ಎಂ.ಆರ್.ಪೂಂಜ- ಸೇತುಬಂಧ 2016

ಕಿನ್ನಿಗೋಳಿ : ಭಾರತ ದೇಶ ಯುವಜನರ ಖಜಾನೆಯಾಗಿದ್ದು ತಾಂತ್ರಿಕ ಕೌಶಲ್ಯದ ಜ್ಞಾನ ದೊರೆತರೆ ಭಾರತದ ಭವಿಷ್ಯ ಉಜ್ವಲವಾಗುತ್ತದೆ. ಸರಕಾರ ಕೌಶಲ್ಯ ತರಬೇತಿಗೆ ಪೂರಕವಾದ ಅನೇಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ ಅದರ ಸುವರ್ಣಾವಕಾಶವನ್ನು ಯುವಜನರು ಸದುಪಯೋಗಪಡಿಸಿಕೊಳ್ಳಬೇಕು. ಎಂದು ನಂದಿಕೂರು ಅದಾನಿ ಪವರ್ ಕಂಪೆನಿ (ಯು.ಪಿ.ಸಿ.ಎಲ್) ಉಪಾಧ್ಯಕ್ಷ ಕೆ. ಕಿಶೋರ್ ಆಳ್ವ ಹೇಳಿದರು.
ತಪೋವನ, ತೋಕೂರು ಎಂ.ಆರ್.ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆಯ 2016-17ನೇ ಸಾಲಿನ ನೂತನ ವಿದ್ಯಾರ್ಥಿಗಳಿಗೆ ಎರಡು ದಿನಗಳ ಸೇತುಬಂಧ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಿಟ್ಟೆ ಇಂಜಿನಿಯಿರಿಂಗ್ ಕಾಲೇಜಿನ ಡೀನ್ ಡಾ. ಕೆ ರಾಜೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲ್ಲಿ ವಿಭಿನ್ನ ರೀತಿ ಶಿಕ್ಷಣವನ್ನು ಪಡೆಯಬೇಕಾಗಿದ್ದು ಅದಕ್ಕಾಗಿ ಮಾನಸಿಕವಾಗಿ ತಯಾರಾಗಬೇಕಾಗುವಲ್ಲಿ ಈ ಸೇತುಬಂಧ ಕಾರ್ಯಕ್ರಮ ಸಹಕಾರಿಯಾಗುತ್ತದೆ. ಐಟಿಐ ಕಾಲೇಜುಗಳು ಬಡವರ ಇಂಜಿನಿಯರ್ ಕಾಲೇಜು ಆಗಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪೋಷಕರು ಮತ್ತು ಅಧ್ಯಾಪಕರ ನಡುವೆ ಸೌರ್ಹಾದತೆಯ ವಾತಾವರಣದ ಅವಶ್ಯಕತೆಯನ್ನು ಒತ್ತಿಹೇಳಿ ಶುಭಹಾರೈಸಿದರು.
ಸಂಸ್ಥೆಯ ಪ್ರಿನ್ಸಿಪಾಲ್ ವೈ.ಎನ್.ಸಾಲ್ಯಾನ್, ತರಬೇತಿ ಅಕಾರಿ ರಘುರಾಮ್, ಹರೀಶ್ಚಂದ್ರ ಸಂಜೀವ ದೇವಾಡಿಗ, ವಿಶ್ವನಾಥ್ ರಾವ್ ಉಪಸ್ಥಿತರಿದ್ದರು.

Kinnigoli-20081602

Comments

comments

Comments are closed.

Read previous post:
Kinnigoli-20081601
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜೇಶ್ ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಕೆಮ್ರಾಲ್ ಶರಣದ ಶ್ರೀ ಧರ್ಮಶಾಸ್ತಾರ ಮತ್ತು ರಕ್ತೇಶ್ವರಿ ಸನ್ನಿಧಿಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಕೆ. ರಾಜೇಶ್ ಆಚಾರ್ಯ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಗಂಗಾಧರ ಶೆಟ್ಟಿ...

Close