ಕೆಮ್ರಾಲ್ ಗ್ರಾಮ ಸಭೆ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ಗ್ರಾಮ ಸಭೆ ಸೋಮವಾರ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಮ್. ಅಂಚನ್ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಮುದಾಯ ಭವನದಲ್ಲಿ ನಡೆಯಿತು.
ನೋಡಲ್ ಅಧಿಕಾರಿ ಅವರ ಅನುಪಸ್ಥಿತಿ ಗ್ರಾಮ ಸಭೆಯಲ್ಲಿ ಎದ್ದು ತೋರುತ್ತಿದ್ದು ನೋಡೆಲ್ ಅಧಿಕಾರಿ ಇಲ್ಲದೆ ಹೇಗೆ ಗ್ರಾಮ ಸಭೆ ನಡೆಯುತ್ತದೆ. ಎಂದು ಗ್ರಾಮಸ್ಥ ವಿನ್ಸೆಂಟ್ ಫೆರ್ನಾಂಡಿಸ್ ಪ್ರಶ್ನಿಸಿದಾಗ ಗ್ರಾಮಸರು ಕೂಡ ಒಕ್ಕೊರಲಿನಲ್ಲಿ ಗ್ರಾಮ ಸಭೆಯ ದಿಣಾಂಕ ಮೂಂದೂಡಿ ಆರೋಗ್ಯಕರ ಚರ್ಚೆ ನಡೆಯುವಂತೆ ವಿನಂತಿಸಿಕೊಂಡರು.
ಪಂಜ-ಉಲ್ಯ ಪರಿಸರದ ನೆರೆಪೀಡಿತ ಗ್ರಾಮಸ್ಥರಿಗೆ ಕೆಂಪುಗುಡ್ಡೆಯಲ್ಲಿ 16 ವರ್ಷಗಳ ಹಿಂದಿನಿಂದಲೂ ಮನೆ ನಿವೇಶನ ನೀಡುವ ಸರ್ವೆ ಕಾರ್ಯ ಮಾಡಿದರೂ ಹಂಚಿಕೆಯಾಗಿಲ್ಲ ಜನಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳು ಪೊಳ್ಳು ಭರವಸೆ ನೀಡುತ್ತಿದ್ದಾರೆ. ಪ್ರಸ್ತುತ ಸ್ಥಳದಲ್ಲಿ ಕೆಲವರು ನೆರೆಪೀಡಿತರಲ್ಲದವರು ಮನೆ ಕಟ್ಟುತ್ತಿದ್ದಾರೆ ಇದಕ್ಕೆ ಪಂಚಾಯಿತಿ ಆಡಳಿತದ ಉತ್ತರ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ತಾಲೂಕು ಪಂಚಾಯಿತಿ ಸದಸ್ಯೆ ವಜ್ರಾಕ್ಷಿ ಶೆಟ್ಟಿ ಉತ್ತರಿಸಿ ಪಂಚಾಯಿತಿ ಹಾಗೂ ಸರ್ವೆ ಕಾರ್ಯ ಮುಗಿದಿದ್ದು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರಕಾರದ ನಿರ್ಣಯ ಹಾಗು ಕಾನೂನು ಆಡಚಣೆ ಮತ್ತು ನ್ಯೂನತೆಗಳನ್ನು ನಿವಾರಿಸಿ ಸಂತ್ರಸ್ಥರಿಗೆ ಮನೆ ನಿವೇಶನಗಳನ್ನು ಹಂಚುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಗ್ರಾಮಸ್ಥರು ಸಮಾದಾನದಿಂದ ಸಹಕರಿಸಬೇಕು ಎಂದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘನ ತ್ಯಾಜ್ಯದ ಸಮಸ್ಯೆ ಮನಗಂಡು ತ್ಯಾಜ್ಯ ವಿಲೇವಾರಿಗೆ ವಾಹನ ಖರೀದಿಸಲಾಗಿದೆ. ಕೆಮ್ರಾಲ್ ಪಂಚಾಯಿತಿಗೆ 4.90ಲಕ್ಷ ರೂಪಾಯಿ ವೆಚ್ಚದಲ್ಲಿ ಘನ-ತ್ಯಾಜ್ಯ ವಿಲೇವಾರಿ ಘಟಕ ಇದ್ದು ತ್ಯಾಜ್ಯವನ್ನು ಇಲ್ಲೇ ವಿಲೇವಾರಿ ಮಾಡಲಾಗುವುದು ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಹಾಗೂ ಅಂಗಡಿ ಮಾಲಕರ ಸಭೆ ಕರೆದು ತ್ಯಾಜ್ಯ ನಿರ್ವಹಣಾ ದರವನ್ನು ನಿಗದಿಪಡಿಸಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್ ರಾಥೋಡ್ ಹೇಳಿದರು.
ಪಕ್ಷಿಕೆರೆ ಚರ್ಚ್ ಬಳಿಯ ನಿಷ್ಪ್ರಯೋಜಕ ಬಸ್ಸು ನಿಲ್ಧಾಣದಲ್ಲಿ ತರಕಾರಿ ವ್ಯಾಪಾರ ಮಾಡಲು ಅಂಗಡಿ ಯಾಕೆ ಕೊಡಲಾಗಿದೆ ಎಂಬ ಪ್ರಶ್ನೆಗೆ ಅಂಗಡಿಗೆ ಪರವಾನಿಗೆ ನೀಡಲಾಗಿಲ್ಲ ಅಂಗಡಿಯನ್ನು ತೆರವುಗೊಳಿಸಲಾಗಿದೆ ಎಂದು ಪಂಚಾಯಿತಿ ಆಡಳಿತ ಉತ್ತರಿಸಿತು.
ನಿಲ್ದಾಣ ಶರಣ ಸುರಗಿರಿ ರಸ್ತೆಗಳು ಪೂರ್ತಿ ಕೆಟ್ಟು ಹೋಗಿದೆ. ಮಳೆಗಾಲದಲ್ಲಿಯೇ ನಡೆದಾಡಲೂ ಕಷ್ಟ ಸಾಧ್ಯ ಎಂದು ಸ್ಥಳೀಯರು ದೂರಿಕೊಂಡರು.
ಪಂಚಾಯಿತಿ ಸದಸ್ಯರು ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Kinnigoli-23081603

Comments

comments

Comments are closed.

Read previous post:
ಆ. 25 ಪುನರೂರು ಕೃಷ್ಣಜನ್ಮಾಷ್ಟಮಿ

ಕಿನ್ನಿಗೋಳಿ : ಪುನರೂರು ನಂದಿ ಪ್ರೆಂಡ್ಸ್ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಗಸ್ಟ್ 25 ಗುರುವಾರ ಮೊಸರು ಕುಡಿಕೆ ಉತ್ಸವ ನಡೆಯಲಿದೆ. ಎಸ್.ಕೋಡಿಯಿಂದ ಪುನರೂರು ಶ್ರೀ ವಿಶ್ವನಾಥ...

Close