ತುಳುವ ಐಸಿರಿದ ಐಸ್ರ

ಮೂಲ್ಕಿ :ತುಳು ಭಾಷೆಯನ್ನು 8ನೇ ಪರಿಛೇದಕ್ಕೆ ಸೇರಿಸುವ ಬಗ್ಗೆ ಪ್ರಧಾನಿ ಜೊತೆ ಮಾತನಾಡಲು ಕೇಂದ್ರ ಸಚಿವರ ಮೂಲಕ ಪ್ರಯತ್ನಿಸುತ್ತಿದ್ದು ಆಗಸ್ತ್ 17 ರ ನಂತರ ಭೇಟಿಗೆ ಸಮಯ ನಿಗದಿ ಪಡಿಸುವ ಸಾಧ್ಯತೆಯಿದ್ದು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ನೇತ್ರತ್ವದಲ್ಲಿ ನಿಯೋಗವು ಭೇಟಿ ಮಾಡಿ ಒತ್ತಾಯಿಸುವುದಾಗಿ ಈ ಬಗ್ಗೆ ತುಳು ಸಮ್ಮೇಳನದಲ್ಲಿ ನಿರ್ಣಯ ಮಂಡಿಸುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಹೇಳಿದರು.
ತುಳು ಸಮ್ಮೇಳನ ಸಮಿತಿ ಮೂಲ್ಕಿಯ ಆಶ್ರಯದಲ್ಲಿ ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ನಾಲ್ಕನೇ ವರ್ಷದ ನೆನಸಿಗಾಗಿ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಆವರಣದಲ್ಲಿ ಎರಡು ದಿನಗಳ ಕಾಲ ಜರಗಲಿರುವ “”ತುಳುವ ಐಸಿರಿದ ಐಸ್ರ”” ತುಳು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು 1994 ರಲ್ಲಿ ಮಂಗಳೂರಿನಲ್ಲಿ ನಡೆದ ಪ್ರಥಮ ತುಳು ಸಮ್ಮೇಳನದ ಬಳಿಕ ಜಿಲ್ಲೆಯಲ್ಲಿ ತುಳು ಭಾಷೆಯ ಬಗ್ಗೆ ಜಾಗೃತಿ ಮೂಡಿದ್ದು ಇತ್ತೀಚೆಗೆ ಉಜಿರೆಯಲ್ಲಿ ಜರಗಿದ ತುಳು ಸಮ್ಮೇಳನದಲ್ಲಿ ತುಳು ಭಾಷೆ “”ಕೋಡೆ,ಇನಿ,ಎಲ್ಲೆ ಬಗ್ಗೆ ಚರ್ಚೆ ನಡೆದಿದ್ದು ಈಗ ಹೆಚ್ಚಿನವರು ತುಳು ಮಾತನಾಡುತ್ತಿದ್ದು ಜೊತೆಗೆ ಜಿಲ್ಲೆಯು ಅಭಿವೃದ್ದಿಯನ್ನು ಕಂಡಿದೆ.ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಜಿಲ್ಲೆಯಲ್ಲಿ ದೊರೆಯುತ್ತಿದ್ದು ಅಡಕೆ,ರಬ್ಬರ್,ತೆಂಗು,ವೆನಿಲಾ ಬಳಿಕ ಕೃಷಿಯತ್ತ ವಾಲುತ್ತಿದ್ದು ಆರ್ಥಿಕವಾಗಿ ಸಬಲರಾಗಿರುವವರು ಕೃಷಿಗಾಗಿ ದೂರದೂರಿನಿಂದ ಬಂದು ಹಣ ವಿನಿಯೋಗಿಸುತ್ತಿದ್ದಾರೆ.ತುಳು ನಾಡಿನ ಮಣ್ಣಿನ ಮೇಲಿನ ಪ್ರೀತಿಯಿಂದ ಜನರಲ್ಲಿ ಬದಲಾವಣೆಯಾಗುತ್ತಿದೆ.ಜನರಲ್ಲಿ ಶೃದ್ದೆಯ ಜೊತೆಗೆ ಭಕ್ತಿ ಭಾವ ಮೂಡುತ್ತಿದೆ.ಹೆಚ್ಚಿನ ಸಂಖ್ಯೆಯಲ್ಲಿ ದೈವ,ದೇವರುಗಳ ಜೀರ್ಣೋದ್ಧಾರಗಳು ನಡೆಯುತ್ತಿದ್ದು ದೇವಸ್ಥಾನ,ದೈವಸ್ಥಾನಗಳು ಶಿಲಾಮಯವಾಗುತ್ತಿದೆ.ನೇತ್ರಾವತಿ ನದಿ ತಿರುವು ಯೋಜನೆಯ ಹೆಸರನ್ನು ಬದಲಾಯಿಸಿದ್ದು ಘಟ್ಟ ಪ್ರದೇಶದಲ್ಲಿ ಎತ್ತಿನ ಹೊಳೆ ಯೋಜನೆಯ ಕಾಮಗಾರಿ ಬಿರುಸಿನಿಂದ ಸಾಗುತ್ತಿದ್ದು ಜಿಲ್ಲೆಯಲ್ಲಿ ಹೆಚ್ಚಿನ ಪ್ರತಿಭಟನೆ ನಡೆಯುತ್ತಿದ್ದು ಆದರೆ ಪ್ರತಿಭಟನಕಾರರಲ್ಲಿ ಯಾರ ವಿರುದ್ದ ಪ್ರತಿಭಟನೆ ನಡೆಸಬೇಕೆನ್ನುವ ಬಗ್ಗೆ ಮಾಹಿತಿಯಲ್ಲದೆ ಗೊಂದಲವಾಗಿದೆ.ರಾಜಕಾರಣಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ.ಮುಂದಿನ ದಿನಗಳಲ್ಲಿ ನದಿಗಳಲ್ಲಿ ನೀರು ಉಳಿಯುವ ಸಾದ್ಯತೆ ಕಡಿಮೆಯಾಗಲಿದೆ.ತುಳು ಭಾಷೆಯ ಬಗ್ಗೆ ಜಾಗೃತಿ ಮೂಡಬೇಕಾದಲ್ಲಿ ಪ್ರತಿ 2 ವರ್ಷಕ್ಕೊಮ್ಮೆ ಜಿಲ್ಲಾ ಮಟ್ಟದಲ್ಲಿ ತುಳು ಸಮ್ಮೇಳನ ನಡೆಯಬೇಕೆಂದು ಅವರು ಹೇಳಿದರು.ಕಾರ್ಯಕ್ರಮವನ್ನು ದೀವಟಿಗೆ ಅರಳಿಸುವ ಮೂಲಕ ಅವರು ಉದ್ಘಾಟಿಸಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸಾಹಿತಿ ಡಾ ಸುನೀತಾ ಎಂ ಶೆಟ್ಟಿ ಮುಂಬೈಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತುಳು ನಾಡಿನ ಮಣ್ಣಿನಲ್ಲ ದೈವಿಕ ಶಕ್ತಿಯಿದ್ದು ತುಳು ಭಾಷೆಗೆ ಸಾಕಷ್ತು ಪ್ರಾತಿನಿಧ್ಯ ಸಿಗುತ್ತಿಲ್ಲ.ತುಳು ಭಾಷೆಗೆ ಸ್ಥಾನ ಮಾನ ಸಿಗುವ ವರೆಗೆ ನಿರಂತರ ಹೋರಾಟದ ಅಗತ್ಯವಿದೆಯೆಂದು ಹೇಳಿದರು.

ಮೂಲ್ಕಿಯ ಬಸ್ಸು ನಿಲ್ದಾಣದ ಬಳಿಯಿಂದ ಸಮ್ಮೇಳನದ ಸಭಾಂಗಣದವರೆಗೆ ಅತಿಥಿಗಳನ್ನು ವಿವಿಧ ಬಿರುದಾವಳಿಗಳೊಂದಿಗೆ ಮೆರವಣಿಗೆಯಲ್ಲಿ ಕರೆ ತರಲಾಯಿತು. ಬಾಳೇಕೋಡಿ ಶೀಲಾಂಜನ ಕ್ಷೇತ್ರದ ಶ್ರೀ ಸದ್ಗುರು ಶಶಿಕಾಂತ ಮಣಿಸ್ವಾಮಿಯವರು ಮೆರವಣಿಗೆಗೆ ಚಾಲನೆ ನೀಡಿದರು.ಶಾಲೆ ಕಾಲೇಜುಗಳ ತುಳು ಸಂಘದ ಉದ್ಘಾಟನೆಯನ್ನು ಎಸ್ ಸಿ ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರ ಕುಮಾರ್ ನೆರವೇರಿಸಿದರು.ಸ್ಟಾಲ್ ನ ಉದ್ಘಾಟನೆಯನ್ನು ಮುಂಬೈ ಸೇವಾ ಭರತಿಯ ಅಧ್ಯಕ್ಷ ಜಯ ಶೆಟ್ಟಿ ನೆರವೆರಿಸಿದರು,ಸಾಂಸ್ಕ್ರತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಯು ಎ ಇ ತುಳುವೆರ್ ಸಂಘಟನೆಯ ಮುಖ್ಯ ಸಂಚಾಲಕ ಸರ್ವೋತ್ತಮ ಶೆಟ್ಟಿ ನೆರವೇರಿಸಿದರು.ಛಾಯಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು ದೇವಾಡಿಗ ನೆರವೇರಿಸಿದರು.ಅಟಿಲ್ ದ ಅರಗಣೆಯನ್ನು ಕಟೀಲು ದೇವಳದ ಅನುವಂಶಿಕ ಮೊಕ್ತೇಸರರಾದ ಡಾ ಕೆ ರವೀಂದ್ರನಾಥ ಪೂಂಜ ನೆರವೇರಿಸಿದರು.ಸುದ್ದಿ ಜಾಲವನ್ನು ಮುಂಬೈನ ಉದ್ಯಮಿ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಿದರು.ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಶ್ರೀಮತಿ ಜಾನಕಿ ಬ್ರಹ್ಮಾವರ,ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್,ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷ ನವೀನ್ ಚಂದ್ರ ಸುವರ್ಣ,ಎಕ್ಕಾರು ಕೊಡಮಣಿತ್ತಾಐ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಎಕ್ಕಾರು,ಮೂಲ್ಕಿಯ ಚರ್ಚಿನ ಧರ್ಮಗುರು ವಂದನೀಯ ಫ್ರಾನ್ಸಿಸ್ ಝೇವಿಯರ್ ಗೋಮ್ಸ್,ಮೂಲ್ಕಿಯ ಕೇಂದ್ರ ಶಾಫಿ ಜುಮ್ಮಾ ಮಸೀದಿಯ ಸಮಿತಿಯ ಅಧ್ಯಕ್ಷ ಇಕ್ಬಾಲ್ ಅಹಮ್ಮದ್,ಬಾರ್ಕೂರು ಕಚ್ಚೂರ‍್ದ ಮಾಲ್ದಿ ದೇವಸ್ಥಾನದ ಗೌರವಾದ್ಯಕ್ಷ ಚೆನ್ನಪ್ಪ,ಆಶ್ರಯ ಚಾರಿಟೇಬಲ್ ಟ್ಸ್ತ್ ಕುಡ್ಲದ ಅಧ್ಯಕ್ಷೆ ಡಾ ಆಶಾಜ್ಯೋತಿ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಮೂಲ್ಕಿಯ ಬಪ್ಪನಾಡು ದೇವಳದ ಅನುವಂಶಿಕ ಮೊಕ್ತೇಸರರಾದ ದುಗ್ಗಣ್ಣ ಸಾವಂತರು,ಎನ್ ಎಸ್ ಮನೋಹರ್ ಶೆಟ್ಟಿ,ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಜಯಮ್ಮ.,ಪದ್ಮರಾಜ್ ಎಕ್ಕಾರು, ಸಸಮ್ಮೇಳನ ಸಮಿತಿಯ ಮುಂಬೈ ಸಮಿತಿಯ ಪ್ರಭಾಕರ ಎಲ್ ಶೆಟ್ಟಿ,ಜಿ ಟಿ ಆಚಾರ್ಯ ಮತ್ತಿತರರು ಉಪಸ್ತಿತರಿದ್ದರು.
ಸಮ್ಮೇಳನ ಸಮಿತಿಯ ಪ್ರಧಾನ ಸಂಚಾಲಕ ಎಸ್ ಆರ್ ಬಂಡಿಮಾರ್ ಸ್ವಾಗತಿಸಿದರು,.ಅಧ್ಯಕ್ಷ ಡಾ ವೈ ಎನ್ ಶೆಟ್ಟಿ ಪ್ರಸ್ತಾವನೆಗೈದರು.ಕಾರ್ಯಾಧ್ಯಕ್ಷ ಚಂದ್ರಶೇಕರ ಸುವರ್ಣ ವಂದಿಸಿದರು,ನವೀನ್ ಶೆಟ್ಟಿ ಎಡ್ಮೆಮಾರ್ ಮತ್ತು ರಾಜೇಶ್ವರಿ ನಿರೂಪಿಸಿದರು.

Mulki-13081601 Mulki-13081602 Mulki-13081603 Mulki-13081604 Mulki-13081605 Mulki-13081606 Mulki-13081607 Mulki-13081608

Comments

comments

Comments are closed.

Read previous post:
Kinnigoli-12081602
ಶ್ರೀ ವರಮಹಾಲಕ್ಷ್ಮಿ ವೃತ ಪೂಜೆ

ಕಿನ್ನಿಗೋಳಿ : ಕಿನ್ನಿಗೋಳಿ ಕಾಳಿಕಾಂಬಾ ಮಹಿಳಾ ವೃಂದದ 9ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ವೃತ ಪೂಜೆ ಶುಕ್ರವಾರ ಕಿನ್ನಿಗೋಳಿ ರಾಜರತ್ನಪುರದ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ನಡೆಯಿತು. ಕಟೀಲು ಹಾಲು...

Close