ಪಂಜ-ಕೆಮ್ರಾಲ್ : ರಸ್ತೆ ಸಾಲು ಗಿಡಗಳ ಅನಾವರಣ

ಕಿನ್ನಿಗೋಳಿ: ವೃಕ್ಷ ಸಂರಕ್ಷಣೆಯಿಂದ ಮಾಲಿನ್ಯ ಮುಕ್ತ ಸ್ವಚ್ಚ ಪರಿಸರ ಹಾಗೂ ಪಾಕೃತಿಕ ಸಮತೋಲನವನ್ನು ಕಾಪಾಡಬಹುದು ಎಂದು ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಹೇಳಿದರು
ಉದ್ಯಮಿ ಸಮಾಜ ಸೇವಕ ಪ್ರಕಾಶ್ ಶೆಟ್ಟಿ ಟಿ. ನಲ್ಯಗುತ್ತು ಅವರ ಮದುವೆ ಬೆಳ್ಳಿ ಹಬ್ಬದ ಸಂಭ್ರಮದ ಪ್ರಯುಕ್ತ ಪಕ್ಷಿಕೆರೆ ಸಮೀಪದ ಪಂಜ ಹಿರಿಯ ಪ್ರಾಥಮಿಕ ಶಾಲೆಯಿಂದ ಕೆಮ್ರಾಲ್ ಪ್ರೌಢ ಶಾಲೆ ವರೆಗೆ ಸುಮಾರು 2 ಕಿಲೋಮೀಟರ್‌ವರೆಗೆ ರಸ್ತೆ ಇಕ್ಕೆಲಗಳಲ್ಲಿ 150 ಸಾಲು ಸಸಿಗಳನ್ನು ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಲು ಗಿಡದ ರೂವಾರಿ ಪ್ರಕಾಶ್ ಶೆಟ್ಟಿ ಟಿ. ನಲ್ಯಗುತ್ತು ಮಾತನಾಡಿ ಬಾಲ್ಯದ ದಿನಗಳಲ್ಲಿ ಪರಿಸರದ ಮದ್ಯೆ ಬೆಳೆದ ನಾನು ಇತ್ತೀಚಿನ ದಿನಗಳಲ್ಲಿ ವೇಗವಾಗಿ ಮರಗಳ ಪ್ರಭೇಧಗಳು ಕಡಿಮೆಯಾಗುತ್ತಿದ್ದು ರಸ್ತೆ ಬದಿ ನೆರಳು, ಶುದ್ದ ಗಾಳಿ ಹಾಗೂ ಹಸಿರು ಪರಿಸರಕ್ಕಾಗಿ ಈ ಯೋಜನೆ ಹಾಕಿಕೊಂಡಿದ್ದೇನೆ. ಪ್ರತಿಯೊಬ್ಬರು ಗಿಡ ಮರ ನೆಟ್ಟು ಪೋಷಿಸಿದರೆ ಕೆಲವೇ ವರ್ಷಗಳಲ್ಲಿ ಪರಿಸರ ಹಸಿರುಮಯವಾಗಲಿದೆ ಎಂದರು.
ಈ ಸಂದರ್ಭ ಗುತ್ತಿನಾರ್ ಸದಾನಂದ ಶೆಟ್ಟಿ ಶಿಬರೂರು ಪಡುಮನೆ, ಕಿನ್ನಿಗೋಳಿ ಕಾರ್ಪೊರೇಶನ್ ಬ್ಯಾಂಕ್ ಪ್ರಬಂಧಕ ಪ್ರವೀಣ್ ಉಳ್ಳಾಲ್, ಅತ್ತೂರು ಕಿಲೆಂಜೂರು ಅರಸು ಕುಂಜಿರಾಯ ದೈವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚರಣ್ ಶೆಟ್ಟಿ, ಉದ್ಯಮಿ ಧನಂಜಯ ಶೆಟ್ಟಿಗಾರ್, ಸೀತಾರಾಮ, ಸುಧಾಕರ ಪೂಂಜ, ಶಾಲಾ ಮುಖ್ಯ ಶಿಕ್ಷಕಿ ಐರಿನ್ ಡಿಸೋಜ, ಕೆಮ್ರಾಲ್ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಸಂದ್ಯಾ ಹೆಗ್ಡೆ, ಕೆಮ್ರಾಲ್ ಪಂಚಾಯಿತಿ ಸದಸ್ಯರಾದ ಸುರೇಶ್ ಪಂಜ, ಆಶಾ, ಸುಮತಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಕಾಶ್ ಶೆಟ್ಟಿ ಟಿ. ನಲ್ಯಗುತ್ತು ಸ್ವಾಗತಿಸಿದರು. ಸತೀಶ್ ಎಂ. ಶೆಟ್ಟಿ ನಲ್ಯಗುತ್ತು ಪ್ರಸ್ತಾವನೆಗೈದರು. ನವಿನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.Kinnigoli09091606

Comments

comments

Comments are closed.

Read previous post:
Kinnigoli08091605
ತೋಕೂರು ಶಿಕ್ಷಕರ ದಿನಾಚರಣೆ

ಕಿನ್ನಿಗೋಳಿ: ಶಿಕ್ಷಕರು ಸಿದ್ದತೆ, ಆದರ್ಶ, ಮಾನವೀಯತೆ, ಸೃಜನಶೀಲ ಮತ್ತು ಹಾಸ್ಯ ದಂತಹ ಪಂಚ ಗುಣಗಳನ್ನು ಹೊಂದಿದವರಾಗಬೇಕು ವಿದ್ಯಾರ್ಥಿಗಳು ಮೌಲ್ಯಯುತ ಜೀವನ ನಡೆಸಿ ಗುರುಗಳನ್ನು ಮೀರಿಸಿದ ಶಿಷ್ಯರಾಗಬೇಕು ಎಂದು ಕಾರ್ನಾಡು...

Close