ಪಂಚಾಯಿತಿಗಳಿಗೆ ದೆಹಲಿ ತಂಡ ಬೇಟಿ

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲೆಗೆ ಮೂರುದಿನಗಳ ಕಾಲ ವಿಶ್ವ ಸಂಸ್ಥೆ ಹಾಗೂ ಬಿಹಾರ , ಜಾರ್ಖಂಡ್, ಅಸ್ಸಾಂ ಸಹಿತ ಉತ್ತರ ಭಾರತದ ವಿವಿಧ ರಾಜ್ಯದ ಅಧಿಕಾರಿಗಳ ತಂಡ ಅಧ್ಯಯನ ಮಾಡುವ ಸಲುವಾಗಿ ಆಗಮಿಸಿದ್ದು ಸೋಮವಾರ ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದರು.
ವಿಶ್ವ ಸಂಸ್ಥೆಯ ಅಧಿಕಾರಿ ಶ್ರೀನಿವಾಸ ಮಾತನಾಡಿ ದ. ಕ ಜಿಲ್ಲೆಯ ಕುಡಿಯುವ ನೀರು ಸರಭರಾಜು ವ್ಯವಸ್ಥೆ, ಘನ ದ್ರವ ಕಸ ತಾಜ್ಯವಿಲೇವಾರಿ ಬಗ್ಗೆ ಅಧ್ಯಯನಕ್ಕೆ ಬಂದಿದ್ದು ಮೆನ್ನಬೆಟ್ಟುನಲ್ಲಿರುವ ಕಿನ್ನಿಗೋಳಿ ಮತ್ತು ಮನ್ನೆಬೆಟ್ಟು ಗ್ರಾಮ ಪಂಚಾಯಿತಿಗಳ ಜಂಟೀ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೇಟಿ ನೀಡಿ ಬಳಿಕ ಮೆನ್ನಬೆಟ್ಟು ಅಂಗನವಾಡಿ ಕೇಂದ್ರ, ನಡುಗೋಡು ಪ್ರೌಢ ಶಾಲೆ ಹಾಗೂ ಮೊಬೈಲ್ ತಂತ್ರಜ್ಞಾನದ ಪಂಪ್ ಚಾಲನೆಯ ಪಂಪ್ ಹೌಸ್‌ಗೆ ಭೇಟಿ ನೀಡಿ ಎರಡು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೂಲಂಕುಷವಾಗಿ ವಿಚಾರ ವಿರ್ಮಶೆ ಮಾಡಲಾಗಿದೆ. ಎಂದರು.
ದ.ಕ. ಜಿ. ಪಂ. ಅಧಿಕಾರಿ ದಯಾನಂದ ನಾಯಕ್, ಸ್ವಚ್ಚ ಭಾರತ್ ಮಿಷನ್‌ನ ಅಧಿಕಾರಿ ಮಂಜುಳಾ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಮೆನ್ನಬೆಟ್ಟು ಪಿಡಿಒ ರಮ್ಯಾ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿಲೋಮಿನಾ ಸಿಕ್ವೇರ, ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ, ಉಪಾಧ್ಯಕ್ಷ ಮೊರ್ಗನ್ ವಿಲಿಯಂ ಮತ್ತಿತರರು ಉಪಸ್ಥಿತರಿದ್ದರು.

Kinnigoli-23081604

Comments

comments

Comments are closed.

Read previous post:
Kinnigoli-23081603
ಕೆಮ್ರಾಲ್ ಗ್ರಾಮ ಸಭೆ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ಗ್ರಾಮ ಸಭೆ ಸೋಮವಾರ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಮ್. ಅಂಚನ್ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಮುದಾಯ ಭವನದಲ್ಲಿ ನಡೆಯಿತು. ನೋಡಲ್ ಅಧಿಕಾರಿ ಅವರ...

Close