ಕಟೀಲಿನಲ್ಲಿ ಭಕ್ತರಿಂದ ಪ್ರಾರ್ಥನೆ

ಕಟೀಲು : ಕಟೀಲು ಶ್ರೀದುರ್ಗಾಪರಮೇಶ್ವರೀ ಅಮ್ಮನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಕೃತಿಯ ಚಿತ್ರ ಹಾಗೂ ಅವಹೇಳನಕರ ಬರಹ ಬರೆದ ಹಿನ್ನಲೆಯಲ್ಲಿ ಭಾನುವಾರ ಭಜನಾ ಕಾರ್ಯಕ್ರಮ ಹಾಗೂ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಎಕ್ಕಾರು ಭಜನಾ ತಂಡದಿಂದ ಪಾದಯಾತ್ರೆಯ ಮೂಲಕ ಭಜನೆ ಮಾಡುತ್ತ ಕಟೀಲಿನ ಸರಸ್ವತೀ ಸದನದಲ್ಲಿ ಸೇರಿ ಬಳಿಕ ಮಾಣಿಲ ಶ್ರೀ ಮೋಹನ್‌ದಾಸ ಸ್ವಾಮಿಜಿ ನೇತ್ರತ್ವದಲ್ಲಿ ಭಕ್ತಾಭಿಮಾನಿಗಳು ಭಜನೆ ಮಾಡುತ್ತ ದೇವಳಕ್ಕೆ ಬಂದು ಸಾಮೂಹಿಕ ವಿಶೇಷ ಪ್ರಾರ್ಥನೆ ನಡೆಸಿದರು.
ಕಟೀಲು ದೇವಳದ ಅನುವಂಶಿಕ ಅನುವಂಸಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಡಾ. ರವೀಂದ್ರನಾಥ ಪೂಂಜಾ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ , ವೆಂಕರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಶ್ರೀಹರಿನಾರಾಯಣ ದಾಸ ಆಸ್ರಣ್ಣ , ದೇವಳದ ತಂತ್ರಿ ವೇದವ್ಯಾಸ ತಂತ್ರಿ, ಕನ್ಯಾನದ ಶ್ರೀ ಮಹಾಬಲ ಸ್ವಾಮೀಜಿ, ದ.ಕ. ಜಿಲ್ಲಾ ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ವಿವಿಧ ಸಂಘಟನೆಗಳ ಮುಖಂಡರಾದ ಶರಣ್ ಪಂಪ್‌ವೈಲ್, ಜಗದೀಶ ಶೇಣವ, ಆನಂದ ಶೆಟ್ಟಿ ಅಡ್ಯಾರ್, ಜಿತೇಂದ್ರ ಕೊಟ್ಟಾರಿ, ಮಿಥುನ್ ರೈ, ಧರ್ಮಸ್ಥಳ ದ ಭುಜಬಲಿ ಧರ್ಮಸ್ಥಳ, ರಾಮಕೃಷ್ಣ ಉಡುಪ, ಶ್ರೀನಿವಾಸ ರಾವ್, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಭಾಸ್ಕರ ದಾಸ ಎಕ್ಕಾರು, ಉಮಾನಾಥ ಕೋಟ್ಯಾನ್, ಯುಗಪುರುಷದ ಭುವನಾಭಿರಾಮ ಉಡುಪ, ಮೋನಪ್ಪ ಶೆಟ್ಟಿ ಎಕ್ಕಾರು, ಕೊರಿಯರ್ ಸುಬ್ರಹ್ಮಣ್ಯ ಭಟ್, ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನದ ಜಯರಾಮ ಮುಕ್ಕಾಲ್ದಿ , ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ನಿತಿನ್ ಹೆಗ್ಡೆ ಕಾವರ ಮನೆ, ಉಳೆಪಾಡಿ ದೇವಳದ ಧರ್ಮದರ್ಶಿ ಮೋಹನ್‌ದಾಸ್ ಸುರತ್ಕಲ್, ಜಿ. ಪಂ. ಮಾಜಿ ಸದಸ್ಯ ಈಶ್ವರ್ ಕಟೀಲು . ಸೊಂದಾ ಭಾಸ್ಕರ ಭಟ್, ರತ್ನಾಕರ ಶೆಟ್ಟಿ, ಕಿರಣ್ ಶೆಟ್ಟಿ ಕೊಡೆತ್ತೂರು, ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ , ಸುಧೀರ್ ಶೆಟ್ಟಿ , ಅತ್ತೂರು ಗುತ್ತು ಪ್ರಸನ್ನ ಎಲ್. ಶೆಟ್ಟಿ, ಸುದರ್ಶನ್ ಮೂಡಬಿದಿರೆ, ಹರೀಶ್ ಪೂಂಜ, ಸುಖೇಶ್ ಶೆಟ್ಟಿ ಶಿರ್ತಾಡಿ, ಧನಂಜಯ ಮಟ್ಟು, ಕುಡ್ತಿಮಾರು ಗುತ್ತು ಗಿರೀಶ್ ಶೆಟ್ಟಿ, ದೇವಸ್ಥಾನದ ಪ್ರಬಂಧಕ ವಿಜಯ ಕುಮಾರ್ ಶೆಟ್ಟಿ ಪರಿಸರದ ಗ್ರಾಮಸ್ಥರು ಹಾಗೂ ಊರಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮಾಣಿಲ ಶ್ರೀ ಮೋಹನ್‌ದಾಸ ಸ್ವಾಮಿಜಿ ಪುರಾಣ ಪ್ರಸಿದ್ದ ಕಟೀಲು ದುರ್ಗೆಯನ್ನು ವಿಕೃತ ಮನಸ್ಸಿನಲ್ಲಿ ಅವಹೇಳನ ಮಾಡಿದ್ದು, ದಾರ್ಮಿಕ ಶೃದ್ಧೆ ಹಾಗೂ ಭಕ್ತರ ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗಿದೆ ಇದಕ್ಕೆ ಪ್ರತ್ತುತ್ತರವಾಗಿ ದೇವರೇ ಅವರಿಗೆ ಬುದ್ದಿ ಕಲಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಹೇಳಿದರು.
ದ.ಕ. ಸಂಸದ ನಳಿನ್ ಕುಮಾರ್ ಮಾತನಾಡಿ ಈ ಸಂದರ್ಭ ಜಿಲ್ಲೆಯಲ್ಲಿ ಗಣೇಶ ಹಬ್ಬ ಹಾಗೂ ಇನ್ನಿತರ ಕಾರ್ಯಗಳು ನಡೆಯುತ್ತಿರುವುದರಿಂದ ಅಲ್ಲಿಯೂ ಪ್ರಾರ್ಥನೆ ಸಲ್ಲಿಸಬೇಕು. ಧರ್ಮಗಳ ಬಗ್ಗೆ ಶೃದ್ದೆಯಿರದ ಬೆರಳೆಣಿಕೆಯ ಕಿಡಿಗೇಡಿಗಳ ಹೇಯ ಕೃತ್ಯವನ್ನು ಖಂಡಿಸುತ್ತೇವೆ ಅಕೃತ್ಯ ಗೈದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪೋಲೀಸ್ ಇಲಾಖೆಯ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದರು.
ಸ್ಥಳೀಯ ಶಾಸಕ ಕೆ. ಅಭಯಚಂದ್ರ ಜೈನ್ ಮಾತನಾಡಿ ಸಂಕುಚಿತ ಮನೋಭಾವನೆಯ ಕೆಲವು ಕಿಡಿಗೇಡಿಗಳಿಂದ ಕಟೀಲು ದೇವಿಯ ನಿಂದನೆ ಅವಹೇಳನಗಳಿಂದ ಭಕ್ತರ ಸಮುದಾಯಕ್ಕ ನೋವು ಉಂಟಾಗಿದೆ ಸರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ, ವಿಘ್ನ ಸಂತೋಷಿಗಳಿಗೆ ಕಟೀಲು ದೇವಿಯೇ ಸದ್ ಬುದ್ದಿ ಕೊಡಲಿ ಇಂತಹ ಘಟನೆಗಳು ಇನ್ನೂ ಮುಂದಕ್ಕೆ ಮರುಕಳಿಸಬಾರದು. ಎಲ್ಲ ಧರ್ಮಿಯರಿಗೂ ದೇವಿಯು ಇತರ ಧರ್ಮಗಳಿಗೆ ನೋವಾಗದಂತೆ ಮನಸ್ಸು ನೀಡಲಿ ಎಂದರು.

Kateel-04091602 Kateel-04091603 Kateel-04091604 Kateel-04091605

Comments

comments

Comments are closed.

Read previous post:
Kinnigoli-04031601
ಕಿನ್ನಿಗೋಳಿ : ಶಿಕ್ಷಣ ಸಂದೇಶ ಸಾಂಸ್ಕೃತಿಕ ಸೌರಭ

ಕಿನ್ನಿಗೋಳಿ : ಇಂದಿನ ಕಾಲದಲ್ಲಿ ಮೌಲ್ಯಧಾರಿತ ಶಿಕ್ಷಣದ ಅಗತ್ಯವಿದೆ. ಶಿಕ್ಷಣದ ಮೂಲಕವಾಗಿ ಸಾಧನೆ ಮಾಡಿ ಯಶಸ್ಸು ಪಡೆದು ಸಮಾಜಕ್ಕೆ ಕೈಲಾದಷ್ಟು ಸಹಾಯ ಹಸ್ತ ನೀಡಬೇಕು. ಎಂದು ಕಟೀಲು ದೇವಳ...

Close