ತುಳು ಐಸಿರದ ಐಸ್ರ ಸಮಾರೋಪ

ಮುಲ್ಕಿ : ತುಳು ಬಾಷೆ ಉಳಿಯಬೇಕಾದರೆ ಕೃಷಿ ಉಳಿಯಬೇಕು, ಕೃಷಿ ಮತ್ತು ಬಾಷೆಗೆ ಹತ್ತಿರದ ಸಂಬಂಧ, ತುಳು ಬಾಷೆ ಎಂಟನೇ ಪರಿಛೇದಕ್ಕೆ ಸೇರಬೇಕಾದರೆ ನಮ್ಮೆಲ್ಲರ ಪ್ರಯತ್ನ ಅಗತ್ಯ ಎಂದು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಹೇಳಿದರು ಅವರು ಮುಲ್ಕಿಯ ಬಪ್ಪನಾಡು ದೇವಳದ ಅವರಣದಲ್ಲಿ ನಡೆದ , ಟೈಮ್ಸ್ ಆಪ್ ಕುಡ್ಲ ತುಳು ಪತ್ರಿಕೆಯು ನಾಲ್ಕನೇ ವರ್ಷದ ಪಾದರ್ಪಾಣೆಯ ಸಂದರ್ಭ ತುಳು ಐಸಿರದ ಐಸ್ರ ತುಳು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆಶೀರ್ವಾಚನ ನೀಡಿ ಮಾತನಾಡಿದರು ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಸುನೀತ ಎಂ ಶೆಟ್ಟಿ ತುಳುವಿಗೆ ರಾಜ್ಯ ಮಾರ್ಯಾದೆ ಸಿಗದ ಕಾರಣ ತುಂಭಾ ನಷ್ಟವಾಗಿದೆ, ಆಯಾಯ ಪ್ರದೇಶದ ಬಾಷೆಗಳ ಶಬ್ದಗಳನ್ನು ಉಪಯೋಗಿಸುದರಿಂದ ಆ ಬಾಷೆಯ ಉಳಿವು ಸಾದ್ಯವಿದೆ, ನಮ್ಮ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ನಾವೇ ಕಲಿಸಬೇಕು ಮಾತ್ರವಲ್ಲದೆ ತುಳು ಕಲಿಗೆ ಪ್ರೋತ್ಸಾಹ ಅಗತ್ಯ ಇದೆ ಎಂದರು, ಈ ಸಂದರ್ಭದಲ್ಲಿ ಸಂಮ್ಮೇಳನಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಖಂಡಿಗೆ ಧರ್ಮರಸು ಉಳ್ಳಾಯ ದೈವಸ್ಥಾನದ ಅದಿತ್ಯ ಮುಕಾಲ್ದಿ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೇಟ್ಟಿ ಬೆಳ್ಳಾರೆ, ಸುರತ್ಕಲ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ, ಅಖಿಲ ಬಾರತ ತುಳು ಒಕ್ಕೂಟದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಕರ್ನಾಟಕ ಬ್ಯಾಂಕ್ ನ ಅಧಿಕಾರಿ ಶ್ರೀನಿವಾಸ ದೇಶಪಾಂಡೆ, ಕಟೀಲು ದೇವಳದ ಆಡಳಿತ ಮೂಕ್ತೇಸರ ಡಾ.ರವೀಂದ್ರನಾಥ ಪೂಂಜ, ಸುರತ್ಕಲ್ ಸೂರಜ್ ಇಂಟರ್ ನ್ಯಾಶಿನಲ್ ನ ತೆಳ್ಳಾರೆ ರವೀಂದ್ರ ಪೂಜಾರಿ, ರವೀಂದ್ರ ಶೆಟ್ಟಿ, ನಂದಳಿಕೆ ನಾರಯಣ ಶೆಟ್ಟಿ, ಕೆ.ಕೆ.ಶೆಟ್ಟಿ, ಜಯ ಶೆಟ್ಟಿ, ಸುರೇಂದ್ರ ಶೆಟ್ಟಿ, ಮುಂಬೈ ಮುಂಬೈ ಜೆ.ಟಿ.ಆಚಾರ್ಯ, ಹರಿಕೃಷ್ಣ ಪುನರೂರು, ವೈ.ಎನ್ ಶೆಟ್ಟಿ, ಮೀನಾಕ್ಷಿ ಬಂಗೇರ, ದೇವಪ್ರಸಾದ್ ಪುನರೂರು, ಮತ್ತಿತರರು ಇದ್ದರು.

Mulki16091601

Comments

comments

Comments are closed.

Read previous post:
Kinnigoli-1508201601
ಧನ್ಯೋ ಗೃಹಸ್ಥಾಶ್ರಮಃ ಸಮಾರೋಪ

ಕಿನ್ನಿಗೋಳಿ: ಕರವಾಳಿಯ ಯಕ್ಷಗಾನ ಬಯಲಾಟ ಹಾಗೂ ತಾಳಮದ್ದಳೆಗಳ ಕಲಾ ಪ್ರಕಾರಗಳಲ್ಲಿ ಸಮಾಜಕ್ಕೆ ಧಾರ್ಮಿಕ ಚಿಂತನೆಯ ಮೂಲಕ ಶಿಸ್ತು ಸಂಸ್ಕೃತಿ ಸಂಸ್ಕಾರಗಳನ್ನು ತಿಳಿಹೇಳಿ ಯುವ ಸಮಾಜದ ಭವ್ಯ ನಿರ್ಮಾಣದಲ್ಲಿ ಮಹತ್ತರ...

Close