ಪಂಜ : ತುಳುನಾಡ ಮಣ್ಣ್‌ಡ್ ಕೆಸರ‍್ದ ಗೊಬ್ಬು

 ಕಿನ್ನಿಗೋಳಿ : ಯುವಜನಾಂಗಕ್ಕೆ ನಮ್ಮ ಪೂರ್ವಜರ ಜೀವನ ಪದ್ದತಿ ಹಾಗೂ ಪರಂಪರೆಯನ್ನು ಪರಿಚಯಿಸುತ್ತಿರುವುದು ಮಹತ್ವದ ಕಾರ್ಯ. ಕೆಸರು ಗದ್ದೆಯ ಆಟಗಳು ದೈಹಿಕ ಶಕ್ತಿಯ ಉದ್ದೀಪನವಾಗಿದ್ದು ಮತ್ತು ಚರ್ಮ ವ್ಯಾದಿಗೆ ಗದ್ದೆಯ ಕೆಸರು ಮೂಲಿಕೆಯಂತೆ ಎಂದು ಪಂಜ ಶ್ರೀ ವಿಠೋಭ ಭಜನಾ ಮಂಡಳಿ ಅಧ್ಯಕ್ಷ ಪಂಜಗುತ್ತು ವಿಶ್ವನಾಥ ಶೆಟ್ಟಿ ಹೇಳಿದರು.

ಪಂಜ ಶ್ರೀ ವಿಠೋಭ ಭಜನಾ ಮಂಡಳಿ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಪಂಜ-ಮಧ್ಯ ಕೂಡು ರಸ್ತೆಯ ಪಂಜ ಬಾಕಿಮಾರು ಗುತ್ತು ಕೆರೆ ಬಳಿಯ ಸಮುದ್ರ ಗದ್ದೆಯಲ್ಲಿ ಭಾನುವಾರ ಗ್ರಾಮಸ್ಥರಿಗೆ ನಡೆದ ತುಳುನಾಡ ಮಣ್ಣ್‌ಡ್ ಕೆಸರ‍್ದ ಗೊಬ್ಬು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಗುತ್ತಿನಾರ್ ಭೋಜ ಶೆಟ್ಟಿ ನಲ್ಯಗುತ್ತು, ರಾಜೇಶ್ ಶೆಟ್ಟಿ ಪಂಜ ಮಜಲಗುತ್ತು, ದಯಾನಂದ ಶೆಟ್ಟಿ, ಪಂಜ ಬಾಕಿಮಾರುಗುತ್ತು, ಸುಂದರ ಪೂಜಾರಿ ಸಾನದ ಮನೆ ಉಲ್ಯ, ಪಂಜ ಕೊಕುಡೆ ಶನೀಶ್ವರ ಮಂಡಳಿ ಅಧ್ಯಕ್ಷ ಭಾಸ್ಕರ ಶೆಟ್ಟಿ, ನವಜ್ಯೋತಿ ಮಹಿಳಾ ಮಂಡಳಿ ಅಧ್ಯಕ್ಷೆ ವೇದಾವತಿ, ಪಂಜ ಕೊಕುಡೆ ಹಾಲು ಉತ್ಪಾದಕರ ಸಂಘ ಅಧ್ಯಕ್ಷ ಸತೀಶ್ ಜೆ. ಶೆಟ್ಟಿ, ನಾರಾಯಣ ಪೂಜಾರಿ ಸಾನದ ಮನೆ ಪಂಜ, ನಾರಾಯಣ ಪೂಜಾರಿ ಸಾನದ ಮನೆ ಹರಿಪಾದೆ, ಸಂಜೀವ ಗುರಿಕಾರ ಶ್ರೀ ಕೋರ‍್ದಬ್ಬು ದೈವಸ್ಥಾನ ಪಂಜ, ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ದೇವಾಡಿಗ, ಸುಮತಿ, ಆಶಾ ಮತ್ತಿತರರು ಉಪಸ್ಥಿತರಿದ್ದರು.
ಪಂಜ ಬೈಲಗುತ್ತು ಸತೀಶ್ ಎಂ. ಶೆಟ್ಟಿ ಸ್ವಾಗತಿಸಿದರು. ಪ್ರಕಾಶ್ ಶೆಟ್ಟಿ ಪಂಜ ನಲ್ಯಗುತ್ತು ವಂದಿಸಿದರು. ಉಪನ್ಯಾಸಕಿ ಅರ್ಪಿತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-28081601 Kinnigoli-28081602 Kinnigoli-28081603 Kinnigoli-28081604

Comments

comments

Comments are closed.

Read previous post:
Kinnigoli-27081601
ಕಿನ್ನಿಗೋಳಿ : ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾಟ

 ಕಿನ್ನಿಗೋಳಿ : ಜಾಗತಿಕ ಮಟ್ಟದಲ್ಲಿ ಭಾರತದ ಕ್ರೀಡಾಳುಗಳು ಬೆಳೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ, ಕ್ರೀಡಾ ಇಲಾಖಾಧಿಕಾರಿಗಳ ಪಾರದರ್ಶಕ ಶ್ರಮ ಹಾಗೂ ಹೆತ್ತವರ ಹಿರಿಯರ ಪ್ರೋತ್ಸಾಹ ಅಗತ್ಯ ಎಂದು ದಕ್ಷಿಣ...

Close