ತುಳು ಕಲಿಕೆ : 20 ಶಾಲೆಗಳಲ್ಲಿ 956 ವಿದ್ಯಾರ್ಥಿಗಳು

ಪುತ್ತೂರಲ್ಲೇ 723 ವಿದ್ಯಾರ್ಥಿಗಳು
ಮೂಲ್ಕಿ : ಶಾಲೆಗಳಲ್ಲಿ ಆರನೇ ತರಗತಿಯಿಂದ ೧೦ನೇ ತರಗತಿಯವರೆಗೆ ಮೂರನೇ ಭಾಷೆಯಾಗಿ ತುಳು ಕಲಿಸಲು ಸರಕಾರ 2010 ರಲ್ಲಿ ಮುಂದಾಗಿದ್ದು, ಈ ವರುಷ ಮಂಗಳೂರು ಹಾಗೂ ಉಡುಪಿಯ ಇಪ್ಪತ್ತು ಶಾಲೆಗಳಲ್ಲಿ 956 ವಿದ್ಯಾರ್ಥಿಗಳು ತುಳು ಕಲಿಯುತ್ತಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಹೇಳಿದರು.
ಅವರು ಮೂಲ್ಕಿಯಲ್ಲಿ ತುಳು ಸಮ್ಮೇಳನದಲ್ಲಿ ಅರುಪತ್ತಿ ತುಳು ಭಾಷೆ ಗೋಷ್ಟಿಯಲ್ಲಿ ಶಾಲೆಡ್ ಮೂಜನೇ ಭಾಷೆಯಾದ್ ತುಳು ಕಲ್ಪುಲೆ ವಿಚಾರವಾಗಿ ಮಾತನಾಡಿದರು.
ತುಳು ಕಲಿಸಲು ಕ್ರಿಶ್ಚಿಯನ್ ವಿದ್ಯಾ ಸಂಸ್ಥೆಗಳು ಆಸಕ್ತಿ ವಹಿಸಿದಷ್ಟು ತುಳುವರ ಶಾಲೆಗಳ ಆಡಳಿತ ಮಂಡಳಿಗಳು ವಹಿಸುತ್ತಿಲ್ಲ. ಕಳೆದ ವರ್ಷ ಎಂಟು ವಿದ್ಯಾಸಂಸ್ಥೆಗಳಲ್ಲಿ 265 ಮಂದಿ ತುಳು ಕಲಿತ್ತಿದ್ದರೆ, ಈ ಬಾರಿ ಸುಳ್ಯ ತಾಲೂಕಿನ ಮೂರು, ಬಂಟ್ವಾಳದ ಎರಡು, ಬೆಳ್ತಂಗಡಿಯ ಎರಡು ಮಂಗಳೂರು ಹಾಗೂ ಉಡುಪಿಯ ತಲಾ ಒಂದು ಶಾಲೆಗಳಲ್ಲಿ ತುಳು ಕಲಿಸುತ್ತಿದ್ದರೆ, ಪುತ್ತೂರು ತಾಲೂಕಿನ 12 ಶಾಲೆಗಳಲ್ಲಿ 727 ವಿದ್ಯಾರ್ಥಿಗಳು ತುಳು ಕಲಿಯುತ್ತಿದ್ದಾರೆ. ಮುಂದಿನ ವರುಷ ಪಿಯುಸಿಯಲ್ಲೂ ದ್ವಿತೀಯ ಭಾಷೆಯಾಗಿ ತುಳು ಕಲಿಕೆ ಆರಂಭವಾಗುವ ಸಾಧ್ಯತೆಗಳಿವೆ. ಆದರೂ ಅನೇಕ ಶಾಲೆಗಳ ಮುಖ್ಯಸ್ಥರು ತುಳು ಪಾಠದ ಬಗ್ಗೆ ತಿಳಿದುಕೊಂಡಿಲ್ಲ. ತುಳು ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸಲು ಶಾಲೆಗಳಲ್ಲಿ ತುಳು ಕಲಿಸುವುದೂ ಮುಖ್ಯವಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಫ್ರಾಂಕ್ ಹಿಲರಿ ಡಿಸೋಜ, ಸೇಸಪ್ಪ ರೈ, ಜಯಸೂರ‍್ಯ ರೈ, ಬಾಲಚಂದ್ರ ಸನಿಲ್, ವಿಶ್ವನಾಥ ಬಾಯಿರಿ ಮುಂತಾದವರಿದ್ದರು.

Comments

comments

Comments are closed.

Read previous post:
Mulki-13081607
ತುಳುವ ಐಸಿರಿದ ಐಸ್ರ

ಮೂಲ್ಕಿ :ತುಳು ಭಾಷೆಯನ್ನು 8ನೇ ಪರಿಛೇದಕ್ಕೆ ಸೇರಿಸುವ ಬಗ್ಗೆ ಪ್ರಧಾನಿ ಜೊತೆ ಮಾತನಾಡಲು ಕೇಂದ್ರ ಸಚಿವರ ಮೂಲಕ ಪ್ರಯತ್ನಿಸುತ್ತಿದ್ದು ಆಗಸ್ತ್ 17 ರ ನಂತರ ಭೇಟಿಗೆ ಸಮಯ...

Close