ರಾಷ್ಟ್ರಮಟ್ಟದ ಕರಾಟೆ ಕರ್ನಾಟಕ ಚಾಂಪಿಯನ್ ಶಿಪ್ ಪ್ರಶಸ್ತಿ

ಕಿನ್ನಿಗೋಳಿ : ಗೋಶಿನ್-ರಿಯು ಇಂಡಿಯನ್ ಕರಾಟೆ ವತಿಯಿಂದ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಅತೀ ಹೆಚ್ಚು ಪ್ರಶಸ್ತಿ ಗಳಿಸಿ ಚಾಂಪಿಯನ್ ಶಿಪ್ ಪಡೆದುಕೊಂಡಿದೆ. ಮದ್ಯಪ್ರದೇಶ ದ್ವಿತೀಯ ಸ್ಥಾನ ಹಾಗು ಮಹಾರಾಷ್ಟ್ರ ತೃತೀಯ ಸ್ಥಾನ ಪಡೆದಿದೆ. ಗೋಶಿನ್ ರಿಯು ಕರಾಟೆಯ ಗ್ರಾಂಡ್ ಮಾಸ್ಟರ್ ಬಿ. ಎಮ್. ನರಸಿಂಹನ್, ಶಿಯನ್ ವಸಂತನ್ ಹಾಗೂ ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಪ್ರಶಸ್ತಿ ವಿತರಿಸಿದರು. ಈ ಸಂದರ್ಭ ಶಿಯಾನ್ ಈಶ್ವರ್ ಕಟೀಲ್ ಶಿಯಾನ್ ಸುರೇಂದ್ರ ಬಿ., ಮೋರ್ಗನ್ ವಿಲಿಯಂ, ಚಂದ್ರಹಾಸ್ , ನಾಗರಾಜ್, ಮನೀಶ್, ನಿತೇಶ್ ಶೆಟ್ಟಿ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು.

Kinnigoli-31081602

 

Comments

comments

Comments are closed.

Read previous post:
Kinnigoli-31081601
ಅತ್ತೂರು ಹಾಲು ಉತ್ಪಾದಕರ ಸಹಕಾರಿ ಸಂಘ ಉಪ ಕೇಂದ್ರ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಅತ್ತೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಉಪ ಕೇಂದ್ರವನ್ನು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ...

Close