ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ

ಕಿನ್ನಿಗೋಳಿ : ಸೇವಾ ಸಂಸ್ಥೆಗಳು ಜನಪರ ಕಾಳಜಿಯೊಂದಿಗೆ ಆರ್ಥಿಕವಾಗಿ ಹಿಂದುಳಿದವರಿಗೆ ಸೇವಾ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಹಿರಿಯ ಕೃಷಿಕರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಹಿರಿಯ ಪತ್ರಕರ್ತ ಉಳೆಪಾಡಿ ದುರ್ಗಾಪರಮೇಶ್ವರೀ ದೇವಳದ ಧರ್ಮದರ್ಶಿ ಮೋಹನ್‌ದಾಸ್ ಸುರತ್ಕಲ್ ಹೇಳಿದರು.
ಸೋಮವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ಲಯನ್ಸ್ -ಲಯೆನೆಸ್ ಕ್ಲಬ್‌ಗಳ ಸಹಯೋಗದಲ್ಲಿ ಸಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈಸಂದರ್ಭ ಪ್ರಗತಿಪರ ಹಿರಿಯ ಕೃಷಿಕ ಬಾಲಣ್ಣ ಶೆಟ್ಟಿ ಮುಕ್ಕ, ರಾಮಣ್ಣ ಶೆಟ್ಟಿ , ಜಯ ಶೆಟ್ಟಿ , ಲಿಲ್ಲಿಪಿರೇರಾ, ಕಾಂತಪ್ಪ ಪೂಜಾರಿ, ಥೋಮಸ್ ಡಿಸೋಜ, ವಿಶ್ವನಾಥ ಶೆಟ್ಟಿ , ಜೋನ್ ಲಿಯೋಡಿಸೋಜ, ಮಾರ್ಕಡಿಸೋಜ ಅವರನ್ನು ಗೌರವಿಸಲಾಯಿತು.
ಪರಿಸರದ ೧೫ ಶಾಲಾ ಪ್ರತಿಭಾವಂತ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ನಿಕಟಪೂರ್ವ ಅಧ್ಯಕ್ಷ ಸುಧಾಕರ ಶೆಟ್ಟಿ , ಲಯನೆಸ್ ಅಧ್ಯಕ್ಷೆ ವತ್ಸಲ ರಾವ್, ಕಾರ್ಯದರ್ಶಿ ಸವಿತಾ ಪಿ. ಶೆಟ್ಟಿ , ಕೋಶಾಧಿಕಾರಿ ಭುಜಂಗ ಬಂಜನ್, ಲೀಲಾ ಬಂಜನ್ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ವೈ. ಯೋಗೀಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-18081602

Comments

comments

Comments are closed.

Read previous post:
Kinnigoli-18081601
ಮಾಜಿ ಯೋಧ ನೋಯಲ್ ಡಿಸೋಜ ಸನ್ಮಾನ

ಕಿನ್ನಿಗೋಳಿ: ಮಕ್ಕಳಿಗೆ ಎಳವೆಯಲ್ಲಿಯೇ ಆದರ್ಶ ಪ್ರೀತಿ ತ್ಯಾಗ ಸೇವೆಗಳ ಬಗ್ಗೆ ಮಾರ್ಗದರ್ಶನ ನೀಡಿ ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಕಟೀಲು ದೇವಳ ಆಡಳಿತ ಮೊಕ್ತೇಸರ ಕಟೀಲು ದೇವಳ...

Close