ತೋಕೂರು ಶಿಕ್ಷಕರ ದಿನಾಚರಣೆ

ಕಿನ್ನಿಗೋಳಿ: ಶಿಕ್ಷಕರು ಸಿದ್ದತೆ, ಆದರ್ಶ, ಮಾನವೀಯತೆ, ಸೃಜನಶೀಲ ಮತ್ತು ಹಾಸ್ಯ ದಂತಹ ಪಂಚ ಗುಣಗಳನ್ನು ಹೊಂದಿದವರಾಗಬೇಕು ವಿದ್ಯಾರ್ಥಿಗಳು ಮೌಲ್ಯಯುತ ಜೀವನ ನಡೆಸಿ ಗುರುಗಳನ್ನು ಮೀರಿಸಿದ ಶಿಷ್ಯರಾಗಬೇಕು ಎಂದು ಕಾರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ವಿಷ್ಣುಮೂರ್ತಿ ಹೇಳಿದರು.
ತೋಕೂರು ಮೂಲ್ಕಿ ರಾಮಕೃಷ್ಣ ಪೂಂಜಾ ಐ.ಟಿ.ಐ. ಸಂಸ್ಥೆಯಲ್ಲಿ ಎನ್.ಎಸ್.ಎಸ್. ಮತ್ತು ರೋವರ‍್ಸ್ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಂಸ್ಥೆಯ ಪ್ರಿನ್ಸಿಪಾಲ್ ವೈ.ಎನ್.ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು.
ಕಿರಿಯ ತರಬೇತಿ ಅಧಿಕಾರಿ ಲಕ್ಷ್ಮೀಕಾಂತ , ಬಿ.ಸಂಜೀವ ದೇವಾಡಿಗ, ವಿಶ್ವನಾಥ್ ರಾವ್ ವಿಲ್ಫ್ರ್‌ಡ್ ಜಾನ್ ಮಥಾಯಸ್, ರಾಘವೇಂದ್ರ ಆಡಿಗ ಉಪಸ್ಥಿತರಿದ್ದರು.

Kinnigoli08091605

Comments

comments

Comments are closed.

Read previous post:
Kinnigoli08091604
ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ಬುಧವಾರ ನಡೆಯಿತು.

Close