ಸಂಸ್ಕೃತಿ ಸಂಸ್ಕಾರ – ದೇವರ ಅನುಗ್ರಹ ಸಾಧ್ಯ

ಕಿನ್ನಿಗೋಳಿ: ನಾವು ಸನಾತನ ಮೂಲ ಸಂಸ್ಕೃತಿ ಸಂಸ್ಕಾರ ಆಚರಣೆ ಧಾರ್ಮಿಕತೆಗೆ ದಕ್ಕೆಯಾಗದಂತೆ ಚ್ಯುತಿ ಬಾರದಂತೆ ಕಾರ್ಯಪ್ರವತ್ತರಾದಾಗ ಎಲ್ಲಾ ಕಾರ್ಯದಲ್ಲಿಯೂ ಯಶಸ್ಸು ಹಾಗೂ ದೇವರ ಅನುಗ್ರಹ ಸಾಧ್ಯ ಎಂದು ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಮಂಗಳವಾರ ರಂದು ಕಿನ್ನಿಗೋಳಿ ರಾಜರತ್ನಪುರದ 30 ನೇ ವರ್ಷದ ಸಾರ್ವಜನಿಕ ಬಾಲಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಶ್ರೀ ಕ್ಷೇತ್ರ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕಟೀಲು ದೇವಳ ಅರ್ಚಕ ಸದಾನಂದ ಆಸ್ರಣ್ಣ , ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ವಿನ್ಸೆಂಟ್ ಮೊಂತೆರೋ, ಕಿನ್ನಿಗೋಳಿ ಎಂ. ಜೆ. ಎಂ ಧರ್ಮಗುರು ಅಬ್ದುಲ್ ಲತೀಫ್ ಸಖಾಫಿ ಶುಭಾಶಂಸನೆಗೈದರು.
ಈ ಸಂದರ್ಭ ಸಾಧಕರಾದ ಕೊಡೆತ್ತೂರು ಜಯರಾಮ ಮುಕ್ಕಾಲ್ದಿ, ಉದ್ಯಮಿ ಸುನಿಲ್, ಲಕ್ಷ್ಮೀನಾರಾಯಣ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ನಾಲ್ಕು ಮಂದಿಗೆ ಧನ ಸಹಾಯ ನೀಡಲಾಯಿತು.
ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಉದ್ಯಮಿಗಳಾದ ಧನಂಜಯ ಪಿ. ಶೆಟ್ಟಿಗಾರ್, ಪ್ರಥ್ವಿರಾಜ್ ಆಚಾರ್ಯ, ಕಟೀಲು ಗ್ರಾ. ಪಂ. ಉಪಾಧ್ಯಕ್ಷ ಕಿರಣ್ ಶೆಟ್ಟಿ ಬಾಲಗಣೇಶೋತ್ಸವ ಸಮಿತಿ ಅಧ್ಯಕ್ಷ ವಿನ್ಸಂಟ್ ರೊಡ್ರಿಗಸ್ ಉಪಸ್ಥಿತರಿದ್ದರು.
ಅನುಷಾ ಕರ್ಕೇರಾ ಸ್ವಾಗತಿಸಿದರು. ರೇವತಿ ಪಿ. ಹಾಗೂ ಪ್ರಕಾಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli09091608

Comments

comments

Comments are closed.

Read previous post:
Kinnigoli09091607
ಸ್ನೇಹ ಸೌಹಾರ್ದತೆ ನಿರ್ಮಾಣದಲ್ಲಿ ಧರ್ಮಗಳ ಸಹಕಾರ ಅಗತ್ಯ

ಕಿನ್ನಿಗೋಳಿ : ಸಮಾಜದಲ್ಲಿ ಜಾತಿ ಭಾಷೆ ಹೆಸರಲ್ಲಿ ಗಲಭೆಗಳು ನಡೆಯುತ್ತಿದ್ದು, ಸಮಾಜದಲ್ಲಿ ಶಾಂತಿ ನೆಮ್ಮದಿ, ನೆಲಸಬೇಕಾದರೆ ಸ್ನೇಹ ಸೌಹಾರ್ದತೆಯ ಸುಸಂಸ್ಕ್ರತಿ ಭರಿತ ಪರಿಸರ ನಿರ್ಮಾಣ ಮಾಡುವಲ್ಲಿ ಎಲ್ಲಾ ಧರ್ಮಗಳ...

Close