ಜನಮಾನಸದಲ್ಲಿ ಯಕ್ಷಗಾನ ತಾಳಮದ್ದಳೆ

ಕಿನ್ನಿಗೋಳಿ: ತುಳುನಾಡಿನ ಜನಮಾನಸದಲ್ಲಿ ಯಕ್ಷಗಾನ ತಾಳಮದ್ದಳೆ ಕೂಟಗಳು ಚಿರಸ್ಥಾಯಿಯಾಗಿದೆ. ಎಂದು ಕಟೀಲು ದೇವಳ ಅರ್ಚಕ ದೇವಿಕುಮರ ಆಸ್ರಣ್ಣ ಹೇಳಿದರು. ಯಕ್ಷಲಹರಿ (ರಿ) ಯುಗಪುರುಷ ಸಂಯೋಜನೆಯ ಕರ್ನಾಟಕ ಬ್ಯಾಂಕ್ ಪ್ರಧಾನ...

Close