ಕಟೀಲು ದೇವಿ ಅವಹೇಳನ ಕಠಿಣ ಕ್ರಮಕ್ಕೆ ಯಡ್ಡಿ ಒತ್ತಾಯ

ಕಟೀಲು : ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಸೇರಿದಂತೆ ಹಿಂದೂ ದೇವರುಗಳ ಅವಹೇಳನ ಮಾಡುವ ಮೂಲಕ ಕರಾವಳಿಯಲ್ಲಿ ಕೆಲವು ಸ್ಥಾಪಿತ ಹಿತಾಸಕ್ತಿಗಳು ಕೋಮುವಾದ ಹಾಗೂ ಭಯೋತ್ಪಾದನೆ ಬಿತ್ತುವ ಹುನ್ನಾರ ಸದ್ದಿಲ್ಲದೆ ನಡೆಯುತ್ತಿದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು
ಕಟೀಲು ದೇವಳಕ್ಕೆ ಸೋಮವಾರ ಮಧ್ಯಾಹ್ನ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿ ದುಷ್ಕರ್ಮಿಗಳ ಪಿತೂರಿಯಿಂದ ಕೆಲವರು ಹಿಂದೂ ದೇವರನ್ನು ಅವಹೇಳನ ಮಾಡುತ್ತಿದ್ದು ಯುವಕರು ತಾಳ್ಮೆಯಿಂದ ವರ್ತಿಸಿ ಕಾನೂನನ್ನು ಕೈಗೆತ್ತಿಕೊಳ್ಳದೆ ಶಾಂತಿಯುತವಾಗಿ ವ್ಯವಹರಿಸಬೇಕು ತಪ್ಪಿತಸ್ಥರಿಗೆ ದೇವಿಯೇ ಶಿಕ್ಷಿಸುತ್ತಾಳೆ, ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಈ ಕೃತ್ಯಗಳ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಒತ್ತಡ ತರಲಾಗುವುದು ಮತ್ತು ಕೇಂದ್ರ ಗ್ರಹ ಸಚಿವರಿಗೂ ಸೂಕ್ತ ಕ್ರಮಕ್ಕಾಗಿ ಮನವಿ ಸಲ್ಲಿಸಲಾಗುವುದು. ಕೆಲ ಸಂಘಟನೆಗಳು ಕೇರಳದ ಕಾಸರಗೋಡಿನಲ್ಲಿ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿ ಬಗ್ಗೆ ವರದಿಯಾಗಿದ್ದರೂ ಸರಕಾರ ಮೌನ ವಹಿಸಿದೆ ಎಂದು ಆರೋಪಿಸಿದರು.
ಕಾವೇರಿ ತೀರ್ಪು ರೈತ ಸಮದಾಯಕ್ಕೆ ಬಹಳ ಆಘಾತ ತಂದಿದ್ದು ರಾಜ್ಯದೆಲ್ಲೆಡೆ ಮಳೆ ಪ್ರಮಾಣ ಕಡಿಮೆ ಬಿದ್ದ ಕೆಆರ್‌ಎಸ್‌ಗೆ ನೀರಿನ ಒಳ ಹರಿವು ಕಡಿಮೆಯಾಗಿದೆ ರಾಜ್ಯದ ಹೆಚ್ಚಿನ ಆಣೆಕಟ್ಟುಗಳಲಿನಿದೇ ಪರಿಸ್ಥಿತಿ ಇದೆ. ಈ ವರ್ಷ ಬರದ ಲಕ್ಷಣ ಈಗಾಗಲೇ ಕಾಣಸತೊಡಗಿದೆ. ಇಲ್ಲಿನ ರೈತರಿಗೆ ಕುಡಿಯುವ ನೀರಿಗೆ ತತ್ವಾರವಿರುವಾಗ ತಮಿಳುನಾಡಿನ ರೈತರ ಬೆಳೆಗಳಿಗೆ ಎಲ್ಲಿಂದ ನೀರು ಪೊರೈಸುವುದೇ ಯಕ್ಷ ಪ್ರಶ್ನೆಯಾಗಿದೆ. ಸರಕಾರ ಶೀಘ್ರ ವಿಧಾನ ಮಂಡಲದ ತುರ್ತು ಅಧಿವೇಶನ ಕರೆದು ಈ ಬಗ್ಗೆ ಚರ್ಚಿಸಿ ಸುಪ್ರಿಂ ಕೋರ್ಟಿಗೆ ಮೇಲ್ಮನವಿ ನೀಡುವ ಮೂಲಕ ಈ ಆದೇಶಕ್ಕೆ ತಡೆತರಬೇಕಾಗಿದೆ. ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿಯ ವರಿಷ್ಠ ನಾಯಕ ಈಶ್ವರಪ್ಪನವರ ಸಂಗೊಳ್ಳಿ ನಾಯಕ ಸಂಘಟನೆ ಬಗ್ಗೆ ಕೇಳಿ ಪ್ರಶ್ನೆಗೆ ನೋ ಕಮೆಂಟ್ಸ್ ಎಂದು ಮೌನವಾದರು.
ಈ ಸಂದರ್ಭ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಶರಣ್ ಪಂಪ್‌ವೆಲ್ ಬಿಜೆಪಿ ರಾಜ್ಯಾಧ್ಯಕ್ಷರ ಮೂಲಕ ಕೇಂದ್ರ ಗೃಹ ಸಚಿವರಿಗೆ ಕಟೀಲು ದೇವಿಯ ಅವಹೇಳನ ಹಾಗೂ ಹಿಂದೂ ಧಾರ್ಮಿಕ ಭಾವನೆಗಳಿಗೆ ಘಾಸಿತಂದಿರುವ ಆರೋಪಿಗಳ ವಿರುದ್ದ ಶೀಘ್ರ ಕ್ರಮಕ್ಕಾಗಿ ಮನವಿ ನೀಡಿದರು.
ಬಳಿಕ ಮಾತನಾಡಿ ರಾಜ್ಯ ಸರ್ಕಾರ ಹಿಂದೂ ಭಾವನೆಗಳ ಬಗ್ಗೆ ನಿರ್ಲಕ್ಷ ಧೋರಣೆ ಅನುಸರಿಸುತ್ತಿದೆ. ಹಿಂದೆಯೂ ಅನೇಕ ಹಿಂದೂ ನಾಯಕರ ಹತ್ಯೆಯ ತನಿಖೆ ನೆನೆಗುದಿಗೆ ಸೇರುವಂತೆ ಮಾಡಲಾಗಿದೆ. ಈ ಕಾರಣಗಳಿಂದ ಕೇಂದ್ರ ಗ್ರಹಸಚಿವರಿಗೆ ಮನವಿ ನೀಡಲಾಗಿದೆ ಎಂದರು.
ಕಟೀಲು ದೇವಳ ಅನುವಂಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಡಾ. ರವೀಂದ್ರನಾಥ ಪೂಂಜ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡ್ಯೂರಪ್ಪ ಅವರನ್ನು ಸ್ವಾಗತಿಸಿ ಶ್ರೀದೇವಿಯ ಶೇಷವಸ್ತ್ರ ಪ್ರಸಾದ ನೀಡಿದರು.
ಕಟೀಲು ದೇವಳದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಸಂಸದ ನಳಿನ್ ಕುಮಾರ್ ಕಟೀಲು, ಸಂಸದೆ ಶೋಭಾ ಕರಂದ್ಲಾಜೆ, ಮೋನಪ್ಪ ಭಂಡಾರಿ, ದಕ ಬಿಜೆಪಿ ಜಲ್ಲಾಧ್ಯಕ್ಷ ಸಂಜೀವ ಮಟಂದೂರು, ಜಲ್ಲಾ ಕಾರ್ಯದರ್ಶಿ ಬೃಜೇಶ್ ಚೌಟ, ಮಾಜಿ ಶಾಸಕ ರಘುಪತಿ ಭಟ್, ಉಡುಪಿ ಬಿಜೆಪಿ ಜಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ದ.ಕ ಜಿಲ್ಲಾ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮುಲ್ಕಿ ಮೂಡಬಿದ್ರೆ ಮಂಡಲ ಕ್ಷೇತ್ರಾಧ್ಯಕ್ಷ ಈಶ್ವರ ಕಟೀಲು, ಕರಾವಳಿ ಕಾಲೇಜು ಮುಖ್ಯಸ್ಥ ಗಣೇಶ್ ರಾವ್, ಹರಿಕೃಷ್ಣ ಪುನರೂರು, ಗೀತಾಂಜಲಿ ಸುವರ್ಣ, ಸುಕುಮಾರ ಶೆಟ್ಟಿ, ಉಮಾನಾಥ ಕೋಟ್ಯಾನ್, ಜಗದೀಶ ಅಧಿಕಾರಿ, ಕೆ.ಪಿ.ಸುದರ್ಶನ್,ಸುಖೇಶ್ ಶೆಟ್ಟಿ ಶಿರ್ತಾಡಿ, ಅಭಿಲಾಷ್ ಶೆಟ್ಟಿ, ಕೆ.ಭುವನಾಭಿರಾಮ ಉಡುಪ, ಸಂದೀಪ್ ಶೆಟ್ಟಿ ಮರವೂರು, ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನದ ಜಯರಾಮ ಮುಕ್ಕಾಲ್ದಿ, ಸಂದೀಪ್ ಶೆಟ್ಟಿ ಮರವೂರು, ಕೊಡೆತ್ತೂರು ದೇವಿ ಪ್ರಸಾದ್ ಶೆಟ್ಟಿ, ದೇವಪ್ರಸಾದ್ ಪುನರೂರು, ಕಟೀಲು ಗ್ರಾ.ಪಂ. ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಸರೋಜಿನಿ ಎಸ್, ಮುಲ್ಕಿ ನಗರ ಪಂಚಾಯಿತಿ ಸದಸ್ಯ ಸುನಿಲ್ ಆಳ್ವಾ, ಜಿ. ಪಂ. ಸದಸ್ಯ ಜನಾರ್ದನ ಗೌಡ, ತಾ.ಪಂ. ಸದಸ್ಯೆಯರಾದ ಶುಭಲತಾ ಶೆಟ್ಟಿ, ರಶ್ಮಿ ಆಚಾರ್ಯ, ಆದರ್ಶ ಶೆಟ್ಟಿ ಎಕ್ಕಾರು, ಜನಾರ್ದನ ಕಿಲೆಂಜೂರು ಮತ್ತಿತರರು ಉಪಸ್ಥಿತರಿದ್ದರು.

Kateel-06091601

Comments

comments

Comments are closed.

Read previous post:
Kinnigoli2016
ಕಿನ್ನಿಗೋಳಿ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ

42 ನೇ ವರ್ಷದ ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಿಗ್ರಹ 23 ನೇ ವರ್ಷದ ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಿಗ್ರಹ 30 ನೇ ವರ್ಷದ ರಾಜರತ್ನಪುರ ಸಾರ್ವಜನಿಕ...

Close