ಕಟೀಲು ತಿರಂಗಾ ಯಾತ್ರೆ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳು ಮತ್ತು ಕಾಲೇಜಿನ ವಿದ್ಯಾರ್ಥಿಸಂಘಗಳ ಜಂಟಿ ಆಶ್ರಯದಲ್ಲಿ ರಾಷ್ಟ್ರಧ್ವಜದ ಬಳಕೆ ಮತ್ತು ಗೌರವದ ಕುರಿತು ಜನಜಾಗೃತಿ ಮೂಡಿಸಲು ತಿರಂಗಾ ಯಾತ್ರೆಯನ್ನು ಕಾಲೇಜಿನಿಂದ ಕಟೀಲು ಬೀದಿಯವರೆಗೆ ಶನಿವಾರ ಜಾಥಾ ನಡೆಯಿತು. ವಿದ್ಯಾರ್ಥಿಸಂಘದ ನಾಯಕ ಪ್ರಜ್ವಲ್ ನಾಯಕ್, ಉಪನಾಯಕ ಮನೀಷ್ ಶೆಟ್ಟಿ, ಮನೀಷ್ ಶೆಟ್ಟಿಗಾರ್, ಕುಮಾರಿ ವೈಷ್ಣವಿ ಮತ್ತು ಎನ್‌ಎಸ್‌ಎಸ್ ವಿದ್ಯಾರ್ಥಿ ಪ್ರತಿನಿಧಿಗಳಾದ ಪವಿತ್ರ, ಪೂಜಾ, ಚಿತ್ರಾಕ್ಷ, ಹರ್ಷಿತ್, ಅರ್ಪಿತ ಇವರಿಗೆ ಧ್ವಜ ನೀಡಿ ಪ್ರಿನ್ಸಿಪಾಲ್ ಪ್ರೊ. ಎಂ.ಬಾಲಕೃಷ್ಣ ಶೆಟ್ಟಿ ಜಾಥಕ್ಕೆ ಚಾಲನೆ ನೀಡಿದರು. ಚಾಲನೆ ಕೊಟ್ಟರು. ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ.ಗಣಪತಿ ಭಟ್, ಪ್ರೊ.ಪರಮೇಶ್ವರ್ ಸಿ.ಚ್., ಪ್ರೊ.ಸುರೇಶ್, ಡಾ. ಕೃಷ್ಣ ಕಾಂಚನ್, ಅನುಜ್ಞಾ ಭಟ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-31081604.

Comments

comments

Comments are closed.

Read previous post:
Kinnigoli-31081602
ರಾಷ್ಟ್ರಮಟ್ಟದ ಕರಾಟೆ ಕರ್ನಾಟಕ ಚಾಂಪಿಯನ್ ಶಿಪ್ ಪ್ರಶಸ್ತಿ

ಕಿನ್ನಿಗೋಳಿ : ಗೋಶಿನ್-ರಿಯು ಇಂಡಿಯನ್ ಕರಾಟೆ ವತಿಯಿಂದ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಅತೀ ಹೆಚ್ಚು ಪ್ರಶಸ್ತಿ ಗಳಿಸಿ ಚಾಂಪಿಯನ್ ಶಿಪ್...

Close