ಕೆಸರ‍್ದ ಗೊಬ್ಬು ಸಾಧಕರಿಗೆ ಸನ್ಮಾನ

ಕಿನ್ನಿಗೋಳಿ : ಕೃಷಿ ಬದುಕಿನ ಪರಿಚಯವನ್ನು ಯುವ ಜನತೆಗೆ ತಿಳಿ ಹೇಳುವ ಕಾರ್ಯ ಮಾಡಿ ಕೃಷಿಯಲ್ಲಿಯೂ ಆಸಕ್ತಿ ಹುಟ್ಟುವಂತೆ ಮಾಡಬೇಕಾಗಿದೆ. ಇದರಿಂದ ಸಂಸ್ಕ್ರತಿ ಸಂಸ್ಕಾರ ಬೆಳೆಯಲು ಸಾದ್ಯ ಎಂದು ಪಂಜ ವಾಸುದೇವ ಭಟ್ ಹೇಳಿದರು.
ಪಂಜ ಶ್ರೀ ವಿಠೋಭ ಭಜನಾ ಮಂಡಳಿ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಪಂಜ-ಮಧ್ಯ ಕೂಡು ರಸ್ತೆಯ ಪಂಜ ಬಾಕಿಮಾರು ಗುತ್ತು ಕೆರೆ ಬಳಿಯ ಸಮುದ್ರ ಗದ್ದೆಯಲ್ಲಿ ಭಾನುವಾರ ಗ್ರಾಮಸ್ಥರಿಗೆ ನಡೆದ ತುಳುನಾಡ ಮಣ್ಣ್‌ಡ್ ಕೆಸರ‍್ದ ಗೊಬ್ಬು ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಠೋಭ ಭಜನಾ ಮಂದಿರದ ಅಧ್ಯಕ್ಷ ಪಂಜದ ಗುತ್ತು ವಿಶ್ವನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಹಿರಿಯ ಕೃಷಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಲಲಿತಾ ವಿಶ್ವನಾಥ ಪೂಜಾರಿ, ಲೀಲಾ ಬಾಬು ಪಂಜ ಅವರನ್ನು ಸನ್ಮಾನಿಸಲಾಯಿತು.
2016-17ನೇ ಸಾಲಿನ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಸ್ಥಳೀಯ ವಿದ್ಯಾರ್ಥಿಗಳಾದ ವಿಘ್ನೇಶ್ ಉಡುಪ, ಲಕ್ಷ್ಮೀಶ ಶೆಟ್ಟಿ , ಪ್ರಥ್ವಿ , ಶ್ರೀಯಾ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಉದ್ಯಮಿ ಸಂತೋಷ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ಮಂಗಳೂರು ತಾ. ಪಂ. ಸದಸ್ಯೆ ವಜ್ರಾಕ್ಷಿ ಪಿ. ಶೆಟ್ಟಿ , ಬೈಕಂಪಾಡಿ ರೋಟರಿ ಅಧ್ಯಕ್ಷ ನವೀನ್ ಕುಮಾರ್ ಇಡ್ಯಾ, ಭರತೇಶ್, ಕೆಮ್ರಾಲ್ ಗ್ರಾ. ಪಂ. ಅಧ್ಯಕ್ಷ ನಾಗೇಶ್ ಎಂ. ಅಂಚನ್, ಪಂಚಾಯಿತಿ ಸದಸ್ಯ ಸುರೇಶ್ ದೇವಾಡಿಗ ಪ್ರಕಾಶ್ ಟಿ. ಶೆಟ್ಟಿ ಪಂಜ ನಲ್ಯಗುತ್ತು, ಸುಂದರ ಪೂಜಾರಿ ಸಾನದ ಮನೆ ಉಲ್ಯ, ಕೆಮ್ರಾಲ್ ಗ್ರಾಮ, ಮತ್ತಿತರರು ಉಪಸ್ಥಿತರಿದ್ದರು.
ಪಂಜ ಬಲಗುತ್ತು ಸತೀಶ್ ಎಂ. ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಅರ್ಪಿತ ಶೆಟ್ಟಿ ಹಾಗೂ ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

Kinnigoli-29081601

Comments

comments

Comments are closed.

Read previous post:
Kinnigoli-28081605
ಪಂಜ ವಿವಿಧ ಸಂಘಗಳಿಂದ ಶ್ರಮದಾನ

ಕಿನ್ನಿಗೋಳಿ : ಪಕ್ಷಿಕೆರೆಯಿಂದ ಪಂಜಕ್ಕೆ ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟಿದ್ದು ಪಕ್ಷಿಕೆರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಹಿಂದು ಜಾಗರಣ ವೇದಿಕೆ ಪಕ್ಷಿಕೆರೆ ಮಂಡಲ, ವಿನಾಯಕ ಮಿತ್ರ ಮಂಡಳಿ ಹಾಗೂ...

Close