ಮಾಜಿ ಯೋಧ ನೋಯಲ್ ಡಿಸೋಜ ಸನ್ಮಾನ

ಕಿನ್ನಿಗೋಳಿ: ಮಕ್ಕಳಿಗೆ ಎಳವೆಯಲ್ಲಿಯೇ ಆದರ್ಶ ಪ್ರೀತಿ ತ್ಯಾಗ ಸೇವೆಗಳ ಬಗ್ಗೆ ಮಾರ್ಗದರ್ಶನ ನೀಡಿ ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಕಟೀಲು ದೇವಳ ಆಡಳಿತ ಮೊಕ್ತೇಸರ ಕಟೀಲು ದೇವಳ ಆಡಳಿತ ಮೊಕ್ತೇಸರ ಡಾ. ರವೀಂದ್ರನಾಥ ಪೂಂಜ ಹೇಳಿದರು.
ಕಿನ್ನಿಗೋಳಿ ರೋಟರಿ, ರೋಟರ‍್ಯಾಕ್ಟ್, ಇನ್ನರ್ ವೀಲ್ ಕ್ಲಬ್‌ಗಳ ಸಹಯೋಗದೊಂದಿಗೆ ಬಲ್ಲಾಣ ಪ್ರೀತಿ ಸದನದ ಮಕ್ಕಳೊಂದಿಗೆ ಸೋಮವಾರ ನಡೆದ ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭ ಮಾತನಾಡಿದರು.
ಈ ಸಂದರ್ಭ ಮಾಜಿ ಯೋಧ ನೋಯಲ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಪ್ರೀತಿ ಸದನದ ಮಕ್ಕಳಿಗೆ ಆಟೋಟ ಸ್ಪರ್ಧೇಗಅನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.
ಬಲ್ಲಾಣ ಪ್ರೀತಿ ಸದನದ ಮುಖ್ಯಸ್ಥೆ ಭಗಿನಿ ಮಾರ್ಗರೆಟ್, ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಮಾನಂದ ಪೂಜಾರಿ, ರೋಟರಿ ಮಾಜಿ ಅಧ್ಯಕ್ಷರುಗಳಾದ ಜಯರಾಮ ಪೂಂಜಾ, ಎಂ.ಬಾಲಕೃಷ್ಣ ಶೆಟ್ಟಿ, ರೋಟರ‍್ಯಾಕ್ಟ್ ಅಧ್ಯಕ್ಷ ಅಶೋಕ ಎಸ್., ಇನ್ನರ್ ವೀಲ್ ಅಧ್ಯಕ್ಷೆ ವಿಮಲಾ ತ್ಯಾಗರಾಜ ಆಚಾರ್ಯ, ಪ್ರವೀಣ ಭಂಡಾರಿ, ಸುದೀರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-18081601

Comments

comments

Comments are closed.

Read previous post:
Mulki16091601
ತುಳು ಐಸಿರದ ಐಸ್ರ ಸಮಾರೋಪ

ಮುಲ್ಕಿ : ತುಳು ಬಾಷೆ ಉಳಿಯಬೇಕಾದರೆ ಕೃಷಿ ಉಳಿಯಬೇಕು, ಕೃಷಿ ಮತ್ತು ಬಾಷೆಗೆ ಹತ್ತಿರದ ಸಂಬಂಧ, ತುಳು ಬಾಷೆ ಎಂಟನೇ ಪರಿಛೇದಕ್ಕೆ ಸೇರಬೇಕಾದರೆ ನಮ್ಮೆಲ್ಲರ ಪ್ರಯತ್ನ ಅಗತ್ಯ ಎಂದು...

Close