ಸೇವಾ ಕಾರ್ಯಗಳಿಂದ ಜೀವನ ಸಾರ್ಥಕ

ಕಿನ್ನಿಗೋಳಿ : ಸಮಾಜ ಮುಖಿಯಾಗಿ ಸೇವಾ ಕೆಲಸ ಕಾರ್ಯಗಳನ್ನು ಮಾಡಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡಿದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ. ಹಾಗಾದಾಗ ನಮ್ಮ ಜೀವನ ಸಾರ್ಥಕಗೊಳ್ಳುತ್ತದೆ. ಎಂದು ಮೂಲ್ಕಿ ನಗರ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ್ ಆಳ್ವ ಹೇಳಿದರು.
ಭಾನುವಾರ ಎಸ್. ಕೋಡಿ ಕುಲಾಲ ಭವನದಲ್ಲಿ ಮೂಲ್ಕಿ- ಮೂಡಬಿದಿರೆ ವಲಯ ಶಾಮಿಯಾನ ಸಂಯೋಜಕರ ಒಕ್ಕೂಟ 8 ನೇ ವಾರ್ಷಿಕೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ತಾರನಾಥ ಶೆಣೈ ಮೂಲ್ಕಿ ಮತ್ತು ಕರಿಯಪ್ಪ ಪೂಜಾರಿ ಅವರನ್ನು ಗೌರವಿಸಲಾಯಿತು. ಹರ್ಷಿತ್ ನಿಡ್ಡೋಡಿ, ಮಲ್ಲಿಕಾ ಹಳೆಯಂಗಡಿ, ಧನರಾಜ್ ಉಲ್ಲಂಜೆ ಅವರಿಗೆ ವೈದಕೀಯ ಚಿಕಿತ್ಸೆಗಾಗಿ ಧನಸಹಾಯ ನೀಡಲಾಯಿತು.
ಮುಲ್ಕಿ ನಗರ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಯೋಗೀಶ್ ಕೋಟ್ಯಾನ್, ಮೂಲ್ಕಿ- ಮೂಡಬಿದಿರೆ ವಲಯ ಶಾಮಿಯಾನ ಒಕ್ಕೂಟದ ಅಧ್ಯಕ್ಷ ಜೈಕೃಷ್ಣ ಹಳೆಯಂಗಡಿ, ಪಿಡಬ್ಲ್ಯುಡಿ ಗುತ್ತಿಗೆದಾರ ಜೋಯಲ್, ಅಬ್ದುಲ್ ಲತೀಫ್, ಬಸ್ತಿರಾಮ್, ರಾಜೇಶ್ ಮಂಗಳೂರು, ರಾಜೇಶ್ ಕೆಂಚನಕೆರೆ, ಸದಾಶಿವ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು. ಶರತ್ ಶೆಟ್ಟಿ ಸಂಕಲಕರಿಯ ಪ್ರಸ್ತಾವನೆಗೈದರು. ಕಾರ್ಯದರ್ಶಿ ವಿಶ್ವನಾಥ ಶೆಣೈ ವಾರ್ಷಿಕ ವರದಿ ವಾಚಿಸಿದರು. ಸುರೇಶ್ ಕೆ. ಸುವರ್ಣ ಸ್ವಾಗತಿಸಿದರು. ಜಗನ್ನಾಥ ನಾಯಕ್ ವಂದಿಸಿದರು. ಮಂಜುನಾಥ ಡಿ ಕಾರ್ಯಕ್ರಮ ನಿರೂಪಿಸಿದರು.

Kinnigoli-29081602

 

Comments

comments

Comments are closed.

Read previous post:
Kinnigoli-29081601
ಕೆಸರ‍್ದ ಗೊಬ್ಬು ಸಾಧಕರಿಗೆ ಸನ್ಮಾನ

ಕಿನ್ನಿಗೋಳಿ : ಕೃಷಿ ಬದುಕಿನ ಪರಿಚಯವನ್ನು ಯುವ ಜನತೆಗೆ ತಿಳಿ ಹೇಳುವ ಕಾರ್ಯ ಮಾಡಿ ಕೃಷಿಯಲ್ಲಿಯೂ ಆಸಕ್ತಿ ಹುಟ್ಟುವಂತೆ ಮಾಡಬೇಕಾಗಿದೆ. ಇದರಿಂದ ಸಂಸ್ಕ್ರತಿ ಸಂಸ್ಕಾರ ಬೆಳೆಯಲು ಸಾದ್ಯ ಎಂದು...

Close