ಧನ್ಯೋ ಗೃಹಸ್ಥಾಶ್ರಮಃ ಸಮಾರೋಪ

ಕಿನ್ನಿಗೋಳಿ: ಕರವಾಳಿಯ ಯಕ್ಷಗಾನ ಬಯಲಾಟ ಹಾಗೂ ತಾಳಮದ್ದಳೆಗಳ ಕಲಾ ಪ್ರಕಾರಗಳಲ್ಲಿ ಸಮಾಜಕ್ಕೆ ಧಾರ್ಮಿಕ ಚಿಂತನೆಯ ಮೂಲಕ ಶಿಸ್ತು ಸಂಸ್ಕೃತಿ ಸಂಸ್ಕಾರಗಳನ್ನು ತಿಳಿಹೇಳಿ ಯುವ ಸಮಾಜದ ಭವ್ಯ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಎಂದು ಕರ್ಣಾಟಕ ಬ್ಯಾಂಕ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಮತ್ತು ಮುಖ್ಯ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ ಹೇಳಿದರು.
ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿಯ ಯಕ್ಷಲಹರಿ – ಯುಗಪುರುಷ ಸಹಯೋಗದೊಂದಿಗೆ ಯಕ್ಷಲಹರಿ ೨೬ನೇ ವರ್ಷ ಸಂಭ್ರಮ-೨೦೧೬ ಕರ್ನಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಯಕ್ಷಗಾನ ಬಯಲಾಟ ಅಕಾಡೆಮಿ ಸಹಯೋಗದಲ್ಲಿ ಯಕ್ಷಲಹರಿಯ ೨೬ನೇ ವರ್ಷ ಸಂಭ್ರಮ ೨೦೧೬ ಯಕ್ಷಗಾನ ತಾಳಮದ್ದಲೆ ಸಪ್ತಾಹ ಧನ್ಯೋ ಗೃಹಸ್ಥಾಶ್ರಮಃ ಕಾರ್ಯಕ್ರಮದದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ, ಮದ್ದಳೆವಾದಕ ರಾಮಯ್ಯ ಶೆಟ್ಟಿಗಾರ್ ಕೆಂಚನಕೆರೆ, ಕಲಾ ಪೋಷಕರ ನೆಲೆಯಲ್ಲಿ ಮುಂಬಯಿ ಉದ್ಯಮಿ ಬಾಬು ಶೀನ ಶೆಟ್ಟಿ ಪೆರಾರ , ಮಂಗಳೂರಿನ ಉದ್ಯಮಿ ಸ್ಮಿತಾ ಶೆಣೈ ಮತ್ತು ಪ್ರಕಾಶ ಶೆಣೈ ದಂಪತಿಗಳನ್ನು ಸನ್ಮಾನಿಸಲಾಯಿತು.
ಮೂಡಬಿದಿರೆ ಧನಲಕ್ಷ್ಮೀ ಕ್ಯಾಷ್ಯೂ ಸಂಸ್ಥೆ ಮಾಲಕ ಕೆ. ಶ್ರೀಪತಿ ಭಟ್ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಕಟೀಲು ದೇವಳ ಅರ್ಚಕ ವೆ. ಮೂ. ಲಕ್ಷ್ಮೀನಾರಾಯಣ ಆಸ್ರಣ್ಣ ಶುಭಾಶಂಸನೆಗೈದರು.
ವಿಶ್ವಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹಾಗೂ ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ವಿಜಯಾ ಬ್ಯಾಂಕ್‌ನ ಉಪ ಮಹಾ ಪ್ರಬಂಧಕ ಕೆ. ಸುರೆಂದ್ರ ಹೆಗ್ಡೆ ಅವರು ೨೫ ಕ್ಕೂ ಮಿಕ್ಕಿ ಕಲಾವಿದ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ ವಿತರಿಸಿದರು. ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಪುನರೂರು ವಿಪ್ರ ಸಂಪದ ಅಧ್ಯಕ್ಷ ಸುರೇಶ್ ರಾವ್ ನೀರಳಿಕೆ, ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ವೈ. ಯೋಗೀಶ್ ರಾವ್, ಕಿನ್ನಿಗೋಳಿ ರೋಟರಿ ಕಾರ್ಯದರ್ಶಿ ದೇವಿದಾಸ ಶೆಟ್ಟಿ, ಕೃಷ್ಣ ರಾಜ್ ಭಟ್ ಅತ್ತೂರು, ವಿನಯಾ ಆಚಾರ್ ಹೊಸಬೆಟ್ಟು, ಶ್ರೀವತ್ಸ ಭಟ್, ಡಾ| ರಾಧಕೃಷ್ಣ ಭಟ್ ಪೆರ್ಲ, ಉಮೇಶ್ ನೀಲಾವರ, ಸುಧಾಕರ ಕುಲಾಲ್, ಯೋಗೀಶ್ ಆಚಾರ್ಯ , ಅಶೋಕ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಯುಗಪುರುಷದ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ ಪ್ರಸ್ತಾವನೆಗೈಗದರು. ಯಕ್ಷಲಹರಿ ಅಧ್ಯಕ್ಷ ಪಿ.ಸತೀಶ್ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ, ರಘುನಾಥ ಕಾಮತ್ ಕೆಂಚನಕೆರೆ ಅಭಿನಂಧನ ಭಾಷಣಗೈದರು. ಕಾರ್ಯದರ್ಶಿ ವಸಂತ ದೇವಾಡಿಗ ವಂದಿಸಿದರು. ದೀಪ್ತಿ ಬಾಲಕೃಷ್ಣ ಭಟ್ ನಿರೂಪಿಸಿದರು.

Kinnigoli-1508201601

Comments

comments

Comments are closed.

Read previous post:
ವರಮಹಾಲಕ್ಷ್ಮೀ ಪೂಜೆ ತುಳುನಾಡಿನ ಆರಾಧನೆಯಲ್ಲ – ಕೆ.ಎಲ್.ಕುಂಡಂತಾಯ

ಮೂಲ್ಕಿ: ತುಳುನಾಡಿನ ನಂಬಿಕೆ ನಡವಳಿಕೆಗಳ ಬಗ್ಗೆ ಸರಿಯಾಗಿ ತಿಳಿಯದೆ ಹಾದಿ ತಪ್ಪುತ್ತಿದ್ದೇವೆ. ನಾಗಾರಾಧನೆ ತುಳುನಾಡಿನ ಆರಾಧನೆ ಹೌದು. ಆದರೆ ನಾಗರ ಪಂಚಮಿ ಇಲ್ಲಿನ ಅರಾಧನಾ ಪರ್ವ ದಿನವಲ್ಲ....

Close