ಸ್ನೇಹ ಸೌಹಾರ್ದತೆ ನಿರ್ಮಾಣದಲ್ಲಿ ಧರ್ಮಗಳ ಸಹಕಾರ ಅಗತ್ಯ

ಕಿನ್ನಿಗೋಳಿ : ಸಮಾಜದಲ್ಲಿ ಜಾತಿ ಭಾಷೆ ಹೆಸರಲ್ಲಿ ಗಲಭೆಗಳು ನಡೆಯುತ್ತಿದ್ದು, ಸಮಾಜದಲ್ಲಿ ಶಾಂತಿ ನೆಮ್ಮದಿ, ನೆಲಸಬೇಕಾದರೆ ಸ್ನೇಹ ಸೌಹಾರ್ದತೆಯ ಸುಸಂಸ್ಕ್ರತಿ ಭರಿತ ಪರಿಸರ ನಿರ್ಮಾಣ ಮಾಡುವಲ್ಲಿ ಎಲ್ಲಾ ಧರ್ಮಗಳ ಸಹಕಾರ ಅಗತ್ಯ ಎಂದು ಯುವ ಚಿಂತಕ ಶ್ರೀಕಾಂತ ಶೆಟ್ಟಿ ಕಾರ್ಕಳ ಹೇಳಿದರು.
ಮಂಗಳವಾರ ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.
ಎಲ್ಲೆಲ್ಲೂ ದೇವರನ್ನು ಕಾಣುವ ಸಮಾಜ ಆಧುನಿಕತೆ ವ್ಯಾಮೋಹದಲ್ಲಿ ಕುಟುಂಬ ಸಂಬಂಧಗಳನ್ನು ನಿಧಾನವಾಗಿ ಕಳಕೊಳ್ಳುತ್ತಿದ್ದೇವೆ. ಇಂತಹ ಧಾರ್ಮಿಕ ಚಿಂತನೆ ಕಾರ್ಯಕ್ರಮಗಳಲ್ಲಿ ಅಲ್ಲದೆ ಹಿರಿಯರು ಎಳವೆಯಲ್ಲಿ ಶಿಸ್ತು ಸಂಸ್ಕಾರ ಕಲಿಸಬೇಕಾಗಿದೆ. ಎಂದರು.
ಈ ಸಂದರ್ಭಶಿಮಂತೂರು ಜೋತಿಷ್ಯಿ ರಾಮಚಂದ್ರ ಭಟ್ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸೇವಾ ಸಂಘ ಅಧ್ಯಕ್ಷ ಶಿಲ್ಪಿ ಶಿವಪ್ರಸಾದ್ ಆಚಾರ್ಯ, ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಕುಳಾಯಿ ಎನ್.ಆರ್. ಎಲೆಕ್ಟ್ರಿಕಲ್ ನ ಆರ್. ಕೆ ಪುರುಷೋvಮ್, ಉದ್ಯಮಿ ಡೊಲ್ಪಿ ಸಂತುಮಯೋರ್, ಕಿನ್ನಿಗೋಳಿ ಮೆಸ್ಕಾಂ ಇಲಾಖೆಯ ಸುಧಾಕರ್, ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಅಶೋಕ್ ಎಸ್, ರೋಟರಿ ಕ್ಲಬ್ ಅಧ್ಯಕ್ಷ ರಮಾನಂದ ಪೂಜಾರಿ, ಲಯನ್ಸ್ ಅಧ್ಯಕ್ಷ ವೈ. ಯೋಗೀಶ್ ರಾವ್, ಕಿನ್ನಿಗೋಳಿ ಬಸ್ಸು ಚಾಲಕ ನಿರ್ವಾಹಕರ ಸಂಘದ ಕಾರ್ಯದರ್ಶಿ ಗುಲಾಂ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು. ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿ, ಪಿ ಸತೀಶ್ ರಾವ್ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli09091607

Comments

comments

Comments are closed.

Read previous post:
Kateel-09091601
ಕಟೀಲು ಬೃಹತ್ ಕಾಲ್ನಡಿಗೆ ಜಾಥಾ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯ ಅವಹೇಳನ ಹಿನ್ನೆಲೆಯಲ್ಲಿ, ಕಟೀಲು ಶ್ರೀ ದುರ್ಗಾಪರಮೇಶ್ವರೀ ಭಕ್ತ ವೃಂದ ಮೂಡಬಿದ್ರೆ ವತಿಯಿಂದ ಬೃಹತ್ ಕಾಲ್ನಡಿಗೆ ಜಾಥಾ ಮೂಡಬಿದ್ರೆಯ ಸಮಾಜ ಮಂದಿರದಿಂದ...

Close