ಕಟೀಲು ಪ್ರಾಥಮಿಕ ಶಾಲೆಗೆ ಕೊಡುಗೆ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಕೊಡೆತ್ತೂರುಗುತ್ತು ದೇವಸ್ಯ ರಮಾನಾಥ ಶೆಟ್ಟಿ ಅವರು ನೀಡಿದ ಶುದ್ಧ ಕುಡಿಯುವ ನೀರಿನ ಉಪಕರಣ, ವಾಟರ್ ಕೂಲರ್, ಶಾಲಾಭಿವೃದ್ಧಿ ಸಮಿತಿಯಿಂದ ನೀಡಿದ ಪ್ರಿಂಟರ್, ಹಳೆ ವಿದ್ಯಾರ್ಥಿ ಅಶೋಕ ಕಟೀಲು ನೀಡಿದ ವಿಡಿಯೋ ಪ್ರಾಜೆಕ್ಟರ್‌ಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ದೇವಳದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಡಾ. ರವೀಂದ್ರನಾಥ ಪೂಂಜ, ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಪ್ರವೀಣ್ ಭಂಡಾರಿ, ಸುಧೀರ್ ಶೆಟ್ಟಿ, ನಿವೃತ್ತ ಉಪಪ್ರಾಚಾರ್ಯ ಕೆ.ವಿ. ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ವೆಂಕಟರಮಣ ಹೆಗಡೆ, ಮೀನಾಕ್ಷಿ, ಕಟೀಲು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ವೈ. ಗೋಪಾಲ ಶೆಟ್ಟಿ, ಜಯರಾಮ ಪೂಂಜ, ಸೋಮನಾಥ ಅಲಂಗಾರು, ಎಂ. ಬಾಲಕೃಷ್ಣ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.

Kinnigoli-23081601

Comments

comments

Comments are closed.

Read previous post:
Kinnigoli-20081602
ಎಂ.ಆರ್.ಪೂಂಜ- ಸೇತುಬಂಧ 2016

ಕಿನ್ನಿಗೋಳಿ : ಭಾರತ ದೇಶ ಯುವಜನರ ಖಜಾನೆಯಾಗಿದ್ದು ತಾಂತ್ರಿಕ ಕೌಶಲ್ಯದ ಜ್ಞಾನ ದೊರೆತರೆ ಭಾರತದ ಭವಿಷ್ಯ ಉಜ್ವಲವಾಗುತ್ತದೆ. ಸರಕಾರ ಕೌಶಲ್ಯ ತರಬೇತಿಗೆ ಪೂರಕವಾದ ಅನೇಕ ಹೊಸ ಹೊಸ ಯೋಜನೆಗಳನ್ನು...

Close