ಕೆರೆಕಾಡು ಸಸಿ ವಿತರಣೆ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ವತಿಯಿಂದ ಕೆರೆಕಾಡು ಸ.ಹಿ.ಪ್ರಾ. ಶಾಲೆಯಲ್ಲಿ ವನಮಹೋತ್ಸವ ಆಚರಿಸಲಾಯಿತು. ವಿವಿಧ ರೀತಿಯ ಹಣ್ಣುಗಳ ಸಸಿಗಳನ್ನು ಶಾಲಾ ವಠಾರದಲ್ಲಿ ನೆಡಲು ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಅಶೋಕ್ ಎಸ್. ಶಾಲಾ ಮುಖ್ಯ ಶಿಕ್ಷಕರಿಗೆ ಹಸ್ತಾತರಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಅಡಿಕೆ ಸಸಿಗಳನ್ನು ನೀಡಲಾಯಿತು.
ಈ ಸಂಧರ್ಭ ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯೆ ಸುರೇಕ ಕರುಣಾಕರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಹೇಮಚಂದ್ರ ಶೆಟ್ಟಿಗಾರ್, ಶಿಕ್ಷಕರಧ ಸದಾಶಿವ ಆಚಾರಿ, ನವೀನ್ ಡಿಕೋಸ್ತಾ, ರೋಟರ‍್ಯಾಕ್ಟ್ ಕ್ಲಬ್ ಕಾರ್ಯದರ್ಶಿ ಪ್ರಣಿಕ್ ಅಮೀನ್, ಪ್ರಕಾಶ್ ಆಚಾರ್ಯ,ಪ್ರದೀಪ್ ಬಂಗೇರ, ಪುರುಷೋತ್ತಮ, ಸಚಿನ್, ಪ್ರೀತಮ್ ಮತ್ತಿತರಿದ್ದರು.

Kinnigoli-19081601

Comments

comments

Comments are closed.

Read previous post:
ಆ.21 ಗಿಡಿಗೆರೆ ಮುದ್ದು ಕೃಷ್ಣ ವೇಷ ಸ್ಪರ್ಧೆ

ಕಿನ್ನಿಗೋಳಿ : ಕಟೀಲು ಸಮೀಪದ ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ , ಶ್ರೀ ದುರ್ಗಾಂಬಿಕಾ ಯುವಕ - ಯುವತಿ ಮಂಡಲ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ...

Close