ಕಟೀಲು ದಿ. ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ ಪ್ರಶಸ್ತಿ ಪ್ರದಾನ

ಕಟೀಲು : ಮುಗ್ದ ಮನಸ್ಸು, ದೇವರ ಅಚಲ ನಂಬಿಕೆ ಹಾಗೂ ಪ್ರಾಮಾಣಿಕ ವರ್ಚಸ್ಸಿನಿಂದ ವಿಶ್ವಮಾನ್ಯರಾಗಿ ಮಾಡಿದ ಸಾಧನೆಯ ಫಲ ಇಂದಿಗೂ ಇದ್ದು, ಕಟೀಲು ದೇವಳದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ದೇವಿಯ ಅನನ್ಯ ಸೇವೆಯಲ್ಲಿ ಕೃತಾರ್ಥರಾದ ಗೋಪಾಲಕೃಷ್ಣ ಆಸ್ರಣ್ಣರ ನೆನಪು ಮಾಡುವುದು ಸುತ್ಯಾರ್ಹ ಎಂದು ಎಂ.ಜಿ. ಎಂ. ಕಾಲೇಜು ನಿವೃತ್ತ ಪ್ರಿನ್ಸ್‌ಪಾಲ ಎಮ್. ಎಲ್ ಸಾಮಗ ಹೇಳಿದರು.
ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಶನಿವಾರ ನಡೆದ ಕಟೀಲು ದಿ| ಗೋಪಾಲಕೃಷ್ಣ ಆಸ್ರಣ್ಣ ರ ಸಂಸ್ಮರಣೆ ಕಾರ್ಯಕ್ರಮ, ವೈದಿಕ ಪ್ರಶಸ್ತಿ , ಮೊಕೇಸರ ಪ್ರಶಸ್ತಿ, ಕಲಾವಿದರ ಪ್ರಶಸ್ತಿ ಹಾಗೂ ದಿ. ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣಗೈದು ಮಾತನಾಡಿದರು.
ಕಟೀಲು ದೇವಳ ಅನುವಂಶಿಯ ಮೊಕ್ತೇಸರ ಡಾ. ರವೀಂದ್ರನಾಥ ಪೂಂಜ ಅಧ್ಯಕ್ಷತೆ ವಹಿಸಿ ಮಾತನಾಡಿ ದಿ. ಆಸ್ರಣ್ಣರು ದೈವಿಕ ಶಕ್ತಿ ಉಳ್ಳವರಾಗಿದ್ದು ಮಹಾನ್ ಪುರುಷರಾಗಿದ್ದರು ಅವರ ಸಾಧನೆ ಮುಂದಿನ ಯುವಪೀಳಿಗೆಗೆ ತಿಳಿ ಹೇಳುವ ಕಾರ್ಯ ಅವರ ದ್ಯೇಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸುವ ಕಾರ್ಯ ಕೆಲಸ ಆಗಬೇಕು ಎಂದರು.
ಸುರತ್ಕಲ್ ಸದಾಶಿವ ದೇವಳದ ಪ್ರಧಾನ ಅರ್ಚಕ ದಾಸ ಮಯ್ಯ ಅವರಿಗೆ ವೈದಿಕ ಪ್ರಶಸ್ತಿ ಪ್ರಧಾನ, ಮುಂಬಯಿಯ ಗನ್ಸೋಲಿ ಮೂಕಾಂಬಿಕಾ ಮಂದಿರ ಅಧ್ಯಕ್ಷ ಅಣ್ಣಿ ಶೆಟ್ಟಿ ಅವರಿಗೆ ಮೊಕ್ತೇಸರ ಪ್ರಶಸ್ತಿ , ಕಟೀಲು ಮೇಳದ ಕಲಾವಿದ ಉಮೇಶ್ ಹೆಬ್ಬಾರ್ ಅವರಿಗೆ ಕಲಾವಿದರ ಪ್ರಶಸ್ತಿ ( ಸುರೇಶ್ ಭಂಡಾರಿ ಮುಂಬಯಿ ಇವರ ಕೊಡುಗೆ ) ಕಟೀಲು ಮೇಳದ ಕಲಾವಿದ ಪಡ್ರೆ ಕುಮಾರ ಅವರಿಗೆ ಕದ್ರಿ ಬಳಗದ ಕೊಡುಗೆಯಾಗಿ ದಿ. ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ ಪ್ರಧಾನ ನಡೆಯಿತು.
ಮುಂಬಯಿ ಉದ್ಯಮಿ ಸುರೇಶ್ ಭಂಡಾರಿ ಕಡಂದಲೆ, ಕಸಾಪ ಮಾಜಿ ರಾಜಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಎಂಸಿಎಫ್ ನಿರ್ದೇಶಕ ಪ್ರಭಾಕರ ರಾವ್, ಮೂಡಬಿದಿರೆ ಉದ್ಯಮಿ ಶ್ರೀಪತಿ ಭಟ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಮುಂಬಯಿ ಉದ್ಯಮಿ ಭುಜಂಗ ಶೆಟ್ಟಿ, ಉದ್ಯಮಿ ನಿಲೇಶ್ ಶೆಟ್ಟಿಗಾರ್, ಕದ್ರಿ ನವನೀತ ಶೆಟ್ಟಿ , ಗೋಪಾಲಕೃಷ್ಣ ಆಸ್ರಣ್ಣ, ಜಯಂತಿ ಆಸ್ರಣ್ಣ, ಪಿ. ಸತೀಶ್ ರಾವ್, ಬಿಜೆಪಿ ಮುಲ್ಕಿ ಮೂಡಬಿದ್ರೆ ಮಂಡಲ ಅಧ್ಯಕ್ಷ ಈಶ್ವರ್ ಕಟೀಲು, ದೊಡ್ಡಯ್ಯ ಮೂಲ್ಯ, ಪು. ಗುರುಪ್ರಸಾದ್ ಭಟ್, ಜನಾರ್ದನ ಹಂದೆ ಉಪಸ್ಥಿತರಿದ್ದರು.
ಸಂಘಟಕ ವೆ| ಮೂ| ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿದರು. ರಮ್ಯಾ ರವಿತೇಜ್ ಕಾರ್ಯಕ್ರಮ ನಿರೂಪಿಸಿದರು.

Kateel-04091601

Comments

comments

Comments are closed.

Read previous post:
Kinnigoli03091601
ಪ್ರೊ. ಜಯರಾಮ ಪೂಂಜ : ಶ್ರೇಷ್ಠ ಪ್ರಾಚಾರ್ಯ ರಾಜ್ಯ ಪ್ರಶಸ್ತಿ

ಕಿನ್ನಿಗೋಳಿ :ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಡಳಿತಕ್ಕೊಳಪಟ್ಟ ಶ್ರೀ ದುರ್ಗಾಪರಮೇಶ್ವರೀ ದೇವಳದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯರಾಮ ಪೂಂಜ...

Close