ಕಿನ್ನಿಗೋಳಿ : ಶಿಕ್ಷಣ ಸಂದೇಶ ಸಾಂಸ್ಕೃತಿಕ ಸೌರಭ

ಕಿನ್ನಿಗೋಳಿ : ಇಂದಿನ ಕಾಲದಲ್ಲಿ ಮೌಲ್ಯಧಾರಿತ ಶಿಕ್ಷಣದ ಅಗತ್ಯವಿದೆ. ಶಿಕ್ಷಣದ ಮೂಲಕವಾಗಿ ಸಾಧನೆ ಮಾಡಿ ಯಶಸ್ಸು ಪಡೆದು ಸಮಾಜಕ್ಕೆ ಕೈಲಾದಷ್ಟು ಸಹಾಯ ಹಸ್ತ ನೀಡಬೇಕು. ಎಂದು ಕಟೀಲು ದೇವಳ ಅರ್ಚಕ ಶ್ರೀ ಲಕ್ಷ್ಮಿನಾರಾಯಣ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ರೋಟರ‍್ಯಾಕ್ಟ್ , ರೋಟರಿ ಕ್ಲಬ್, ಯುಗಪುರುಷ, ಇನ್ನರ್ ವೀಲ್ , ಕಿನ್ನಿಗೋಳಿ ವಿಜಯಕಲಾವಿದರು ಹಾಗೂ 12 ಇಂಟರ‍್ಯಾಕ್ಟ್ ಕ್ಲಬ್‌ಗಳ ಆಶ್ರಯದಲ್ಲಿ ಶನಿವಾರ ನಡೆದ ಶಿಕ್ಷಣ ಸಂದೇಶ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆವಹಿಸಿ ಮಾತನಾಡಿ ನೈತಿಕತೆ ಹಾಗೂ ಸಂಸ್ಕಾರ ಯುತ ಶಿಕ್ಷಣವನ್ನು ಯುವ ಜನಾಂಗಕ್ಕೆ ನೀಡಿದಾಗ ಸುಸಂಸ್ಕೃತ ಸುಧೃಡ ಸಮಾಜ ನಿರ್ಮಾಣ ಸಾಧ್ಯ ಎಂದರು.
ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಮಾನಂದ ಪೂಜಾರಿ, ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಕಿನ್ನಿಗೋಳಿ ಇಂಟರ‍್ಯಾಕ್ಟ್ ಸಭಾಪತಿ ಸಾಯಿನಾಥ ಶೆಟ್ಟಿ , ಕಿನ್ನಿಗೋಳಿ ಇನ್ನರ್‌ವೀಲ್ ಅಧ್ಯಕ್ಷೆ ವಿಮಲಾ ತ್ಯಾಗರಾಜ್, ಕಿನ್ನಿಗೋಳಿ ರೋಟರ‍್ಯಾಕ್ಟ್ ಅಧ್ಯಕ್ಷ ಅಶೋಕ್ ಎಸ್, ರೋಟರ‍್ಯಾಕ್ಟ್ ಮಾಜಿ ಜಿಲ್ಲಾ ಪ್ರತಿನಿ ಸುಮಿತ್ ಕುಮಾರ್, ಲಕ್ಷಣ್ ಬಿಬಿ. ಹರೀಶ್ ಪಡುಬಿದ್ರಿ, ಜಗದೀಶ ಶೆಟ್ಟಿ ಕೆಂಚನಕೆರೆ, ಜಯರಾಮ ಶೆಟ್ಟಿ ಸಾಲೆತ್ತೂರು ಮತ್ತಿತರರು ಉಪಸ್ಥಿತರಿದ್ದರು. ಕಿನ್ನಿಗೋಳಿ ವಿಜಯ ಕಲಾವಿದರು ಅಧ್ಯಕ್ಷ ಶರತ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-04031601

Comments

comments

Comments are closed.

Read previous post:
Kateel-04091601
ಕಟೀಲು ದಿ. ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ ಪ್ರಶಸ್ತಿ ಪ್ರದಾನ

ಕಟೀಲು : ಮುಗ್ದ ಮನಸ್ಸು, ದೇವರ ಅಚಲ ನಂಬಿಕೆ ಹಾಗೂ ಪ್ರಾಮಾಣಿಕ ವರ್ಚಸ್ಸಿನಿಂದ ವಿಶ್ವಮಾನ್ಯರಾಗಿ ಮಾಡಿದ ಸಾಧನೆಯ ಫಲ ಇಂದಿಗೂ ಇದ್ದು, ಕಟೀಲು ದೇವಳದ ಅಭಿವೃದ್ಧಿಯಲ್ಲಿ ತನ್ನನ್ನು ತಾನು...

Close