ಕಿನ್ನಿಗೋಳಿ ಮುದ್ದುಕೃಷ್ಣ ಸ್ಪರ್ಧೆ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ನೇತೃತ್ವದಲ್ಲಿ ಯುಗಪುರುಷ ಕಿನ್ನಿಗೋಳಿ, ರೋಟರಿ ಕ್ಲಬ್, ಯಕ್ಷಲಹರಿ ಕಿನ್ನಿಗೋಳಿ, ಸೌತ್ ಕೆನರಾ ಫೋಟೊಗ್ರಾಫರ‍್ಸ್ ಅಸೋಸಿಯೇಶನ್ (ರಿ.) ಮೂಲ್ಕಿ ವಲಯ, ನಮ್ಮಕಿನ್ನಿಗೋಳಿ ಡಾಟ್‌ಕಾಮ್, ಇನ್ನರ್‌ವೀಲ್ ಕ್ಲಬ್ ಕಿನ್ನಿಗೋಳಿ, ಮೆನ್ನಬೆಟ್ಟು ಭ್ರಾಮರಿ ಮಹಿಳಾ ಸಮಾಜ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಬುಧವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮುದ್ದುಕೃಷ್ಣ ಸ್ಪರ್ಧೆ ನಡೆಯಿತು.
ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ರೋಟರಾಕ್ಟ್ ಅಧ್ಯಕ್ಷ ಅಶೋಕ್ ಎಸ್., ಕಾರ್ಯದರ್ಶಿ ಪ್ರಣಿಕ್ ಅಮೀನ್, ರೋಟರ‍್ಯಾಕ್ಟ್ ಮಾಜಿ ಜಿಲ್ಲಾ ಪ್ರತಿನಿಧಿ ಸುಮಿತ್ ಕುಮಾರ್, ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಮಾನಂದ ಪೂಜಾರಿ, ಇನ್ನರ್ ವೀಲ್ ಅಧ್ಯಕ್ಷೆ ವಿಮಲಾ ತ್ಯಾಗರಾಜ್, ಸೌತ್ ಕೆನರಾ ಫೋಟೊಗ್ರಾಫರ್ ಅಸೋಸಿಯೇಶನ್ ಮುಲ್ಕಿ ವಲಯ ಅಧ್ಯಕ್ಷ ರಫಾಯಲ್ ರೆಬೆಲ್ಲೊ, ನಮ್ಮಕಿನ್ನಿಗೋಳಿ ಡಾಟ್‌ಕಾಮ್ ಮಾಲಕ ಯಶವಂತ ಐಕಳ, ಬಬಿತಾ ಶೆಟ್ಟಿ, ಕೆ.ಬಿ. ಸುರೇಶ್, ಬ್ರಾಮರೀ ಮಹಿಳಾ ಮಂಡಲ ಅಧ್ಯಕ್ಷೆ ರೇವತಿ ಪುರುಷೋತ್ತಮ್ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 60 ಮಂದಿ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ
2 ವರ್ಷದೊಳಗಿನ ಮಕ್ಕಳು
ಪ್ರಥಮ ಮೌರ್ಯ ಕೆ. ಬಂಜನ್, ದ್ವಿತೀಯ ಸನ್ನಿಧಿ, ತೃತೀಯ ದೇವಿಕಾ

2 ರಿಂದ 4 ವರ್ಷ
ಪ್ರಥಮ ತಕ್ಷಿತ ಎಂ. ದೇವಾಡಿಗ, ದ್ವಿತೀಯ ದಕ್ಷ್, ತೃತೀಯ ಮೇಧಾ ಪ್ರಭು

4 ರಿಂದ 6 ವರ್ಷ
ಪ್ರಥಮ ತ್ರ್ರಿಶಾ ದ್ವಿತೀಯ ಪ್ರತೀಕ್ಷಾ ತೃತೀಯ ಸತ್ಯಪ್ರಸಾದ್

ಯಕ್ಷಗಾನ ಕೃಷ್ಣ
ಪ್ರಥಮ ಆದೀಶ್

ರಾಧಕೃಷ್ಣ
ಪ್ರಥಮ ತ್ರೀಶಾ -ಹಿತಾನ್ ದ್ವಿತೀಯ ಮಾಯಂಕ್-ಶ್ರೀಯಾ

Kinnigoli-25081602 Kinnigoli-25081603

Kinnigoli-25081604

 

Comments

comments

Comments are closed.

Read previous post:
Kinnigoli-25081601
ಕಿನ್ನಿಗೋಳಿ ಲಿಟ್ಲ್ ಫ್ಲವರ್ ಹಿ.ಪ್ರಾ. ಶಾಲೆ 24 ಪ್ರಶಸ್ತಿ

ಕಿನ್ನಿಗೋಳಿ : ಸಂತಪೌಲರ ಹಿರಿಯ ಪ್ರಾಥಮಿಕ ಶಾಲೆ ಬಳಕುಂಜೆಯಲ್ಲಿ ಇತ್ತೀಚೆಗೆ ನಡೆದ ಪದ್ಮನೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಿನ್ನಿಗೋಳಿ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ...

Close