ಪ್ರೊ. ಜಯರಾಮ ಪೂಂಜ : ಶ್ರೇಷ್ಠ ಪ್ರಾಚಾರ್ಯ ರಾಜ್ಯ ಪ್ರಶಸ್ತಿ

ಕಿನ್ನಿಗೋಳಿ :ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಡಳಿತಕ್ಕೊಳಪಟ್ಟ ಶ್ರೀ ದುರ್ಗಾಪರಮೇಶ್ವರೀ ದೇವಳದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯರಾಮ ಪೂಂಜ ಅವರಿಗೆ ಕರ್ನಾಟಕ ಸರಕಾರ ಕೊಡಮಾಡುವ ರಾಜ್ಯಮಟ್ಟದ ಶ್ರೇಷ್ಠ ಪ್ರಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಇವರು ೩೪ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಕಳೆದ 12 ವರ್ಷಗಳಿಂದ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯದಿಂದ ಎಂ.ಫಿಲ್ ಪದವಿ ಪಡೆದಿರುತ್ತಾರೆ. ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿದ್ದು, ಸಂಪನ್ನೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿರುತ್ತಾರೆ.

Kinnigoli03091601

Comments

comments

Comments are closed.

Read previous post:
Kinnigoli-0209201604
ಕಿನ್ನಿಗೋಳಿ ಬಂದ್ ಮಿಶ್ರ ಪ್ರತಿಕ್ರಿಯೆ

ಕಿನ್ನಿಗೋಳಿ: ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳ “ಭಾರತ ಬಂದ್" ಕಿನ್ನಿಗೋಳಿ ಪರಿಸರದಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ. ಖಾಸಗಿ ವಾಹನ, ಕಾರು ರಿಕ್ಷಾಗಳು ಸಂಚಾರ ಹಾಗೂ ಜನರ ಓಡಾಟವಿತ್ತು...

Close