ಕಿನ್ನಿಗೋಳಿ ಬಸ್ ನಿಲ್ದಾಣ ಸಮಸ್ಯೆ

ಕಿನ್ನಿಗೋಳಿ : ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಕೆಲವು ಅಂಗಡಿ ಮಾಲಿಕರು ಪಾರ್ಕಿಂಗ್ ಹಾಗೂ ಪುಟ್‌ಪಾತ್ ಅನಧಿಕೃತವಾಗಿ ಆಕ್ರಮಿಸಿದ್ದು ಅದನ್ನು ತೆರವು ಹಾಗೂ ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಸರಿಪಡಿಸುವ ಕಾರ್ಯಕ್ಕೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಪಂಚಾಯಿತಿ ಸದಸ್ಯರು ಮಂಗಳವಾರ ಸಂಜೆ ಬಸ್ ನಿಲ್ದಾಣವನ್ನು ಪರಿಶೀಲನೆ ಮಾಡಿ ಅಂಗಡಿ ಮಾಲಿಕರಿಗೆ ಮನವರಿಕೆ ಮತ್ತು ಮುನ್ನೆಚ್ಚರಿಕೆ ನೀಡಿದರು.

ಆಗಸ್ಟ್ 9 ರಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಗ್ರಾಮ ಸಬೆಯಲ್ಲಿ ಸಾರ್ವಜನಿಕರು ಬಸ್ ನಿಲ್ದಾಣದ ಬಗ್ಗೆ ದೂರು ನೀಡಿದ ಹಿನ್ನಲೆ ಮಂಗಳವಾರ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು. ಹಾಗಾಗಿ ಪರಿಶೀಲನೆ ನಡೆಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಒಂದು ವಾರದ ತೆರವುಗೊಳಿಸಲು ಅವಧಿ
ಪುಟಪಾತ್ ಆಕ್ರಮಿಸಿ ಅಂಗಡಿ ಇಟ್ಟ ಎಲ್ಲಾ ಅಂಗಡಿ ಮಾಲೀಕರಿಗೆ ಕಳೆದ ಮೂರು ತಿಂಗಳ ಹಿಂದೆಯೇ ನೋಟೀಸ್ ನೀಡಲಾಗಿದ್ದರೂ ಅತಿಕ್ರಮಣದ ತೆರವು ಕಾರ್ಯ ಮಾಡಿಲ್ಲ ಮುಂದಿನ ಏಳು ದಿನಗಳ ಒಳಗೆ ತೆರವು ಗೊಳಿಸದ್ದಿರೆ ಸೂಕ್ತ ಕ್ರಮ ಕ್ಥಗೊಳ್ಳಲಾಗುವುದು. ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ ತಿಳಿಸಿದ್ದಾರೆ.

ಪೇ ಪಾರ್ಕ್ ನಿರ್ಮಾಣ
ಕಿನ್ನಿಗೋಳಿ ಪಟ್ಟಣವು ಬೆಳೆಯುತ್ತಿದ್ದು ನಾಗರಿಕರ ಸಾರ್ವಜನಿಕರ ಸುರಕ್ಷತೆಯ ದೃಷ್ಠಿಯಿಂದಬಸ್ ನಿಲ್ದಾಣದ ಒಂದು ಭಾಗದಲ್ಲಿ ದ್ವಿಚಕ್ರ ವಾಹನ ನಿಷೇಧಿಸಿ ಇನ್ನೊಂದು ಬದಿಯಲ್ಲಿ ಪೇ ಪಾರ್ಕ್ ನಿರ್ಮಾಣ ಮಾಡಲಾಗುವುದು. ಮುಖ್ಯ ರಸ್ತೆಯಲ್ಲಿ ಮೂಲ್ಕಿ ಮಂಗಳೂರು ಕಡೆಗೆ ಹೋಗುವ ಬಸ್ ನಿಲ್ಲುವ ಬಗ್ಗೆ ಹಾಗೂ ಪಾರ್ಕಿಂಗ್ ನಿಲುಗಡೆ ಬಗ್ಗೆ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಆಡಳಿತದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

ತಾ. ಪಂ. ಸದಸ್ಯ ದಿವಾಕರ ಕರ್ಕೇರಾ, ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜಿನಿ ಗುಜರನ್, ಸದಸ್ಯ ದಾಮೋದರ ಶೆಟ್ಟಿ , ಕಿನ್ನಿಗೋಳಿ ಗ್ರಾ. ಪಂ. ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಶ್ಯಾಮಲ ಹೆಗ್ಡೆ, ಜಾನ್ಸನ್ ಜೆರೋಮ್ ಡಿಸೋಜ, ಪ್ರಕಾಶ್ ಹೆಗ್ಡೆ , ಸುನೀತಾ ಡಿಸೋಜ, ಶರತ್ ಶೆಟ್ಟಿಗಾರ್, ಸಂತೋಷ್, ಸುಲೋಚನಾ, ಮತ್ತಿತರರಿದ್ದರು.

Kinnigoli-30081601

Comments

comments

Comments are closed.

Read previous post:
Thokurgutthu Gunapala-Shetty
ತೋಕೂರು ಗುತ್ತು ಗುಣಪಾಲ ಶೆಟ್ಟಿ

ಕಿನ್ನಿಗೋಳಿ : ತೋಕೂರು ಸುಬ್ರಮಣ್ಯ ಸ್ವಾಮಿ ದೇವಳದ ಮಾಜಿ ಮೊಕ್ತೇಸರ ಹೊಸ ಮನೆ ತೋಕೂರು ಗುತ್ತು ಗುಣಪಾಲ ಶೆಟ್ಟಿ (75 ) ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ...

Close