ಪುನರೂರು ಪ್ರತಿಭಾ ಕಾರಂಜಿ

ಕಿನ್ನಿಗೋಳಿ : ಪ್ರತಿಭಾ ಕಾರಂಜಿಗಳಲ್ಲಿ ಭಾಗವಹಿಸಿದಾಗ ನಾಯಕತ್ವ, ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಮಕ್ಕಳು ಇದರ ಸದಾವಕಾಶ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು ಹೇಳಿದರು.
ಕ್ಷೇತ್ರ ಶಿಕ್ಷಣಾಕಾರಿಯವರ ಕಛೇರಿ, ಮಂಗಳೂರು ಉತ್ತರ ವಲಯ, ಪುನರೂರು ಭಾರತ ಮಾತಾ ಪ್ರೌಢ ಶಾಲಾ ಜಂಟಿ ಆಶ್ರಯದಲ್ಲಿ ಬುಧವಾರ ಪುನರೂರು ಭಾರತ ಮಾತಾ ಪ್ರೌಢ ಶಾಲೆಯಲ್ಲಿ ನಡೆದ ಮುಲ್ಕಿ ವಲಯ ಮಟ್ಟದ ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸಾಂಸ್ಕ್ರತಿಕ ಸ್ಪರ್ಧೆಗಳು 2016-17 ಉದ್ಘಾಟಿಸಿ ಮಾತನಾಡಿದರು.
ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಸಿ.ಆರ್.ಪಿ. ಜಗದೀಶ್ ನಾವಡ , ಉದ್ಯಮಿ ಸುರೇಶ್ ರಾವ್ ಪುನರೂರು, ಕಿನ್ನಿಗೋಳಿ ಪಂಚಾಯಿತಿ ಸದಸ್ಯ ರವೀಂದ್ರ ದೇವಾಡಿಗ, ಪುನರೂರು ಭಾರತ ಮಾತಾ ಹಿ.ಪ್ರಾ ಮುಖ್ಯ ಶಿಕ್ಷಕ ಕೃಷ್ಣ ಮೂರ್ತಿ ರಾವ್, ಶಾಲಾ ಶಿಕ್ಷಕ ರಕಕ ಸಂಘದ ಅಧ್ಯಕ್ಷೆ ಗ್ರೇಸಿ ಸಿಕ್ವೇರಾ ಉಪಸ್ಥಿತರಿದ್ದರು.
ಭಾರತ ಮಾತಾ ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ರಾವ್ ಸ್ವಾಗತಿಸಿ ಶಿಕ್ಷಕಿ ಲತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

Kinnigoli-18081603

Comments

comments

Comments are closed.

Read previous post:
Kinnigoli-18081602
ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ

ಕಿನ್ನಿಗೋಳಿ : ಸೇವಾ ಸಂಸ್ಥೆಗಳು ಜನಪರ ಕಾಳಜಿಯೊಂದಿಗೆ ಆರ್ಥಿಕವಾಗಿ ಹಿಂದುಳಿದವರಿಗೆ ಸೇವಾ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಹಿರಿಯ ಕೃಷಿಕರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಹಿರಿಯ ಪತ್ರಕರ್ತ ಉಳೆಪಾಡಿ ದುರ್ಗಾಪರಮೇಶ್ವರೀ...

Close