ಕಿನ್ನಿಗೋಳಿ : ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾಟ

 ಕಿನ್ನಿಗೋಳಿ : ಜಾಗತಿಕ ಮಟ್ಟದಲ್ಲಿ ಭಾರತದ ಕ್ರೀಡಾಳುಗಳು ಬೆಳೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ, ಕ್ರೀಡಾ ಇಲಾಖಾಧಿಕಾರಿಗಳ ಪಾರದರ್ಶಕ ಶ್ರಮ ಹಾಗೂ ಹೆತ್ತವರ ಹಿರಿಯರ ಪ್ರೋತ್ಸಾಹ ಅಗತ್ಯ ಎಂದು ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್‌ಕುಮಾರ್ ಕಟೀಲು ಹೇಳಿದರು. ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಗೋಶಿನ್- ರ‍್ಯೂ – ಕರಾಟೆ ಫೆಡರೇಶನ್ ಆಫ್ ಇಂಡಿಯಾ ಆಶ್ರಯದಲ್ಲಿ ಶನಿವಾರ ನಡೆದ ರಾಷ್ಟ್ರಮಟ್ಟದ ಕರಾಟೆ ಇಂಟರ್ ಡೋಜೋ ಚಾಂಪಿಯನ್‌ಶಿಪ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರಧಾನ ಮಂತ್ರಿ ಮೋದಿ ಹಾಗೂ ಕೇಂದ್ರ ಸರಕಾರ ಕ್ರೀಡಾ ಕ್ಷೇತ್ರಕ್ಕೆ ಉತೇಜನ ಹಾಗೂ ಆಧ್ಯತೆ ನೀಡಿ ಕ್ರೀಡೆಯನ್ನು ಜನಪ್ರಿಯಗೊಳಿಸಲು ಹಲವು ಸುಧಾರಣೆಗಳನ್ನು ಮಾಡಲಿದ್ದು ವಲಯ, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಂತುಲಿತ ತಂಡಗಳನ್ನು ರಚನೆ ಮಾಡಿ ತರಬೇತಿ ನೀಡಲಾಗುವುದು. ಬ್ಯಾಂಕಿಂಗ್ ಹಾಗೂ ಸಹಕಾರಿ ಕ್ಷೇತ್ರದ ಕಂಪನಿಗಳು ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸಿ ನೌಕರಿ ನೀಡಬೇಕು ಎಂದರು.
ಗೋಶಿನ್- ರ‍್ಯೂ – ಕರಾಟೆ ಫೆಡರೇಶನ್ ಆಫ್ ಇಂಡಿಯಾ ದ.ಕ. ಜಿಲ್ಲಾ ಅಧ್ಯಕ್ಷ ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಸ್ತುತ ಗ್ರಾಮೀಣ ಮಟ್ಟದ ಕೂಡಾ ಕ್ರೀಡಾಳುಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಪ್ರೋತ್ಸಾಹ ಉತ್ತಮ ತರಬೇತಿ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಶಿಕ್ಷಣ ಹಾಗೂ ಕರಾಟೆಯಲ್ಲಿ ಉತ್ತಮ ಸಾಧನೆಗೈದ ಪ್ರತಿಭಾವಂತ ಕರಾಟೆ ಪಟುಗಳಾದ ರಮ್ಯ ಹಾಗೂ ಹಸನ್ ಸಭಾಬ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭ ಈಶ್ವರ್ ಕಟೀಲ್, ಸುರೇಂದ್ರ ಬಿ. ಹಾಗೂ ಆರ್.ಎಸ್. ಥೋಮರ್ ಅವರಿಗೆ ಐದನೇ ಡಾನ್ ಪದವಿ ನೀಡಿ ಗೌರವಿಸಲಾಯಿತು.
ಅದಾನಿ ಗ್ರೂಪ್ ಪ್ರಾಜೆಕ್ಟ್ ಡೆವಲಪ್‌ಮೆಂಟ್ ಕಾರ್ಪೋರೇಶನ್ ನಿರ್ದೇಶಕ ಕಿಶೋರ್ ಆಳ್ವ, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಇಂಡಿಯನ್ ಕರಾಟೆ ಗ್ರಾಂಡ್ ಮಾಸ್ಟರ್ ಬಿ. ಎಂ. ನರಂಸಿಂಹನ್ , ಶಿಹಾನ್ ವಸಂತನ್, ಯಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಉದ್ಯಮಿ ಯಾದವ್ ಕೋಟ್ಯಾನ್ ಪೆರ್ಮುದೆ, ಸಧನಂದ ನಾವಡ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್, ಆರ್. ಎಸ್. ಥೋಮರ್ ಮಧ್ಯಪ್ರದೇಶ, ಮಧು ಪಾಟೀಲ್ ಬೆಳಾಗಾಂ, ರಾಷ್ಟ್ರಿಯ ಅಧ್ಯಕ್ಷ ವಿಜೇಂದ್ರ ಬಾಬು, ಉಪಾಧ್ಯಕ್ಷ ಸುರೆಂದ್ರ ಬಿ, ತಾಂತ್ರಿಕ ನಿರ್ದೇಶಕ ಶ್ರೀನಿವಾಸನ್, ಪ್ರಧಾನ ಕಾರ್ಯದರ್ಶಿ ಎಂ. ಎಸ್. ಅಶೋಕ್, ಪಾರಸ್ ಮಾಲ್ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರಮಟ್ಟದ 1200 ಕ್ರೀಡಾಳುಗಳು ಪಾಲ್ಗೊಂಡಿದ್ದಾರೆ.
ಉಪಾಧ್ಯಕ್ಷ ಈಶ್ವರ್ ಕಟೀಲ್ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

Kinnigoli-27081601

 

Comments

comments

Comments are closed.

Read previous post:
Punaroor-25081603
ಪುನರೂರು ಮೊಸರುಕುಡಿಕೆ

ಕಿನ್ನಿಗೋಳಿ : ನಂದಿ ಪ್ರೆಂಡ್ಸ್ ಪುನರೂರು ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಗುರುವಾರ ನಡೆಯಿತು. ಎಸ್.ಕೋಡಿಯಿಂದ ಪುನರೂರು ಶ್ರೀ ವಿಶ್ವನಾಥ ದೇವಳದ ವರೆಗೆ...

Close