ಕಿನ್ನಿಗೋಳಿ ವ್ಯ. ಸೇ. ಸ. ಬ್ಯಾಂಕ್ ಮಹಾ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಇದರ ವಾರ್ಷಿಕ ಮಹಾ ಸಭೆ ಬ್ಯಾಂಕ್‌ನ ಅಧ್ಯಕ್ಷ ಕೆ. ಲವ ಶೆಟ್ಟಿ ಅಧ್ಯಕ್ಷತೆಯಲ್ಲಿ ನೇಕಾರ ಸೌಧದಲ್ಲಿ ಭಾನುವಾರ ನಡೆಯಿತು.
6322 ಮೆಂಬರರಿದ್ದು 13555740 ರೂ ಪಾಲು ಬಂಡವಾಳವಿದೆ. ಪಾಲು ಬಂಡವಾಳದಲ್ಲಿ ಶೇ. 10.25 ರಷ್ಟು ವೃದ್ಧಿಯಾಗಿರುತ್ತದೆ. ಠೇವಣಿ ಮೊತ್ತ ಹಿಂದಿನ ವರ್ಷಕ್ಕಿಂತ ಶೇ.20.45 ರಷ್ಟು ವೃದ್ಧಿಯಾಗುತ್ತದೆ. ಸರ್ಕಾರಿ ಆದೇಶದಂತೆ ಕೃಷಿಕರಿಗೆ ಬೆಳೆಸಾಲ ಮತ್ತು ಮಧ್ಯಮಾವಧಿ ಕೃಷಿ ಸಾಲ ನೀಡಲಾಗುತ್ತಿದೆ. ಕಾರ್ಯಕ್ಷೇತ್ರದ ಶಾಲೆಗಳಲ್ಲಿರುವ ಬಟ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಗಿದೆ. ಜನತಾ ನಿತ್ಯ ನಿಧಿ(ಪಿಗ್ಮಿ)ಯನ್ನು ಸದಸ್ಯರ ಉಳಿತಾಯ ದೃಷ್ಟಿಯಿಂದ ಪ್ರಾರಂಭಿಸಲಾಗಿದೆ. ಸ್ವಸಹಾಯ ಗುಂಪುಗಳಿಗೆ ವರದಿ ವರ್ಷದಲ್ಲಿ 6625000 ರೂ. ಸಾಲ ವಿತರಿಸಲಾಗಿದೆ. ಬ್ಯಾಂಕ್ 7173436 ನಿವ್ವಳ ಲಾಭ ಗಳಿಸಿದೆ. ಮೆಂಬರುಗಳಿಗೆ 16% ಡಿವಿಡೆಂಟ್ ನೀಡಲಾಗುತ್ತಿದೆ. ಎಂದು ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೇಖರ ಮಾಡ ವಾರ್ಷಿಕ ವರದಿಯಲ್ಲಿ ಹೇಳಿದರು.
ಆಡಳಿತ ಮಂಡಳಿಯ ಉಪಾಧ್ಯಕ್ಷ ಜೋಸೆಫ್ ಕ್ವಾಡ್ರಸ್, ನಿರ್ದೇಶಕರಾದ ರಘುರಾಮ ಅಡ್ಯಂತಾಯ, ಪುರಂದರ ಎಂ. ಶೆಟ್ಟಿ, ಪ್ರವೀಣ್ ಮಾಡ, ಲೋಕಯ್ಯ ಸಾಲ್ಯಾನ್, ನಾರಾಯಣ ಕುಂದರ್, ವನಜ ಎಸ್. ಶೆಟ್ಟಿ, ಮಾರ್ಗರೇಟ್ ವಾಸ್, ಶೀನ ಎಂ., ಶೇಷರಾಮ ಶೆಟ್ಟಿ ಉಪಸ್ಥಿತರಿದ್ದರು.
2016-17 ನೇ ಸಾಲಿನಲ್ಲಿ 5 ಕೋಟಿ ಠೇವಣಿ ಸಂಗ್ರಹ ಮಾಡುವುದು ಹಾಗೂ ಅಷ್ಟೆ ಮೊತ್ತ ಸಾಲ ನೀಡುವುದು, ಸ್ವಸಹಾಯ ಗುಂಪುಗಳನ್ನು ಬಲಪಡಿಸಿ ಅರ್ಹ ಗುಂಪುಗಳಿಗೆ ಸಾಲ ವಿತರಣೆ, ಎಲ್ಲಾ ರೈತ ವರ್ಗದ ಸದಸ್ಯರಿಗೆ ತಿಳುವಳಿಕೆ ಮತ್ತು ಜಾಗೃತಿ ಮೂಡಿಸಿ ಸಾಲ ನೀಡುವುದು. ಅಲ್ಲದೆ ಗಣಕೀಕೃತ ಪಾಸ್ ಪುಸ್ತಕ ಮತ್ತು 100% ಗಣಕೀಕರಣ ಮಾಡಲಾಗುವುದು ಎಂದು ತೀರ್ಮಾನ ಮಾಡಲಾಯಿತು.

Kinnigoli-0109201601

Comments

comments

Comments are closed.

Read previous post:
Kinnigoli-31081603
ಕ್ಯಾನ್ಸರ್ ಪೀಡಿತರಿಗೆ ಸಹಾಯಧನ

ಕಿನ್ನಿಗೋಳಿ: ದಾಮಸ್‌ಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಕ್ಯಾನ್ಸರ್ ಪೀಡಿತ ಅಶೋಕ್ ಕೋಟ್ಯಾನ್ ಗುತ್ತಕಾಡು ಅವರಿಗೆ ಸಹಾಯಧನ ವಿತರಿಸಲಾಯಿತು. ಈ ಸಂದರ್ಭ ನಾರಾಯಣ ಅಂಚನ್,...

Close